ETV Bharat / city

ಬೆಳಗ್ಗೆಯಿಂದ ಸಂಜೆವರೆಗೂ ಎಣ್ಣೆ ಪಾರ್ಟಿ.. ಕುಡಿಯೋಕೆ ಅಂತಾ ಬಂದವ ಸ್ನೇಹಿತನ ಕತ್ತು ಕುಯ್ಯೋದಾ.. - drunken man attempts to kill his friend

ಪ್ರಶಾಂತ್ ಮತ್ತು ಸತೀಶ್ ಎಂಬ ಇಬ್ಬರು ಸ್ನೇಹಿತರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಆದ್ರೆ, ಇದ್ದಕ್ಕಿದ್ದಂತೆ ಅಡುಗೆ ಮನೆಗೆ ಹೋದ ಸತೀಶ್ ತರಕಾರಿ ಕತ್ತರಿಸುವ ಚಾಕು ತೆಗೆದುಕೊಂಡು ಬಂದು ಪ್ರಶಾಂತ್‌ನ ಕತ್ತು ಕುಯ್ದಿದ್ದಾನೆ. ಸದ್ಯ ಪ್ರಶಾಂತ್​ ಪ್ರಾಣಪಾಯದಿಂದ ಪಾರಾಗಿದ್ದಾನೆ..

drunken man attempts to kill his friend in Bangalore
ಕುಡಿದ ನಶೆಯಲ್ಲಿ ಕತ್ತು ಕೊಯ್ದು ಪರಾರಿಯಾದ ಗೆಳೆಯ
author img

By

Published : Feb 4, 2022, 7:46 PM IST

ನೆಲಮಂಗಲ(ಬೆಂಗಳೂರು) : ಇಬ್ಬರು ಸ್ನೇಹಿತರು ಬೆಳಗ್ಗೆಯಿಂದ ರಾತ್ರಿ 7 ಗಂಟೆಯವರೆಗೂ ಕುಡಿದಿದ್ದಾರೆ. ಇಬ್ಬರ ಡ್ರಿಂಕ್ಸ್ ಪಾರ್ಟಿ ವಿಕೋಪಕ್ಕೆ ತಿರುಗಿದೆ. ಇದ್ದಕ್ಕಿದ್ದಂತೆ ಆಡುಗೆ ಮನೆಯಿಂದ ಚಾಕು ತಂದು ಸ್ನೇಹಿತನ ಕತ್ತು ಕೊಯ್ದ ಗೆಳೆಯ ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸಿದ್ದನಹೊಸಹಳ್ಳಿಯಲ್ಲಿ ನಡೆದಿದೆ.

ಘಟನೆಯಲ್ಲಿ ಲಾರಿ ಮೆಕ್ಯಾನಿಕ್ ಪ್ರಶಾಂತ್ ಸ್ನೇಹಿತನಿಂದ ನಡೆದ ಕೊಲೆ ಯತ್ನದಲ್ಲಿ ಬಚಾವ್ ಆಗಿದ್ದಾನೆ. ಕೊಲೆ ಯತ್ನ ನಡೆಸಿದ ಸತೀಶ್ ಘಟನೆ ನಂತರ ಪರಾರಿಯಾಗಿದ್ದಾನೆ.

drunken man attempts to kill his friend in Bangalore
ಮೃತ ಪ್ರಶಾಂತ್

ಲಾರಿ ಮೆಕ್ಯಾನಿಕ್​ ಪ್ರಶಾಂತ್ ಮತ್ತು ಆಟೋ ಡ್ರೈವರ್ ಸತೀಶ್ 4 ತಿಂಗಳಿನಿಂದ ಸ್ನೇಹಿತರು. ಜನವರಿ 31ರಂದು ಸತೀಶ್ ಮದ್ಯಪಾನ ಮಾಡಲು ಪ್ರಶಾಂತ್ ಮನೆಗೆ ಬಂದಿದ್ದಾನೆ. ಬೆಳಗ್ಗೆ 11ಗಂಟೆಗೆ ಶುರುವಾದ ಇಬ್ಬರ ಎಣ್ಣೆ ಪಾರ್ಟಿ ರಾತ್ರಿ 7 ಗಂಟೆಯವರೆಗೂ ಮುಂದುವರಿದಿದೆ.

ಇದ್ದಕ್ಕಿದ್ದಂತೆ ಅಡುಗೆ ಮನೆಗೆ ಹೋದ ಸತೀಶ್, ತರಕಾರಿ ಕತ್ತರಿಸುವ ಚಾಕು ತೆಗೆದುಕೊಂಡು ಬಂದು ಪ್ರಶಾಂತನ ಕತ್ತು ಕುಯ್ದಿದ್ದಾನೆ. ಮತ್ತೊಮ್ಮೆ ಕತ್ತು ಕೊಯ್ಯುಲು ಯತ್ನಿಸಿದಾಗ ಪ್ರಶಾಂತ್ ಮನೆಯಿಂದ ಹೊರಗೆ ಓಡಿ ಬಂದಿದ್ದಾನೆ.

ಇದನ್ನೂ ಓದಿ: ದಿವ್ಯಾಂಗ ವಿದ್ಯಾರ್ಥಿಗಳಿಗೆ ಬ್ರೈಲ್ ಲಿಪಿ ಪಠ್ಯ ಪುಸ್ತಕಗಳನ್ನು ಪೂರೈಸಲು ಹೈಕೋರ್ಟ್ ಆದೇಶ

ಘಟನೆ ನಂತರ ಸತೀಶ್ ಪರಾರಿಯಾಗಿದ್ದಾನೆ. ಮನೆಯ ಹೊರಗೆ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಪ್ರಶಾಂತ್‌ನನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಶಾಂತ್​ ಪ್ರಾಣಪಾಯದಿಂದ ಪಾರಾಗಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಜನವರಿ 31ರಂದು ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.