ETV Bharat / city

ಮೈಸೂರು ದಸರಾ ಉದ್ಘಾಟಕರಾಗಿ ಎಸ್ ಎಂ‌ ಕೃಷ್ಣ ಆಯ್ಕೆ : ಪರ-ವಿರೋಧ ಚರ್ಚೆಗೆ ಗ್ರಾಸವಾದ ನಿರ್ಧಾರ - ಬೆಂಗಳೂರು

ಬೆಂಗಳೂರಿಗೆ ಐಟಿ ಗರಿಯನ್ನು ಇಟ್ಟು ಜಾಗತಿಕ ಮಟ್ಟದಲ್ಲಿ ಬೆಂಗಳೂರು ಹೆಸರು ವಾಸಿಯಾಗುವಂತೆ ಮಾಡುವಲ್ಲಿ ಎಸ್ ಎಂ ಕೃಷ್ಣರ ಕೊಡುಗೆ ಹೆಚ್ಚಿದೆ. ಮೂಲಸೌಕರ್ಯಗಳ ಅಭಿವೃದ್ಧಿ, ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಎಸ್ ಎಂ ಕೃಷ್ಣ ಹೊಸ ನೀತಿಗಳನ್ನು ರೂಪಿಸಿದ್ದರು. ಅವರ ಅಭಿವೃದ್ಧಿ ಪೂರಕ ನೀತಿಗಳಿಂದ ಜಗತ್ತಿನ ಪ್ರತಿಷ್ಠಿತ ಕಂಪನಿಗಳು ಬೆಂಗಳೂರಿನತ್ತ ಮುಖ ಮಾಡುವಂತೆ ಮಾಡಿದರು..

sm krishna
ಎಸ್.ಎಂ‌.ಕೃಷ್ಣ
author img

By

Published : Oct 1, 2021, 9:20 PM IST

ಬೆಂಗಳೂರು : ಅ.7ರಿಂದ ಪ್ರಾರಂಭವಾಗಲಿರುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟಕರಾಗಿ ಸರ್ಕಾರ ಎಸ್ ಎಂ ಕೃಷ್ಣರನ್ನು ಆಯ್ಕೆ ಮಾಡಿದೆ. ಕೋವಿಡ್ ಹಿನ್ನೆಲೆ ಈ ಬಾರಿಯೂ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಆದರೆ, ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಎಸ್ ಎಂ ಕೃಷ್ಣರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿರುವ ಸರ್ಕಾರದ ನಿರ್ಧಾರ ಈಗ ಪರ- ವಿರೋಧಗಳಿಗೂ ಕಾರಣವಾಗಿದೆ.

ರಾಜಕಾರಣಿ ಆಯ್ಕೆ ಮೂಲಕ ಸಂಪ್ರದಾಯ ಮುರಿದ ಸರ್ಕಾರ? : ಸಾಮಾನ್ಯವಾಗಿ ನಾಡಹಬ್ಬ ದಸರಾ ಉದ್ಘಾಟಕರಾಗಿ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಹೋರಾಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ, ಈ ಬಾರಿ ರಾಜಕಾರಣಿಯೊಬ್ಬರನ್ನು ಆಯ್ಕೆ ಮಾಡಿರುವುದು ಅಚ್ಚರಿ ‌ಮೂಡಿಸಿದೆ. ಆ ಮೂಲಕ ಬಿಜೆಪಿ ಸರ್ಕಾರ ಸಂಪ್ರದಾಯ ಮುರಿದಿದೆ ಎಂಬ ಮಾತು ಬಲವಾಗಿ ಕೇಳಿ ಬಂದಿವೆ.

ಎಸ್ ಎಂ ಕೃಷ್ಣ ಕೇವಲ ಸಿಎಂ ಆಗಿದ್ದವರು ಮಾತ್ರವಲ್ಲ, ರಾಜ್ಯಕ್ಕೆ ಅವರ ಯೋಗದಾನ ಬಹಳ ಇದೆ. ಅವರು ಹಲವು ಉತ್ತಮ ಸೇವೆಗಳನ್ನು ಮಾಡಿದ್ದಾರೆ. ಎಸ್ ಎಂ ಕೃಷ್ಣ ಒಬ್ಬ ಮುತ್ಸದ್ಧಿ ರಾಜಕಾರಣಿಯಾಗಿದ್ದಾರೆ. ಹೀಗಾಗಿ, ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಮೂಲತಃ ಮದ್ದೂರಿನವರಾದ ಎಸ್ ಎಂ ಕೃಷ್ಣ ಅವರನ್ನು ದಸರಾ ಹಬ್ಬದ ಉದ್ಘಾಟಕರಾಗಿ ಆಯ್ಕೆ‌ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ಬಿಜೆಪಿ ಸರ್ಕಾರ ನಾಂದಿ ಹಾಡಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದರ ಮಧ್ಯೆ ರಾಜಕೀಯ ಕಾರಣ ಕೂಡ ಕೇಳಿ ಬರುತ್ತಿದೆ. ಎಸ್ ಎಂ ಕೃಷ್ಣ ಹಳೆ ಮೈಸೂರು ಭಾಗದವರಾಗಿದ್ದಾರೆ. ಆ ಭಾಗದಲ್ಲಿ ದುರ್ಬಲವಾಗಿರುವ ಬಿಜೆಪಿ ನೆಲೆ ಕಂಡುಕೊಳ್ಳಲು ಎಸ್ ಎಂ ಕೃಷ್ಣರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಲಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಮಾಜಿ ಸಿಎಂ ಎಸ್ ಎಂ ಕೃಷ್ಣರ ಗಣನೀಯ ಕೊಡುಗೆ : ಎಸ್.ಎಂ.ಕೃಷ್ಣ ಸಿಎಂ ಆಗಿದ್ದ ವೇಳೆ ಗಣನೀಯ ಕೊಡುಗೆ ನೀಡಿದ್ದಾರೆ. ರಾಜ್ಯವನ್ನು ಅದರಲ್ಲೂ ಬೆಂಗಳೂರಿಗೆ ಐಟಿ ಸಿಟಿ ಎಂಬ ಹೆಗ್ಗಳಿಕೆ ಬರಲು ಎಸ್.ಎಂ.ಕೃಷ್ಣರ ಪಾತ್ರ ಅಪಾರವಾಗಿದೆ. ಹೀಗಾಗಿ, ನಾಡಹಬ್ಬ ದಸರಾ ಉದ್ಘಾಟನೆಗೆ ಎಸ್ ಎಂ ಕೃಷ್ಣ ಸೂಕ್ತ ವ್ಯಕ್ತಿ ಎಂಬ ವಾದವೂ ಕೇಳಿ ಬರುತ್ತಿದೆ.

ಸಭ್ಯತೆ, ಸಜ್ಜನಿಕೆ, ತಾಳ್ಮೆಯ ಎಸ್.ಎಂ.ಕೃಷ್ಣ ತಮ್ಮ ರಾಜಕೀಯ ಜೀವನದಲ್ಲಿ ಯಾವತ್ತೂ ಮೇಲುಸ್ತರ ಕಾಪಾಡಿಕೊಂಡವರು. ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ಸತತ ಬರ, ನಟ ರಾಜ್ ಕುಮಾರ್ ಅಪಹರಣ, ಕಾವೇರಿ ಗಲಾಟೆ ಸೇರಿ ಹತ್ತು ಹಲವು ಸಂಕಷ್ಟಗಳನ್ನು ಎದುರಿಸಿದ್ದರು.

ಅದೆನ್ನೆಲ್ಲವನ್ನೂ ಮೆಟ್ಟಿ ನಿಂತು ಕರ್ನಾಟಕವನ್ನು ಅದರಲ್ಲಿಯೂ ಬೆಂಗಳೂರನ್ನು ವಿಶ್ವ ಭೂಪಟದಲ್ಲಿ ತಿರುಗಿ ನೋಡುವಂತೆ ಮಾಡುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂಬ ಪರವಾದ ಮಾತುಗಳೂ ಒಂದು ವಲಯದಿಂದ ಬಲವಾಗಿ ಕೇಳಿ ಬರುತ್ತಿವೆ.

ಬೆಂಗಳೂರಿಗೆ ಐಟಿ ಗರಿಯನ್ನು ಇಟ್ಟು ಜಾಗತಿಕ ಮಟ್ಟದಲ್ಲಿ ಬೆಂಗಳೂರು ಹೆಸರು ವಾಸಿಯಾಗುವಂತೆ ಮಾಡುವಲ್ಲಿ ಎಸ್ ಎಂ ಕೃಷ್ಣರ ಕೊಡುಗೆ ಹೆಚ್ಚಿದೆ. ಮೂಲಸೌಕರ್ಯಗಳ ಅಭಿವೃದ್ಧಿ, ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ಎಸ್ ಎಂ ಕೃಷ್ಣ ಹೊಸ ನೀತಿಗಳನ್ನು ರೂಪಿಸಿದ್ದರು. ಅವರ ಅಭಿವೃದ್ಧಿ ಪೂರಕ ನೀತಿಗಳಿಂದ ಜಗತ್ತಿನ ಪ್ರತಿಷ್ಠಿತ ಕಂಪನಿಗಳು ಬೆಂಗಳೂರಿನತ್ತ ಮುಖ ಮಾಡುವಂತೆ ಮಾಡಿದರು.

ನೂರಾರು ಸಾಫ್ಟ್‌ವೇರ್‌ ಕಂಪನಿಗಳು ಬೆಂಗಳೂರನ್ನು ಅರಸಿಕೊಂಡು ಬರುವಂತೆ ಮಾಡಿ ಲಕ್ಷಾಂತರ ಉದ್ಯೋಗ ಸೃಷ್ಟಿಸಿದರು. ಕರ್ನಾಟಕ ಇಂದು ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡುವಲ್ಲಿ ಎಸ್ ಎಂ ಕೃಷ್ಣ ಪಾತ್ರ ಅಪಾರವಾಗಿದೆ. ಹೀಗಾಗಿ, ನಾಡಹಬ್ಬ ದಸರಾಗೆ ಅವರನ್ನು ಉದ್ಘಾಟಕರಾಗಿ ಆಯ್ಕೆ ಮಾಡಿರುವುದು ಉತ್ತಮ ನಿರ್ಧಾರ ಎಂಬ ವಾದವೂ ಸಮ ಬಲವಾಗಿ ಕೇಳಿ ಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.