ಬೆಂಗಳೂರು: ಅಭಿಮಾನಗಳಲ್ಲಿ ಮನವಿ ಮಾಡುವೆ. ಯಾರೂ ಹೂವಿನ ಮಾಲೆ, ಬೊಕೆಗಳನ್ನು ತರಬೇಡಿ. ಅದಕ್ಕೆ ತಗಲುವ ವೆಚ್ಚವನ್ನು ಒಳ್ಳೆಯ ಕಾರ್ಯಕ್ಕೆ ಬಳಸಿ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ನಿಮಗೆ ನನ್ನ ಮೇಲೆ ಪ್ರೀತಿ, ಅಭಿಮಾನ ಇದ್ದೇ ಇದೆ. ಆದರೆ ಹೂವುಗಳ ಹಾರ ನನಗೆ ಆರೋಗ್ಯದ ದೃಷ್ಟಿಯಿಂದ ಅಲರ್ಜಿ. ಕಾರ್ಯಕರ್ತರು ಹಣವನ್ನು ವ್ಯರ್ಥ ಮಾಡಬೇಡಿ. ಸ್ವೀಟ್, ಕೇಕ್ ತಿನ್ನಿಸೋದು ಬೇಡ. ಅದು ಹಾನಿಕಾರಕ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಿದಕ್ಕೆ ಹೈಕಾಮಂಡ್ಗೆ ನನ್ನ ಧನ್ಯವಾದ. ಬೂತ್ ಮಟ್ಟದಿಂದ ಪಕ್ಷ ಕಟ್ಟಬೇಕಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಸಮಸ್ಯೆ ಇದೆ ಎಂದರೆ ಇದೆ. ಇಲ್ಲ ಅಂದರೆ ಇಲ್ಲ. ನನಗೆ ಯಾವುದೂ ಕಷ್ಟವಲ್ಲ. ಹೇಗೆ ಪಕ್ಷ ಕಟ್ಟುತ್ತೇನೆ ನೀವೇ ನೋಡಿ ಎಂದು ಹೇಳಿದರು.
ಇದೇ ವೇಳೆ ಹಿರಿಯ ಪತ್ರಕರ್ತ ಹಾಗೂ ತಮ್ಮ ಮಾಜಿ ಪತ್ರಿಕಾ ಕಾರ್ಯದರ್ಶಿ ವಿಜಯೇಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಆಯ್ಕೆಯಾದ ಹಿನ್ನೆಲೆಯಲ್ಲಿ ಶುಭ ಕೋರಲು ಅಭಿಮಾನಿಗಳ ದಂಡೇ ಹರಿದು ಬಂದಿದೆ.