ETV Bharat / city

'ಗೌರವ ಡಾಕ್ಟರೇಟ್' ದಂಧೆ ವಿಚಾರ: ವಿಧಾನ ಪರಿಷತ್​ನಲ್ಲಿ ಗಂಭೀರ ಚರ್ಚೆ - ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್

ಕೆಲವೊಂದಿಷ್ಟು ವಿಶ್ವವಿದ್ಯಾಲಯಗಳು ಇಂತಹ ಅಕ್ರಮ ನಡೆಸುತ್ತಿವೆ. ಅವುಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗುವುದು. ಬೇರೆ ಬೇರೆ ದೇಶದ ವಿವಿಗಳಿಂದ ಒಂದಿಷ್ಟು ಅವ್ಯವಹಾರ ಆಗಿದೆ ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ ಹೇಳಿದರು.

Vidhana parishad
ವಿಧಾನ ಪರಿಷತ್​
author img

By

Published : Dec 7, 2020, 9:26 PM IST

ಬೆಂಗಳೂರು: ವಿಧಾನ ಪರಿಷತ್​ನಲ್ಲಿ ಗೌರವ ಡಾಕ್ಟರೇಟ್ ವಿಚಾರವಾಗಿ ಗಂಭೀರ ಚರ್ಚೆ ನಡೆಯಿತು. ಸಾಕಷ್ಟು ಕಡೆ ಗೌರವ ಡಾಕ್ಟರೇಟ್ ನೀಡುವ ವಿಚಾರದಲ್ಲಿ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಗೌರವ ಡಾಕ್ಟರೇಟ್ ನೀಡುವುದನ್ನೇ ಹಲವು ವಿಶ್ವವಿದ್ಯಾಲಯಗಳು ದಂಧೆಯಾಗಿಸಿಕೊಂಡಿವೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದರೆ ಗೌರವ ಡಾಕ್ಟರೇಟ್ ಈಗಿರುವ ಗೌರವವನ್ನು ಕಳೆದುಕೊಳ್ಳುತ್ತದೆ ಎಂದು ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.

ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ, ಗೌರವ ಡಾಕ್ಟರೇಟ್ ವಿಚಾರದ ಪ್ರಸ್ತಾಪ ಮಂಡಿಸಿದರು. ಗೌರವ ಡಾಕ್ಟರೇಟ್ ನೀಡುವುದು ಉತ್ತಮ ಕಾರ್ಯ. ಆದರೆ ಅರ್ಹರನ್ನು ಗುರುತಿಸುವ ಕಾರ್ಯ ಆಗಬೇಕು. ಸಾಕಷ್ಟು ಒಳ್ಳೆಯ ವ್ಯಕ್ತಿಗಳಿಗೆ ಡಾಕ್ಟರೇಟ್ ಗೌರವ ಸಿಕ್ಕಿದೆ. ಆದರೆ ಇಲ್ಲಿ ಅನಗತ್ಯ ವ್ಯಕ್ತಿಗಳಿಗೂ ಡಾಕ್ಟರೇಟ್ ಲಭಿಸಿದೆ. ಅಂತವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವ ಕಾರ್ಯ ಆಗಬೇಕು ಎಂದು ಒತ್ತಾಯಿಸಿದರು.

ನಮ್ಮಲ್ಲಿ ಅಕ್ರಮ ಆಗಿಲ್ಲ...

ಗೌರವ ಡಾಕ್ಟರೇಟ್ ನೀಡುವ ವಿಚಾರದಲ್ಲಿ ರಾಜ್ಯದಲ್ಲಿನ ಯಾವುದೇ ವಿಶ್ವವಿದ್ಯಾಲಯದಲ್ಲಿ ಅಕ್ರಮ, ಅವ್ಯವಹಾರ ಆಗಿಲ್ಲ ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ ತಿಳಿಸಿದರು. ಕರ್ನಾಟಕದ ವಿಶ್ವವಿದ್ಯಾನಿಲಯಗಳನ್ನು ಪ್ರತಿಪಾದಿಸಿ ಮಾತನಾಡಿದ ಅವರು, ಇಲ್ಲಿ ಯಾವುದೇ ಅಕ್ರಮ ಆಗಿಲ್ಲ. ಕೆಲವೊಂದಿಷ್ಟು ವಿಶ್ವವಿದ್ಯಾಲಯಗಳು ಇಂತಹ ಅಕ್ರಮ ನಡೆಸುತ್ತಿವೆ. ಅವುಗಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗುವುದು. ಬೇರೆ ಬೇರೆ ದೇಶದ ವಿವಿಗಳಿಂದ ಒಂದಿಷ್ಟು ಅವ್ಯವಹಾರ ಆಗಿದೆ. ಇದನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಲು ಇರುವ ಅವಕಾಶ ಬಳಸಿಕೊಳ್ಳುತ್ತೇವೆ ಎಂದು ಭರವಸೆ ಇತ್ತರು.

ಸಾಕಷ್ಟು ಕಡೆ ಕಾಣುತ್ತೇವೆ. ಯಾರು ಬೇಕಾದರೂ ಡಾಕ್ಟರೇಟ್ ಪಡೆದು ಬರುತ್ತಾರೆ. ಆಟೋ ಚಾಲಕರು, , ಕ್ರಿಮಿನಲ್ ಆರೋಪಿಗಳು ಸಹ ಡಾಕ್ಟರೇಟ್ ಪಡೆದಿದ್ದಾರೆ ಎಂದು ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದರು. ಇದನ್ನು ಖಂಡಿಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಆಟೋ ರಿಕ್ಷಾ ಚಾಲಕರ ವಿಚಾರ ಬಳಕೆ ಬೇಡ. ಕಡತದಿಂದ ತೆಗೆದು ಹಾಕಿ. ಅದು ಅವರಿಗೆ ಅವಮಾನ ಮಾಡಿದಂತೆ ಎಂದರು. ಸಭಾಪತಿಗಳು ಅದನ್ನು ಪರಿಶೀಲಿಸುತ್ತೇನೆ ಎಂದರು.

ಇದನ್ನೂ ಓದಿ: ಸದನದಲ್ಲಿ ಹಳ್ಳಿಹಕ್ಕಿ ಗುಟುರು: ಮುಜುಗರಕ್ಕೀಡಾದ ಸರ್ಕಾರ

ಶ್ರಮಪಟ್ಟು ಸಾಧನೆ ಮಾಡಿದವರಿಗೆ ಡಾಕ್ಟರೇಟ್ ಬಂದಿದ್ದರೆ ಅಂತವರಿಗೆ ನೀಡಲಿ. ಆದರೆ ಲಾಬಿ ಮಾಡಿ ಪಡೆದಿದ್ದರೆ ಅಂತವರ ವಿರುದ್ಧ ತನಿಖೆ ಆಗಲಿ ಎಂದು ಸದಸ್ಯ ನಾರಾಯಣಸ್ವಾಮಿ ನಂತರ ಸಮಜಾಯಿಷಿ ನೀಡಿದರು. ಕಾಂಗ್ರೆಸ್ ಸದಸ್ಯ ಆರ್.ಧರ್ಮಸೇನಾ ಮಾತನಾಡಿ, ನನಗೆ ಒಬ್ಬರು ಡಾಕ್ಟರೇಟ್ ಕೊಡುವುದಾಗಿ ತಿಳಿದರು. ಒಪ್ಪಿದ ಮೇಲೆ 1.75 ಲಕ್ಷ ರೂ. ಕೊಡಿ ಅಂದರು. ನಾನು ಅದೆಲ್ಲ ಸಾಧ್ಯವಿಲ್ಲ. ಗೌರವ ಡಾಕ್ಟರೇಟ್ ಬೇಡ ಅಂದೆ. ಅದಕ್ಕೆ ಕೊನೆಗೆ 25 ಸಾವಿರಕ್ಕೆ ಇಳಿದರು. 50 ಸಾವಿರ ಕೊಡಿ, ನಿಮ್ಮ ಜತೆ ಇನ್ನೂ ಇಬ್ಬರಿಗೆ ಡಾಕ್ಟರೇಟ್ ಕೊಡುತ್ತೇವೆ ಎಂದರು. ಈ ರೀತಿ ಡಾಕ್ಟರೇಟ್ ನೀಡುವುದು ಸರಿಯಲ್ಲ. ಇಂತವರ ವಿರುದ್ಧ ಕ್ರಮ ಆಗಬೇಕು ಎಂದರು.

ಯುಜಿಸಿ ಮಾನ್ಯತೆ ಪಡೆದ ವಿವಿಗಳಿಂದ ಅಕ್ರಮ ಇಲ್ಲ

ಯುಜಿಸಿ ಮಾನ್ಯತೆ ಪಡೆದ ಪಟ್ಟಿಯಲ್ಲಿ ಇರುವ ಯಾವುದೇ ವಿಶ್ವವಿದ್ಯಾಲಯಗಳು ಇಂತಹ ಕೃತ್ಯ ಮಾಡುತ್ತಿಲ್ಲ. ವಿಶ್ವದಲ್ಲಿ ಮಾನ್ಯತೆ ಪಡೆದ ವಿವಿಗಳ ಪಟ್ಟಿ ನಮ್ಮ ಬಳಿ ಇದೆ. ಇದರಲ್ಲಿ ಇರದ ವಿವಿಗಳು ನಕಲಿ ಡಾಕ್ಟರೇಟ್ ನೀಡುತ್ತಿವೆ. ಇದು ಮಾನ್ಯತೆ ಹೊಂದಿಲ್ಲ. ಇಂತವರು ಡಾಕ್ಟರೇಟ್ ನೀಡುತ್ತಿದ್ದು, ಅಂತವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ. ಒಂದು ವಿವಿ ವರ್ಷಕ್ಕೆ ಕನಿಷ್ಠ ಮೂರು ಮಂದಿಗೆ ಗೌರವ ಡಾಕ್ಟರೇಟ್ ನೀಡಬಹುದು. ಆ ಬಗ್ಗೆ ಯಾವುದೇ ದೂರು ಬಂದರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಇದಾದ ಬಳಿಕ ಪ್ರಶ್ನೋತ್ತರ ಅವಧಿ ಕೇವಲ ಒಂದು ಗಂಟೆ ಕಾಲ ಮಾತ್ರ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸದನಕ್ಕೆ ವಿವರ ನೀಡಿದರು. ನಂತರ ಶೂನ್ಯ ವೇಳೆ ಚರ್ಚೆ ನಡೆಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.