ಬೆಂಗಳೂರು: ಕೋಳಿಗಳ ಮಾಂಸ ಸೇವನೆಯಿಂದ ಹಕ್ಕಿ ಜ್ವರ ಬರುವ ಸಾಧ್ಯತೆ ಇದೆಯಾ ಎಂಬ ಗೊಂದಲದಲ್ಲಿರುವ ಜನರು ಚಿಕನ್ ಸೇವನೆಯನ್ನೇ ಬಿಟ್ಟಿದ್ದಾರೆ. ಅಲ್ಲದೆ ಅದೆಷ್ಟೋ ಕೋಳಿಗಳನ್ನು ಜೀವಂತ ಸಮಾಧಿ ಮಾಡಿದ್ದಾರೆ.
ಸದ್ಯ ಈ ಗೊಂದಲಗಳಿಗೆ ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಬಸವರಾಜ್ ಕುಂಟೋಜಿ ಸ್ಪಷ್ಟನೆ ನೀಡಿದ್ದಾರೆ. ಹಕ್ಕಿ ಜ್ವರ ಅನ್ನೊದು ಒಂದು ರೀತಿಯ ವೈರಲ್ ಇನ್ಫೆಕ್ಷನ್. ಇದು ಹರಡೋದು ಕೇವಲ ಪಕ್ಷಿ-ಪ್ರಾಣಿಗಳಲ್ಲಿ ಮಾತ್ರ. ಸಾಮಾನ್ಯವಾಗಿ ಮನುಷ್ಯರಲ್ಲಿ ಹರಡೋದಿಲ್ಲ. ಇನ್ನು ಕೋಳಿ ಫಾರಂ ಇಟ್ಟುಕೊಂಡವರು ಅದ್ರಲ್ಲೂ ಸೋಂಕಿತ ಕೋಳಿ ಅಥವಾ ಮೊಟ್ಟೆಯ ಜೊತೆ ಹತ್ತಿರದ ಸಂಪರ್ಕ ಹೊಂದಿದ್ದರೆ ಮಾತ್ರ ಹಕ್ಕಿ ಜ್ವರ ಮನುಷ್ಯನಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಇದಕ್ಕೆ ಮುಂಜಾಗ್ರತಾ ಕ್ರಮಗಳಾಗಿ ಸೋಂಕಿತ ಹಕ್ಕಿ ಅಥವಾ ಅದರ ಮೊಟ್ಟೆಯನ್ನ ವಿಲೇವಾರಿ ಮಾಡುವುದು ಮತ್ತು ಆಗಾಗ ಕೋಳಿ ಅಥವಾ ಪಕ್ಷಿಗಳಿಗೆ ಲಸಿಕೆ ಸಿಂಪಡಿಸಿದ್ರೆ ಹಕ್ಕಿ ಜ್ವರವನ್ನ ತಡೆಗಟ್ಟಬಹುದು. ಮತ್ತು ಮನುಷ್ಯರು ಕೂಡ ಮಾತ್ರೆಗಳ ಮೂಲಕ ವ್ಯಾಕ್ಸಿನ್ ತೆಗೆದುಕೊಳ್ಳಬಹುದು ಅಂತಾರೆ.
ಓದಿ-ದೆಹಲಿ ಪ್ರತಿಭಟನೆ ವೇಳೆ ಖಡ್ಗಧಾರಿಯ ದಾಳಿ ಫೋಟೋ ವೈರಲ್: ಪೊಲೀಸ್ ಪಾರಾಗಿದ್ದು ಹೇಗೆ?
ಇನ್ನು ಸೋಂಕಿತ ಹಕ್ಕಿ, ಕೋಳಿ ಅಥವಾ ಮೊಟ್ಟೆಯನ್ನು ಸ್ಪರ್ಶಿಸಿದ ನಂತರ ಕೂಡಲೇ ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಹೆಚ್ಚಿನವರಲ್ಲಿ ನಾನ್ವೆಜ್ ಆಹಾರ ತಿಂದ್ರೆ ಹಕ್ಕಿಜ್ವರ ಬರುತ್ತೆ ಅನ್ನೋ ಭಯವಿದೆ. ಇದಕ್ಕೆ ವೈದ್ಯರು ಹೇಳುವ ಪ್ರಕಾರ, ಮಾಂಸಹಾರಿ ಆಹಾರಗಳನ್ನು ಸೇವಿಸೋದ್ರಿಂದ ಸಾಮಾನ್ಯವಾಗಿ ಹಕ್ಕಿಜ್ವರ ಬರೋದಿಲ್ಲ.
ಆದ್ರೂ ಕೂಡ ನಾನ್ವೆಜ್ ಆಹಾರ ಸೇವಿಸುವ ಮುನ್ನ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳಬೇಕಾಗುತ್ತೆ. ಉದಾಹರಣೆಗೆ ಮಾಂಸವನ್ನ ಸುಮಾರು 70° ಸೆಂಟಿಗ್ರೇಡ್ವರೆಗೆ ಬೇಯಿಸಬೇಕು ಮತ್ತು ಆದಷ್ಟು ಇವುಗಳನ್ನ ಫ್ರಿಡ್ಜ್ನಲ್ಲಿ ಇಡುವುದನ್ನ ತಡೆಯಬೇಕು. ಹೀಗೆ ಮಾಡಿದ್ರೆ ಸೋಂಕು ಹರಡುವುದು ಕಡಿಮೆ ಎನ್ನುತ್ತಾರೆ ವೈದ್ಯರು.