ಬೆಂಗಳೂರು : ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಐಪಿಎಸ್ ಹುದ್ದೆಗೇರಿದ್ದಾರೆ ಎಂಬ ಆರೋಪದ ಸಂಬಂಧ ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್ ಇ) ನೋಟಿಸ್ ನೀಡಿದೆ. ಈ ಮೂಲಕ ದಶಕಗಳ ಹಿಂದಿನ ಪ್ರಕರಣಕ್ಕೆ ಮರುಜೀವ ಸಿಕ್ಕಂತಾಗಿದೆ.
ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಐಪಿಎಸ್ ಹುದ್ದೆಗೇರಿದ್ದಾರೆ ಎಂಬ ಆರೋಪವನ್ನು ಕೆಂಪಯ್ಯ ಅವರ ಮೇಲೆ ಮಾಡಲಾಗಿತ್ತು. ಕುರುಬ ಸಮುದಾಯವರಾದ ಇವರು ಕಾಡು ಕುರುಬ ಜಾತಿ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಐಪಿಎಸ್ ಹುದ್ದೆಗಿಟ್ಟಿಸಿಕೊಂಡಿರುವುದಾಗಿ ಆರೋಪ ಕೇಳಿ ಬಂದಿತ್ತು.
ಜೊತೆಗೆ ಪರಿಶಿಷ್ಟ ಪಂಗಡ ಕೋಟಾದಡಿ ಐಪಿಎಸ್ ಹುದ್ದೆಗೆ ಏರಿರುವ ಆರೋಪವಿತ್ತು. ಈತನಕ ಕೆಂಪಯ್ಯ ಕೇಸ್ ವಿಚಾರಣೆಗೆ ಬಂದಿರಲಿಲ್ಲ. ಇದೀಗ ದಾಖಲೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಲು ಡಿಸಿಆರ್‌ಇ ಮುಂದಾಗಿದೆ. ಸೂಕ್ತ ದಾಖಲೆಯೊಂದಿಗೆ ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಕೆಂಪಯ್ಯ ಅವರಿಗೆ ಐಜಿಪಿ ಡಾ.ಪಿ ರವೀಂದ್ರ ನೋಟಿಸ್ ನೀಡಿದ್ದಾರೆ.
![Directorate of Civil Rights Enforcement issued by Notice to Retired IPS Officer](https://etvbharatimages.akamaized.net/etvbharat/prod-images/kn-bng-01-kempaiah-notice-7202806_25042022093910_2504f_1650859750_326.jpg)
ಓದಿ : ಅನ್ನದಾತ ಸುಖೀಭವ : ಮಳೆ-ಬೆಳೆ-ಸಾಲಮನ್ನಾದ ಆಸರೆ ; ರಾಜ್ಯ ರೈತರ ಆತ್ಮಹತ್ಯೆಗಳು ಇಳಿಮುಖ