ETV Bharat / city

ನಾಳೆ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಉಪಚುನಾವಣೆ ಉಸ್ತುವಾರಿಗಳ ನೇಮಕ : ಸಿಎಂ ಬೊಮ್ಮಾಯಿ - BJP Core Committee meeting news

ಶಿವಕುಮಾರ್ ಉದಾಸಿ ಪತ್ನಿಗೆ ಟಿಕೆಟ್ ನೀಡುವ ಬಗ್ಗೆ ಒತ್ತಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಹಾನಗಲ್​ನಲ್ಲಿ ಸಭೆಯಾಗಿದೆ. ನಾಳೆಯ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ‌‌‌. ಅಲ್ಲದೇ ನಾಳೆ ಸಭೆಯಲ್ಲಿ ಉಪಚುನಾವಣೆ ಉಸ್ತುವಾರಿಗಳನ್ನ ಸಹ ನೇಮಕ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು..

ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
author img

By

Published : Oct 2, 2021, 5:42 PM IST

ಬೆಂಗಳೂರು : ಉಪಸಮರ ಟಿಕೆಟ್ ಸಂಬಂಧ ನಾಳೆ‌ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಎರಡು ಕ್ಷೇತ್ರದಲ್ಲಿ ಭಾರಿ ಅಂತರದಲ್ಲಿ ಬಿಜೆಪಿ ಗೆಲುವನ್ನು ಸಾಧಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸದಾಶಿವನಗರದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಎರಡು ಉಪಚುನಾವಣೆ ಬಂದಿವೆ. ಈಗಾಗಲೇ ಬಹಳ ಸಿದ್ಧತೆ ಆಗಿದೆ. ಸಿಂದಗಿ, ಹಾನಗಲ್​ಗಳಲ್ಲಿ ಪ್ರತ್ಯೇಕ ಸಭೆ ಮಾಡಲಾಗಿದೆ.

ಜಿಲ್ಲಾ ಮುಖಂಡರ ಜತೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಲಾಗಿದೆ. ನಾಳೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಹೈಕಮಾಂಡ್​ಗೆ ಅಭ್ಯರ್ಥಿಗಳ ಪಟ್ಟಿ ಕಳಿಸಿ ಒಪ್ಪಿಗೆ ಪಡೆಯುತ್ತೇವೆ ಎಂದರು.

ಬೈ ಎಲೆಕ್ಷನ್‌ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿರುವುದು..

ನಾಳೆ ಉಪಚುನಾವಣೆ ಉಸ್ತುವಾರಿಗಳ ನೇಮಕ : ಶಿವಕುಮಾರ್ ಉದಾಸಿ ಪತ್ನಿಗೆ ಟಿಕೆಟ್ ನೀಡುವ ಬಗ್ಗೆ ಒತ್ತಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಹಾನಗಲ್​ನಲ್ಲಿ ಸಭೆಯಾಗಿದೆ. ನಾಳೆಯ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ‌‌‌. ಅಲ್ಲದೇ ನಾಳೆ ಸಭೆಯಲ್ಲಿ ಉಪಚುನಾವಣೆ ಉಸ್ತುವಾರಿಗಳನ್ನ ಸಹ ನೇಮಕ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಆತ್ಮಹತ್ಯೆ ತಡೆಯುವ ಕ್ರಮ : ಕೋವಿಡ್ ನಂತರ ಕುಟುಂಬಗಳ ಸಾಮೂಹಿಕ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಮಾನಸಿಕ ಒತ್ತಡದಿಂದ ಕುಟುಂಬಗಳಲ್ಲಿ ಆತ್ಮಹತ್ಯೆ ಪ್ರಕರಣ ನಡೆಯುತ್ತಿದೆ. ಸಮಸ್ಯೆ ತಾತ್ಕಾಲಿಕ. ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ. ಸಮಾಜದಲ್ಲಿ ಮಾನಸಿಕ ಒತ್ತಡ ಹಾಗೂ ಬೇರೆ ಕಾರಣಕ್ಕೆ ಆತ್ಮಹತ್ಯೆ ನಡೆಯುತ್ತಿವೆ. ಇದನ್ನು ತಪ್ಪಿಸುವ ಕೆಲಸ ಸಮಾಜದ ಜತೆಗೂಡಿ ಮಾಡಬೇಕು‌ ಎಂದು ಕರೆ ನೀಡಿದರು.

ಪರಿವಾರ ಅನ್ಯೋನ್ಯವಾಗಿರಬೇಕು. ಆತ್ಮಸ್ಥೈರ್ಯದಿಂದ ಹೋಗಬೇಕು. ಹಲವಾರು ಆರ್ಥಿಕ, ಸಾಮಾಜಿಕ, ಮಾನಸಿಕ ಕ್ಷೋಭೆ ಬಂದಾಗ ಕಷ್ಟ ಆಗಬಹುದು. ಎಲ್ಲ ಶಾಲೆ, ಕಾಲೇಜು, ಸಾಮಾಜಿಕ ವ್ಯವಸ್ಥೆಯಲ್ಲಿ ಆತ್ಮಹತ್ಯೆ ತಡೆಯುವ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಕಾನ್ಸ್ಟಿಟ್ಯೂಷನ್ ಕ್ಲಬ್ ಆರಂಭ ವಿಚಾರ : ಆರ್ಥಿಕ ಸಂಕಷ್ಟದ ಮಧ್ಯೆ ಕಾನ್ಸ್ಟಿಟ್ಯೂಷನ್ ಕ್ಲಬ್ ಆರಂಭ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕ್ಲಬ್ ಆರಂಭದ ಬಗ್ಗೆ ವಿಪಕ್ಷಗಳ ಆದಿಯಾಗಿ ಎಲ್ಲರೂ ಸಮ್ಮತಿ ನೀಡಿದ್ದಾರೆ. ಕ್ಲಬ್ ಬಗ್ಗೆ ಇದೇ ಮೊದಲ ಬಾರಿಗೇನೂ ಚರ್ಚೆ ಆಗಿಲ್ಲ. ಕಳೆದ ಹತ್ತು ವರ್ಷಗಳಿಂದ ಇದು ಚರ್ಚೆಯಲ್ಲಿದೆ.

ಈಗ ಎಲ್ಲ‌ ಒಪ್ಪಿಗೆ ಪಡೆದು ತೀರ್ಮಾನ ಮಾಡಿದ್ದೇವೆ. ಈಗ ತೀರ್ಮಾನ‌ ಮಾಡಿದರೆ ಈಗಲೇ ನಿರ್ಮಿಸುವುದಿಲ್ಲ. ಎಲ್ಲವನ್ನೂ ಪರಿಶೀಲಿಸಿಯೇ ಮುಂದಿನ ಹೆಜ್ಜೆ ಇಡಲಾಗುತ್ತದೆ. ಕೋವಿಡ್‌ನಿಂದ ಹಣಕಾಸು ಸಮಸ್ಯೆ ಇದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.