ETV Bharat / city

ಜೋರಾಗಿ ಮಳೆ ಬಂದಿದ್ದರಿಂದ ರೋಗಿಗೆ ತುರ್ತು ಚಿಕಿತ್ಸೆ ನೀಡುವಲ್ಲಿ ವಿಳಂಬ : ವಿಕ್ಟೋರಿಯಾ ಆಸ್ಪತ್ರೆ ಸ್ಪಷ್ಟನೆ

ವೈದ್ಯಕೀಯ ವಿಭಾಗದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ, ವೈದ್ಯರು ಸಿಬ್ಬಂದಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಸರ್ಜರಿ, ಆರ್ಥೋಪೆಡಿಕ್ ವೈದ್ಯರೂ ವೈದ್ಯಕೀಯ ವಿಭಾಗದ ವೈದ್ಯರೊಂದಿಗೆ ಸಹಕರಿಸಿ ರೋಗಿಗಳ ಶುಶ್ರೂಷೆಗೆ ನೆರವಾಗಲು ತಿಳಿಸಲಾಯಿತು..

Dr. Ramesh Krishna
ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ರಮೇಶ್​ ಕೃಷ್ಣ
author img

By

Published : Oct 16, 2021, 5:09 PM IST

ಬೆಂಗಳೂರು : ನಿನ್ನೆ (ಶುಕ್ರವಾರ) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಹಾಸಿಗೆ ಸಿಗದೆ ರೋಗಿಗಳು ನರಳುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಒಂದೇ ಹಾಸಿಗೆಯಲ್ಲಿ ಇಬ್ಬರಿಗೆ ಚಿಕಿತ್ಸೆ ನೀಡಲಾಗಿತ್ತು.

ರೋಗಿಗೆ ತುರ್ತು ಚಿಕಿತ್ಸೆ ನೀಡುವಲ್ಲಿನ ವಿಳಂಬ ಕುರಿತಂತೆ ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ರಮೇಶ್​ ಕೃಷ್ಣ ಪ್ರತಿಕ್ರಿಯೆ ನೀಡಿರುವುದು..

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ಒತ್ತಾಯಿಸಿದರೂ, ತುರ್ತು ಚಿಕಿತ್ಸೆ ಅಗತ್ಯ ಇದ್ದ ರೋಗಿಗಳಿಗೆ ಚಿಕಿತ್ಸೆ ಸಿಗಲಿಲ್ಲ. ಇದಕ್ಕೆ ಇಂದು ವಿಕ್ಟೋರಿಯಾ ಆಸ್ಪತ್ರೆ ನಿರ್ದೇಶಕರು ಹಾಗೂ ಡೀನ್ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ಸಂಜೆ 5 ಗಂಟೆಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕೆಆರ್ ಎಸ್ ಪಕ್ಷದವರು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವಿಷಯ ಗಮನಕ್ಕೆ ಬಂದ ಕೂಡಲೇ ವೈದ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಗಮನಿಸಿದಾಗ ಈ ಅಂಶಗಳು ಕಂಡು ಬಂದಿವೆ.

  • ಮಳೆ ಜೋರಾಗಿ ಬರುತ್ತಿದ್ದುದ್ದರಿಂದ ಆ್ಯಂಬುಲೆನ್ಸ್ ನಿಂದ ರೋಗಿಯನ್ನು ಇಳಿಸಿಕೊಳ್ಳುವುದು ವಿಳಂಬವಾಗಿದೆ. ತಕ್ಷಣ ಎಮರ್ಜೆನ್ಸಿ ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ.
  • ವೈದ್ಯಕೀಯ ವಿಭಾಗದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ, ವೈದ್ಯರು ಸಿಬ್ಬಂದಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಸರ್ಜರಿ, ಆರ್ಥೋಪೆಡಿಕ್ ವೈದ್ಯರೂ ವೈದ್ಯಕೀಯ ವಿಭಾಗದ ವೈದ್ಯರೊಂದಿಗೆ ಸಹಕರಿಸಿ ರೋಗಿಗಳ ಶುಶ್ರೂಷೆಗೆ ನೆರವಾಗಲು ತಿಳಿಸಲಾಯಿತು.
  • ಕೆ.ಆರ್​​.ಎಸ್ ನವರು ಕ್ಯಾಷುಲಿಟಿ ಮುಂದೆ ನಿಂತು ವಿಡಿಯೋ ಮಾಡುತ್ತಿದ್ದ ಹಿನ್ನೆಲೆ ಸೆಕ್ಯುರಿಟಿಗೆ ಹೇಳಿ ತಡೆ ಹಿಡಿಯಲಾಗಿದೆ.
  • ವಿಕ್ಟೋರಿಯಾ ಎಂಪಿಬಿ ಕಟ್ಟಡದಲ್ಲಿ 45 ಹಾಸಿಗೆಗಳು ಭರ್ತಿಯಾಗಿರುವ ಹಿನ್ನೆಲೆ ಕೆಲವು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಎಂದು ಬೇರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಲಾಯಿತು.
  • ಕ್ಯಾಷುಲಿಟಿಯಲ್ಲಿ ಸಾಕಷ್ಟು ಸ್ಟ್ರೆಚರ್, ಬೆಡ್ ವ್ಯವಸ್ಥೆ ಇದ್ದರೂ ಮಳೆ ಬರುತ್ತಿದ್ದ ಕಾರಣ ವಾರ್ಡ್​ಗಳಿಗೆ ರೋಗಿಗಳನ್ನು ಸ್ಥಳಾಂತರಿಸಲು ವಿಳಂಬವಾಯಿತು‌. ಹೀಗಾಗಿ, ಹೆಚ್ಚು ಜನ ಕ್ಯಾಷುಲಿಟಿಯಲ್ಲಿ ಕಾಯುವಂತಾಯಿತು.
  • ರೋಗಿಗಳ ಶುಶ್ರೂಷೆ, ಚಿಕಿತ್ಸೆಯಲ್ಲಿ ಯಾವುದೇ ಲೋಪವಾಗಿಲ್ಲ.
  • ಆಸ್ಪತ್ರೆಯ ಟಿಸಿಸಿ ವಿಭಾಗ ಈಗ ಕೋವಿಡ್ ಆಸ್ಪತ್ರೆ ಆಗಿರುವುದರಿಂದ ಅಲ್ಲಿದ್ದ 35 ಐಸಿಯು ಬೆಡ್​​ಗಳು ನಾನ್ ಕೋವಿಡ್ ರೋಗಿಗಳಿಗೆ ಲಭ್ಯವಿಲ್ಲ‌.
  • ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದಲ್ಲಿ ಅವರಿಗೆ ಸಂಪೂರ್ಣವಾಗಿ ತುರ್ತು ಚಿಕಿತ್ಸೆ ದೊರೆಯುತ್ತದೆ.
  • ವಿಕ್ಟೋರಿಯಾ ಆಸ್ಪತ್ರೆಯ ಶತಮಾನೋತ್ಸವ ಕಟ್ಟಡದ ರ್ಯಾಂಪ್ ಗೆ ಮೇಲ್ಛಾವಣಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ.ರಮೇಶ್​ ಕೃಷ್ಣ ತಿಳಿಸಿದ್ದಾರೆ.

ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆ ಪಾಡು ಯಾರಿಗೂ ಬೇಡ: ಎಮರ್ಜೆನ್ಸಿ ವಾರ್ಡ್ ಫುಲ್- ಒಂದೇ ಬೆಡ್‌ನಲ್ಲಿ ಇಬ್ಬಿಬ್ಬರು ರೋಗಿಗಳು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.