ETV Bharat / city

ಮನೆಯಲ್ಲೇ ಮಾದಕ ಸಂಗ್ರಹಣೆ: ನೈಜೀರಿಯನ್ ಮೂಲದ ಆರೋಪಿ ಬಂಧನ - Yalahanka Police station

ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ, ನೈಜೀರಿಯಾ ಮೂಲದ ಆರೋಪಿ ಜಾನ್​ ಅಬ್ರಾಹಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Accused John and seized drugs
ಆರೋಪಿ ಜಾನ್ ಅಬ್ರಾಹಂ ಹಾಗೂ ವಶಪಡಿಸಿಕೊಂಡ ಮಾದಕವಸ್ತು
author img

By

Published : Jun 10, 2022, 10:57 AM IST

ಬೆಂಗಳೂರು: ಮಾದಕ ದಂಧೆಕೋರರ ವಿರುದ್ಧ ಬೆಂಗಳೂರು ಪೊಲೀಸರ ಸಮರ ಮುಂದುವರೆದಿದ್ದು, ಕೆ.ಜಿ.ಗಟ್ಟಲೇ ಮಾದಕ ಪದಾರ್ಥ ಸಂಗ್ರಹಿಸಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನೈಜೀರಿಯಾ ಮೂಲದ ಜಾನ್ ಅಬ್ರಾಹಂ ಎಂದು ಗುರುತಿಸಲಾಗಿದೆ.

ಯಲಹಂಕ ಠಾಣಾ ವ್ಯಾಪ್ತಿಯ ಪಾಲನಹಳ್ಳಿ ತೋಟದ ಮನೆಯಲ್ಲಿ ಮಾದಕ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಆರೋಪಿ, ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದನು. ದಂಧೆ ಕುರಿತು ಖಚಿತ ಮಾಹಿತಿಯೊಂದಿಗೆ ಆರೋಪಿ ವಾಸವಿದ್ದ ಮನೆಯ ಮೇಲೆ ದಾಳಿ ನಡೆಸಿದ ಯಲಹಂಕ ಠಾಣಾ ಪೊಲೀಸರು ಬಂಧಿತನಿಂದ 1.4 ಕೆ.ಜಿ. ಎಂಡಿಎಂಎ, 6 ಕೆ.ಜಿ. ಗಾಂಜಾ, 7 ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಪ್ರಕರಣದಲ್ಲಿ ಬಂಧಿತನಿಗೆ ಮಾದಕ ಪದಾರ್ಥ ಸರಬರಾಜು ಮಾಡುತ್ತಿದ್ದ ಚಕ್ರೆಚಾ ಎಂಬ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರೆದಿದೆ.

ಇದನ್ನೂ ಓದಿ: ಸೋಶಿಯಲ್​ ಮೀಡಿಯಾ 'ಪ್ರೇಮ' ಕೊಲೆಯಲ್ಲಿ ಅಂತ್ಯ: ನೀಟ್​ ತಯಾರಿಯಲ್ಲಿದ್ದ ಗೆಳತಿಯ ಕೊಂದ ಗೆಳೆಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.