ETV Bharat / city

ವಿಧಾನ ಪರಿಷತ್​​ನಲ್ಲಿ ಎನ್ಇಪಿ ಸದ್ದು.. ಆಡಳಿತ -ಪ್ರತಿಪಕ್ಷದ ನಡುವೆ ಪರ ವಿರೋಧ ಚರ್ಚೆ - bangalore latest news

ರಾತ್ರಿ ನಂತರವೂ ವಿಧಾನ ಪರಿಷತ್​ನಲ್ಲಿ ಎನ್ಇಪಿ ಚರ್ಚೆ ಮುಂದುವರೆದಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಾದ ಪರ ವಿರೋಧದ ಭಾರಿ ಚರ್ಚೆ ನಡೆಯಿತು.

deep debate about NEP between party's
ವಿಧಾನ ಪರಿಷತ್​​ನಲ್ಲಿ ಎನ್ಇಪಿ ಭಾರಿ ಚರ್ಚೆ
author img

By

Published : Sep 24, 2021, 6:54 AM IST

ಬೆಂಗಳೂರು: ರಾತ್ರಿ ನಂತರವೂ ವಿಧಾನ ಪರಿಷತ್​ನಲ್ಲಿ ಎನ್ಇಪಿ ಚರ್ಚೆ ಮುಂದುವರೆದಿತ್ತು. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಕಾಂಗ್ರೆಸ್​ನ ಬಿಕೆ ಹರಿಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದರು. ವಿಧಾನ ಪರಿಷತ್​ನಲ್ಲಿ, ನಿಯಮ 330ರ ಮೇಲೆ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಹಿಂಬಾಗಿಲಿನಿಂದ ಬರುವ ಕೆಲಸ. ಕಾಂಗ್ರೆಸ್​ನ ನಿಲುವು ತ್ರಿಭಾಷಾ ಸೂತ್ರ. ಮಾತೃಭಾಷೆ, ಹಿಂದಿ, ಇಂಗ್ಲಿಷ್ ಇರಬೇಕು ಅನ್ನೋದು ನಮ್ಮ ನಿಲುವು.

ಮಾಜಿ ಪ್ರಧಾನಿ ಜವಾಹರ​​ಲಾಲ್ ನೆಹರು ಅವರು ಕೂಡ ಅದನ್ನೇ ಅನುಷ್ಠಾನ ಮಾಡಿದ್ರು. ರಾಷ್ಟ್ರೀಯ ಶಿಕ್ಷಣ ನೀತಿ ತಂಡ ಉತ್ತರ ಭಾರತದ ರಾಜ್ಯಗಳಿಗೆ ಭೇಟಿಯೇ ಕೊಟ್ಟಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಆರ್​ಎಸ್​ಎಸ್. ಅಂಗ ಸಂಸ್ಥೆಗಳ ಜೊತೆ ಚರ್ಚೆ ಮಾಡಿದೆ. ಈ ನೀತಿಯಲ್ಲಿ ಕೆಲ ಸಂಘಟನೆಗಳ ಹಸ್ತಕ್ಷೇಪ ಕಾಣುತ್ತಿದೆ. ಕಸ್ತೂರಿ ರಂಗನ್ ಹೊರತು ಪಡಿಸಿ ಉಳಿದ ಸದಸ್ಯರು RSS ಮೂಲ, ರಾಜಕೀಯ ಮೂಲದಿಂದ ಬಂದವರು. ಈ ನೀತಿ ಹಿಂದೆ ಖಾಸಗೀಕರಣ ಮಾಡುವ ಹುನ್ನಾರವಿದೆ ಎಂದು ಆರೋಪಿಸಿದರು.

ಕರಾಳ ನೀತಿ:

ಸಂವಿಧಾನ ವಿರೋಧಿ, ಒಕ್ಕೂಟ ವ್ಯವಸ್ಥೆಗೆ ವಿರೋಧವಾಗಿ ಬಿಜೆಪಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಿದೆ. ಕೊರೊನಾ ಸಮಯದಲ್ಲಿ ಜನ ಮನೆಯಲ್ಲಿ ಇದ್ದಾಗ ಬಿಜೆಪಿ ಕರಾಳ ಕಾನೂನು, ಕರಾಳ ನೀತಿ ಜಾರಿಗೆ ತಂದಿದೆ. ಕಸ್ತೂರಿ ರಂಗನ್ ಮುಖ ಇಟ್ಟುಕೊಂಡು ಬಿಜೆಪಿ ಇಂತಹ ನೀತಿ ಜಾರಿಗೆ ತಂದಿದೆ. ಹಿಂದಿನ ಶಿಕ್ಷಣ ನೀತಿಯಲ್ಲಿ ಎಲ್ಲ ವರ್ಗದ, ಸಮುದಾಯಗಳಿಗೆ ಸಮಾನತೆ ಇತ್ತು.

ಆದರೆ ಹೊಸ ನೀತಿಯಲ್ಲಿ ಹಿಂದುಳಿದ, ದಲಿತ ವರ್ಗಕ್ಕೆ ಯಾವುದೇ ಭದ್ರತೆ ಇಲ್ಲ. ಉಚಿತ ಕಡ್ಡಾಯ ಶಿಕ್ಷಣ ಕೂಡ ಎನ್ಇಪಿಯಲ್ಲಿ ಪ್ರಸ್ತಾಪ ಆಗಿಲ್ಲ. ಈ ಶಿಕ್ಷಣ ನೀತಿಯಿಂದ ರಾಜ್ಯದ ಅಧಿಕಾರ ಕಿತ್ತುಕೊಳ್ಳುವ ಹುನ್ನಾರ ಕೇಂದ್ರ ಮಾಡಿದೆ ಎಂದರು.

ತರಾತುರಿಯಲ್ಲಿ ನೀತಿ ಜಾರಿಗೆ ತರುವ ಪ್ರಯತ್ನ:

ರಾಜೀವ್ ಗಾಂಧಿ ಶಿಕ್ಷಣ ನೀತಿ ಅನುಷ್ಠಾನ ಮಾಡುವಾಗ ಎಲ್ಲ ವಿಭಾಗದ ತಜ್ಞರು ಇದ್ದರು. ಆದರೆ ಹೊಸ ನೀತಿಯಲ್ಲಿ ಇಂತಹ ಪ್ರಯತ್ನಗಳು ಆಗಿಲ್ಲ. ಹೊಸ ನೀತಿ ತರುವಾಗ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಜೊತೆ ಚರ್ಚೆ ಆಗಿಲ್ಲ. ಯಾರ ಜೊತೆ ಚರ್ಚೆ ಮಾಡಲಾಗಿದೆ ಅಂತ ಎಲ್ಲೂ ಹೇಳಿಲ್ಲ. ಕ್ರಿಶ್ಚಿಯನ್ ಮತ್ತು ಮುಸ್ಲಿಂ ಕಾಲೇಜುಗಳು ಇದನ್ನು ಪಾಲನೆ ಮಾಡಬೇಕು ಅಂತ ಹೇಳಲಾಗಿದೆ.

ಯುಜಿಸಿ ಮುಚ್ಚಿ ಏಕರೂಪದ ಕೇಂದ್ರ ವ್ಯವಸ್ಥೆ ಜಾರಿ ಮಾಡೋ ಹುನ್ನಾರ ಇದರಲ್ಲಿ ಇದೆ. ಸರ್ಕಾರ ತರಾತುರಿಯಲ್ಲಿ ನೀತಿ ಜಾರಿಗೆ ತರಲು ಮುಂದಾಗಿದೆ. ಶಿಕ್ಷಣ ಸಂಸ್ಥೆಗಳು, ಪೋಷಕರು, ವಿದ್ಯಾರ್ಥಿಗಳು ಇನ್ನು ಸಿದ್ಧವಾಗಿಲ್ಲ. ಕನಿಷ್ಠ ಸಿದ್ಧತೆಗಳನ್ನ ಸರ್ಕಾರ ಮಾಡಿಲ್ಲ. ಮಕ್ಕಳನ್ನು ಬಲಿಪಶು ಮಾಡೋ ಕೆಲಸ ಕೇಂದ್ರ ಸರ್ಕಾರ ಮಾಡಿದೆ.

ಹಿಂದಿ ಹೇರಿಕೆ:

ದೆಹಲಿಯಲ್ಲಿ ಈ ನೀತಿ ಫೈಲ್​​ ಆಗಿದೆ. ಈಗ ಇದನ್ನು ಜಾರಿ ಮಾಡಲು ಮುಂದಾಗಿದ್ದಾರೆ. ವ್ಯಾಪಾರ ಮಾಡೋರಿಗೆ ಶಿಕ್ಷಣ ನೀಡಲು ಕೇಂದ್ರ ಮುಂದಾಗಿದೆ. 19 ಸಾವಿರ ಭಾಷೆ ಇರುವ ದೇಶದಲ್ಲಿ ಹಿಂದಿ ಹೇರಿಕೆ ಮಾಡೋ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ಶಿಕ್ಷಣ ನೀತಿಯಲ್ಲಿ ಹಿಂದಿ ಹೇರುವ ಕೆಲಸ ಆಗ್ತಿದೆ ಎಂದರು.

ಯುನಿವರ್ಸಲ್ ಎಜುಕೇಶನ್​ಗೆ ಈ ನೀತಿ ವಿರುದ್ಧ:

ಯುನಿವರ್ಸಲ್ ಎಜುಕೇಷನ್​ಗೆ ಈ ನೀತಿ ವಿರುದ್ದವಾಗಿದೆ. ತರಗತಿ ವಿಭಾಗ ಪದ್ಧತಿಯೂ ಕೂಡಾ ಗೊಂದಲಮಯವಾಗಿದೆ. ಹೊಸ ಶಿಕ್ಷಣ ನೀತಿ ಜಾರಿಗೆ ಸರಿಯಾಗಿ ಮೂಲ ಸೌಕರ್ಯಗಳೇ ಇಲ್ಲ. ಇದೊಂದು ಘಾತುಕ ಶಿಕ್ಷಣ ನೀತಿ. ಮಕ್ಕಳಿಗೆ ಈ ನೀತಿ ಯಾವುದೇ ರೀತಿಯಾಗಿ ಒಳ್ಳೆಯದು ಮಾಡಲ್ಲ. ಈ ಶಿಕ್ಷಣ ನೀತಿಯನ್ನು ಸಂಸತ್​ನಲ್ಲಿ ಮೊದಲು ಚರ್ಚೆ ಮಾಡಬೇಕು. ಆದಾದ ಬಳಿಕ ರಾಜ್ಯಗಳಲ್ಲಿ ಚರ್ಚೆ ಆಗಬೇಕಿತ್ತು.

ಆರ್​​ಎಸ್​ಎಸ್​​ ಸಂಘಟನೆಗಳ ಜೊತೆ ಚರ್ಚೆ ಮಾಡಿದ್ದಾರೆ. ಆರ್​​ಎಸ್​​ಎಸ್ ರಿಜಿಸ್ಟ್ರಾರ್​​ ಸಂಸ್ಥೆ ಅಲ್ಲ. ಅದಕ್ಕೆ ಅಕೌಂಟೆಬಿಲಿಟಿ ಇದ್ಯಾ? ಏನಾದರೂ ಆದರೆ ಅವರನ್ನು ಕೇಳೋಕೆ ಆಗಲ್ಲ. ಸಂಘ ಪರಿವಾರದ ಸಿದ್ಧಾಂತ ತುಂಬಲು ಬಿಜೆಪಿ ಮುಂದಾಗಿದೆ. ಮಕ್ಕಳಲ್ಲಿ ಸಂಘ ಪರಿವಾರದ ಸಿದ್ಧಾಂತ ತುಂಬಲು ಹೊರಟಿದ್ದಾರೆ . ಈ ಶಿಕ್ಷಣ ನೀತಿಗೆ ನಮ್ಮ ವಿರೋಧ ಇದೆ. ಈ ಹೊಸ ನೀತಿಯಲ್ಲಿ ಎಸ್ಎಸ್ಎಲ್​​ಸಿ ಪರೀಕ್ಷೆ ಇರುತ್ತೋ ಇರಲ್ವೋ ಗೊತ್ತಿಲ್ಲ. ಒಟ್ಟಾರೆ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಮ್ಮ ವಿರೋಧ ಇದೆ ಎಂದರು.

ಗದ್ದಲ ವಾತಾವರಣ:

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತಿನ ವೇಳೆ ಗದ್ದಲ ನಡೆಯಿತು. ರಾಜ್ಯದಲ್ಲಿ ಶಿಕ್ಷಣ ನೀತಿ ಜಾರಿ ಮಾಡುವ ಟಾಸ್ಕ್ ಫೋರ್ಸ್ ಕಮಿಟಿ ಮೇಲೆ ನನಗೆ ಅನುಮಾನ ಇದೆ. ಒಂದು ಸಂಘಟನೆ ಪರವಾದ, ಸಂಘಟನೆಗೆ ಸಹಕಾರ ನೀಡುವ ಕಮಿಟಿ ಇದೆ. ಹೊಸ ನೀತಿಯಲ್ಲಿ 10 ವರ್ಷಗಳ ಬಳಿಕ ಎಲ್ಲ ಕಾಲೇಜುಗಳಿಗೆ ಸ್ವಾಯತ್ತತೆ ಕೊಡುತ್ತೇವೆ ಅಂತಿದ್ದಾರೆ.

ಹೀಗೆ ಮಾಡೋದ್ರಿಂದ ಸರ್ಕಾರಿ ವಿವಿಗಳು, ಕಾಲೇಜುಗಳು ಮುಚ್ಚಿಕೊಂಡು ಹೋಗುತ್ತವೆ. ಈ ಹೊಸ ನೀತಿಯಲ್ಲಿ ಬಡವರ ಮಕ್ಕಳನ್ನ, ಶೂದ್ರರ ಮಕ್ಕಳನ್ನ ಶಿಕ್ಷಣದಿಂದ ಡ್ರಾಪ್ ಔಟ್ ಮಾಡುವ ಹುನ್ನಾರ ಇದೆ. ಈ ಹೊಸ ನೀತಿ ಶೂದ್ರ ಜನಾಂಗದ ಮೇಲೆ ದೊಡ್ಡ ಪರಿಣಾಮ ಬೀರುತ್ತೆ ಎಂದರು.

ಮರಿತಿಬ್ಬೇಗೌಡ ಮಾತಿನಿಂದ ಕೆರಳಿದ ಬಿಜೆಪಿಯ ರವಿಕುಮಾರ್, ಎಸ್ ವಿ ಸಂಕನೂರು, ಅರುಣ್ ಶಹಾಪುರ್ ಶೂದ್ರ ಮಕ್ಕಳ ಹೆಸರಲ್ಲಿ ರಾಜಕೀಯ ಮಾಡ್ತಿದ್ದಾರೆ, ಎನ್ಇಪಿಯಲ್ಲಿ ಇಲ್ಲದಿರುವ ವಿಚಾರಗಳನ್ನು ಎಳೆದು ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯ ನಜೀರ್ ಅಹ್ಮದ್, ಶ್ರೀಕಂಠೇಗೌಡ ಸಹ ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರವಾಗಿ ಮಾತನಾಡಿದರು.

ಸಚಿವರ ಉತ್ತರ:

ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಉತ್ತರ ನೀಡಿ, ಪ್ರಧಾನಿ ನರೇಂದ್ರ ಮೋದಿ ಅವರು 36 ವರ್ಷದಿಂದ ನಿಂತ ನೀರಾಗಿದ್ದ ಶಿಕ್ಷಣ ವ್ಯವಸ್ಥೆಗೆ ಬದಲಾವಣೆ ತರಲು ಮುಂದಾದರು. ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣ ನೀಡಲು ಮುಂದಾದರು. ಎಲ್ಲ ರಾಜ್ಯದ ವಿಜ್ಞಾನಿ, ಎಲ್ಲ ಪಕ್ಷದ ನಾಯಕರ ಜೊತೆ ಚರ್ಚಿಸಿ ರೂಪುರೇಷೆ ಹೆಣೆದೇ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ರೂಪುಗೊಂಡಿರುವ ಸಮಿತಿಯಲ್ಲಿರುವ ಪದಾಧಿಕಾರಿಗಳು ಸಹ ಸಾಕಷ್ಟು ಅನುಭವಿಗಳು. ಎಲ್ಲ ಜಾತಿ, ಜನಾಂಗ, ಧರ್ಮದವರನ್ನು ವಿಶ್ವಾಸಕ್ಕೆ ಪಡೆದೇ ರಚಿಸಲಾಗಿದೆ ಎಂದರು.

ಈ ವಿಚಾರದಲ್ಲಿ ಇರುವ ಗೊಂದಲ ನಿವಾರಣೆಗೆ ಪರಿಷತ್ ಸದಸ್ಯರ ಜತೆ ಒಂದು ಸಭೆ ಸೇರಿ. ದಿನಾಂಕ ನಿಗದಿಪಡಿಸಿ ಚರ್ಚೆ ಮಾಡಿ ಒಮ್ಮತದ ಅಭಿಪ್ರಾಯ ಸಂಗ್ರಹಿಸಿ ಎಂದು ಸಭಾಪತಿಗಳು ಸಲಹೆ ನೀಡಿದರು. ಸಚಿವರು ಮಾತನಾಡಿ, ಈಗಾಗಲೇ ಮೂರು ಸಭೆ ನಡೆದಿದೆ. ಅಲ್ಲದೇ ವಿವಿಧ ಸಂದರ್ಭದಲ್ಲಿ ವಿವಿಧ ಚರ್ಚೆಯಲ್ಲಿ ಪ್ರಸ್ತಾಪ ಆಗಿದೆ ಎಂದು ವಿವರಿಸಲು ಮುಂದಾದಾಗ ಮತ್ತೆ ಗದ್ದಲ ಉಂಟಾಯಿತು.

ಚರ್ಚೆಗೆ ಸಿದ್ಧ ಎಂದ ಸಿಎಂ:

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾತನಾಡಿ, ಕಾಲ ಬದಲಾಗಿದೆ. ಪೈಪೋಟಿ ಹೆಚ್ಚಾಗಿದೆ. ದೇಶದ ಮಕ್ಕಳು ವಿದೇಶಗಳ ಜೊತೆ ಸ್ಫರ್ಧೆ ಎದುರಿಸಬೇಕು. ಅದನ್ನು ನಾವು ಒಪ್ಪಿದ್ದೇವೆ, ಆದರೆ ಸಜ್ಜಾಗಬೇಕಿದೆ. ಅದಕ್ಕಾಗಿ ಈ ರಾಷ್ಟ್ರೀಯ ಶಿಕ್ಷಣ ನೀತಿ ತರಲು ಮುಂದಾಗಿದ್ದೇವೆ. ಉತ್ತಮ ಕೆಲಸಕ್ಕೆ ಮುಂದಾದಾಗ ವಿರೋಧ ಬರಲಿದೆ. ಚರ್ಚೆಗೆ ನಾವು ಸಿದ್ಧ. ಒಂದು ಹಂತದ ಚರ್ಚೆ ಬರುತ್ತದೆ.

ಯಾವುದೇ ವಿಧದ ಚರ್ಚೆಗೆ ಸರ್ಕಾರ ಸಿದ್ಧ. ಚರ್ಚೆ ಆದಷ್ಟೂ ಜನರಿಗೆ ಮಾಹಿತಿ ಸಿಗಲಿದೆ. ನಮ್ಮ ಮಕ್ಕಳನ್ನು ಅಂತಾರಾಷ್ಟ್ರೀಯ ಪೈಪೋಟಿಗೆ ಸಜ್ಜುಗೊಳಿಸಲು ನಾವು ಸಿದ್ಧವಿದ್ದು ಉತ್ತಮ ಸಲಹೆಯನ್ನು ಸದಾ ಸ್ವೀಕರಿಸಲು ಸಿದ್ಧ. ಚರ್ಚೆ ಆಗಲಿ ಎಂದರು. ಪ್ರಮುಖ ನಾಲ್ಕೈದು ಮಂದಿ ಜತೆ ಚರ್ಚಿಸಿ ಸಲಹೆ ಸ್ವೀಕರಿಸಿ ಮಾಹಿತಿ ನೀಡಿ ಎಂದು ಸಲಹೆ ಇತ್ತರು. ಬಿ.ಕೆ. ಹರಿಪ್ರಸಾದ್, ಮರಿತಿಬ್ಬೇಗೌಡ ರು ಇದನ್ನು ಬೆಂಬಲಿಸಿದರು. ಸಭಾಪತಿಗಳು ಸಹ ಅದೇ ಸಲಹೆ ನೀಡಿದರು.

ಅಶ್ವತ್ಥ ನಾರಾಯಣ ಮತ್ತೊಂದು ಸಭೆ ನಡೆಸಿ ಈ ವಿಚಾರವನ್ನು ಇನ್ನಷ್ಟು ಮುಂದುವರೆಸಲು ಇಚ್ಛಿಸಲಿಲ್ಲ. ಈ ಹಿನ್ನೆಲೆ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ, ಮೊದಲು ಹಣಕಾಸು ವಿದೇಯಕ ಮಂಡಲನೆ ಆಗಲಿ, ಆಮೇಲೆ ಈ ಚರ್ಚೆ ಮುಂದುವರೆಯಲಿ ಎಂದು ಅಭಿಪ್ರಾಯ ಪಟ್ಟರು. ವಿವಿಧ ವಿದೇಯಕಗಳ ಅನುಮೋದನೆ ನಂತರ ರಾತ್ರಿ 11.30ರ ಬಳಿಕ ಎನ್ಇಪಿ ಜಾರಿ ಬಗ್ಗೆ ಪರಿಷತ್ ನಲ್ಲಿ ಚರ್ಚೆ ಮುಂದುವರೆಯಿತು.

ಅಶ್ವತ್ಥ ನಾರಾಯಣ ಪ್ರತಿಕ್ರಿಯೆ:

ಕಾಂಗ್ರೆಸ್ ಹರಿಪ್ರಸಾದ್, ನಜೀರ್ ಅಹಮದ್ ಎತ್ತಿದ್ದ ಪ್ರಶ್ನೆಗೆ ಸಚಿವ ಅಶ್ವತ್ಥ ನಾರಾಯಣ ಉತ್ತರ ನೀಡಿ, ಕಸ್ತೂರಿ ರಂಗನ್ ಬಗ್ಗೆ ಹಗುರುವಾಗಿ ಮಾತನಾಡುವುದು ಸರಿಯಲ್ಲ. ಅವರನ್ನು ಮುಖವಾಡ ಅಂತ ಹೇಳಿದ್ರಿ, ಅದು ತಪ್ಪು. ಸಂವಿಧಾನದ ವಿರುದ್ಧ ಯಾವುದೇ ಕಾನೂನು ತರಲು ಸಾಧ್ಯವಿಲ್ಲ. ಈಗಿರುವ ಯಾವ ಕಾರ್ಯಕ್ರಮವನ್ನು ತಗೆದುಹಾಕುವುದಿಲ್ಲ, ಎಲ್ಲ ಕಾರ್ಯಕ್ರಮಗಳು ಮುಂದುವರೆಯಲಿದೆ.

ಕೋವಿಡ್ ಸಮಯದಲ್ಲಿ ಜಾರಿಗೆ ತಂದ್ರು ಅಂತ ಆರೋಪ ಮಾಡಿದ್ದಾರೆ. ಆದರೆ, ಜನರ ಬಳಿ ಸಮಾಲೋಚನೆ ಮಾಡುವ ಸಂಧರ್ಭದಲ್ಲಿ ಯಾವುದೇ ಕೋವಿಡ್ ಇರಲಿಲ್ಲ. ಕ್ಯಾಬಿನೆಟ್​ನಲ್ಲಿ ಘೋಷಣೆ ಮಾಡುವುದಕ್ಕೆ ಕೊರೊನಾ ಹೇಗೆ ಅಡ್ಡಿಯಾಗುತ್ತದೆ. ಅಂದು ಕಾಂಗ್ರೆಸ್​ನ ಕಪಿಲ್ ಸಿಬಲ್ ಅವರೇ ಒನ್ ನೇಷನ್ ಒನ್ ಸಿಲಬಸ್ ಅಂತ ಹೇಳಿದ್ರು. ಇದರಲ್ಲಿ ಯಾವುದೇ ತೊಂದರೆ ಇಲ್ಲ. ಇದರಲ್ಲಿ ಯಾರಿಗೂ ಅನ್ಯಾಯವಾಗಿರುವುದಿಲ್ಲ.

ಇದರಲ್ಲಿ ಯಾವುದೇ ರೀತಿಯಲ್ಲಿ ಹಿಂದಿ ಹೇರಿಕೆ ಬಗ್ಗೆ ಉಲ್ಲೇಖವಿಲ್ಲ. ಯಾವುದಾದರೂ ಎರಡು ಭಾಷೆ ತೆಗೆದುಕೊಳ್ಳಬಹುದು. ಈವರೆಗೂ ಕನ್ನಡ ಕಡ್ಡಾಯ ಇರಲಿಲ್ಲ. ಆದರೆ ಈಗ ಎರಡು ವರ್ಷ ಕನ್ನಡ ಕಡ್ಡಾಯ ಮಾಡಿದ್ದೀವಿ. ಈ ನೀತಿಯಲ್ಲಿ ನಮ್ಮ ಭಾಷೆಗೆ ಆದ್ಯತೆ ಇದೆ. ಹಿಂದಿ ಹೇರಿಕೆ ಮಾಡಿದವರು ಕಾಂಗ್ರೆಸ್​​ನವರು, ನಾವಲ್ಲ. ಸರ್ಕಾರಿ ಕಾಲೇಜುಗಳಲ್ಲಿ ಲರ್ನಿಂಗ್ ಡೆವಲಪ್ಮೆಂಟ್ ಇಂಪ್ರೂವ್​​ಮೆಂಟ್ ಮಾಡ್ತಾ ಇದ್ದೇವೆ ಎಂದರು.

ಇದನ್ನೂ ಓದಿ: ಮೇಲ್ಮನೆಯಲ್ಲಿ ಪೊಲೀಸ್ ತಿದ್ದುಪಡಿ ವಿಧೇಯಕ ಸೇರಿದಂತೆ ಹಲವು ಬಿಲ್ ಪಾಸ್

ಈ ಮಧ್ಯೆ ಮಧ್ಯಪ್ರವೇಶಿದ ಯುಬಿ ವೆಂಕಟೇಶ್, ಯಾಕೋ ಸಚಿವರಿಗೆ ನಮ್ಮ ಮೇಲೆ ಕೋಪ ಇರುವಾಗಿದೆ. ಸಚಿವರು ಯಾಕೆ ಅಂತ ಕೇಳ್ತಾರೆ. ಟೈಂ ಇಷ್ಟು ಹೊತ್ತು ಆಗಿದೆ. ಮನೆಗೆ ಹೋಗ್ಬೇಕು ಅಂತಾರೆ ಎಂದರು. ಈ ಮಧ್ಯೆ ತೇಜಸ್ವಿನಿ ಗೌಡ ಎದ್ದು ನಿಂತು ಇದು ಎನ್​​ಇಪಿ ಮಿಡ್ ನೈಟ್ ಅಂತಾರೆ ಎಂದರು. ಸರಿ ಊಟ ತರಿಸಿಬಿಡಿ ಎಂದು ನಗೆ ಚಟಾಕಿ ಹಾರಿಸಿದರು ವೆಂಕಟೇಶ್. ಮಾತು ಮುಂದುವರೆಸಿದ ಸಚಿವ ಅಶ್ವತ್ಥ್ ನಾರಾಯಣ್, ಒಂದು ಮಗು ಶಿಕ್ಷಣ ಕಲಿಯಬೇಕು. ಆ ಮಗು ವಿಶ್ವದಲ್ಲಿ ಹೆಸರು ಮಾಡಬೇಕು ಎಂದು ವಿವರಿಸಿದರು.

ನಾವೇನು ಆತುರವಾಗಿ ಎನ್ಇಪಿ ಜಾರಿ ಮಾಡ್ತಿಲ್ಲ. ದೆಹಲಿ ಸರ್ಕಾರ ಕೂಡಾ ಎನ್ಇಪಿ ಜಾರಿ ಮಾಡುತ್ತಿದೆ. ವಿಶ್ವ ಮಟ್ಟದ ಸ್ಪರ್ಧೆಗೆ ಇದು ಸಹಕಾರ ನೀಡುತ್ತೆ. ಖಾಸಗೀಕರಣ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಈಗ ಖಾಸಗೀಕರಣ ಬಗ್ಗೆ ಮಾತಾಡುತ್ತಾರೆ. 5+ 8+11+15 ವರ್ಷಕ್ಕೆ ಪರೀಕ್ಷೆಗಳು ನಡೆಯುತ್ತವೆ.

ಪರೀಕ್ಷೆ ವ್ಯವಸ್ಥೆಯಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಒಬ್ಬ ವಿದ್ಯಾರ್ಥಿ ಆಳವಾದ ಅಧ್ಯಯನ ಪಡೆಯುವುದಕ್ಕೆ ಈ ಎನ್ಇಪಿ ಸಹಕಾರಿಯಾಗಲಿದೆ. ಪಠ್ಯೇತರ ಚಟುವಟಿಕೆಯಲ್ಲೂ ಭಾಗಿಯಾಗಲು ಅವಕಾಶ ಇರಲಿದೆ. ಯಾವುದೇ ಭಾಗಕ್ಕೆ ತೆರಳಿ ವಿದ್ಯಾಭ್ಯಾಸ ಪಡೆಯಬಹುದು. ಇದರಿಂದ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕವಾಗಿದೆ ಎಂದರು. ಹೀಗೆ ತಡರಾತ್ರಿಯ ನಂತರವೂ ಚರ್ಚೆ ಮುಂದುವರಿದೇ ಇತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.