ETV Bharat / city

ಅ.4 ರಿಂದ ಹೆಚ್ಚುವರಿ 100 ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದ ಬಿಎಂಟಿಸಿ - Decision to operate additional 100 buses by BMTC

ಕೋವಿಡ್​​ ಕಾರಣಕ್ಕೆ ಸರ್ಕಾರದಿಂದ ವಿಧಿಸಲಾಗಿದ್ದ ನಿರ್ಬಂಧಗಳು ಸಡಿಲಿಕೆಗೊಂಡಿವೆ. 6ನೇ ತರಗತಿಯಿಂದ 10ನೇ ತರಗತಿ, ಪದವಿ, ಸ್ನಾತಕೋತ್ತರ, ತಾಂತ್ರಿಕ ಮತ್ತು ವೈದ್ಯಕೀಯ ಹಾಗೂ ಡಿಪ್ಲೋಮಾ ಸೇರಿ ಇತ್ಯಾದಿ ಕಾಲೇಜುಗಳ ತರಗತಿಗಳು ಈಗಾಗಲೇ ಪ್ರಾರಂಭವಾಗಿವೆ.‌.

Decision to operate additional 100 buses by BMTC
ಹೆಚ್ಚುವರಿ 100 ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದ ಬೆಂ.ಮ.ಸಾ. ಸಂಸ್ಥೆ
author img

By

Published : Oct 1, 2021, 7:40 PM IST

ಬೆಂಗಳೂರು : ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬೆಂಮಸಾಸಂ) ಅಕ್ಟೋಬರ್ 4ರಿಂದ ಹೆಚ್ಚುವರಿ 100 ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ. ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ಬಸ್‌ಗಳೊಂದಿಗೆ ಇನ್ನೂ 100 ಬಸ್ ಕಾರ್ಯಾಚರಿಸಲಿವೆ.

ನಗರ ಸಾರಿಗೆ ಸಂಸ್ಥೆ ಸಾರ್ವಜನಿಕರಿಗೆ ಉತ್ತಮ, ಸಮರ್ಪಕ ಹಾಗೂ ಸುರಕ್ಷಿತ ಸಾರಿಗೆ ಸೇವೆಯನ್ನು ಮಿತವ್ಯಯ ದರದಲ್ಲಿ ಒದಗಿಸುತ್ತಿದೆ. ವಿವಿಧ ಮಾರ್ಗಗಳಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಹಾಗೂ ಅವರ ಹಿತದೃಷ್ಟಿಯಿಂದ ಸಾರಿಗೆ ಸೇವೆಗಳನ್ನು ಒದಗಿಸುತ್ತಿದೆ.

ಲಾಕ್‌ಡೌನ್‌ ಸಡಿಲಿಕೆಗೊಂಡ ನಂತರ ಪ್ರಯಾಣಿಕರಿಗೆ ಸಮರ್ಪಕ, ಸುರಕ್ಷಿತ ಸಾರಿಗೆ ಸೇವೆ ಒದಗಿಸಲು ಹಾಗೂ ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ನೀಡಿರುವ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಬೆಂಮಸಾಸಂ ಬಸ್‌ಗಳ ಕಾರ್ಯಾಚರಣೆಗೊಳಿಸಲಾಗುತ್ತಿದೆ. ಪುಸ್ತುತ ಸಾರಿಗೆ ಸಂಸ್ಥೆಯಲ್ಲಿ 4,953 ಬಸ್‌ಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ.

Decision to operate additional 100 buses by BMTC
ಬಿಎಂಟಿಸಿ_ಪತ್ರಿಕಾ ಪ್ರಕಟಣೆ

ಕೋವಿಡ್​​ ಕಾರಣಕ್ಕೆ ಸರ್ಕಾರದಿಂದ ವಿಧಿಸಲಾಗಿದ್ದ ನಿರ್ಬಂಧಗಳು ಸಡಿಲಿಕೆಗೊಂಡಿವೆ. 6ನೇ ತರಗತಿಯಿಂದ 10ನೇ ತರಗತಿ, ಪದವಿ, ಸ್ನಾತಕೋತ್ತರ, ತಾಂತ್ರಿಕ ಮತ್ತು ವೈದ್ಯಕೀಯ ಹಾಗೂ ಡಿಪ್ಲೋಮಾ ಸೇರಿ ಇತ್ಯಾದಿ ಕಾಲೇಜುಗಳ ತರಗತಿಗಳು ಈಗಾಗಲೇ ಪ್ರಾರಂಭವಾಗಿವೆ.‌

ಬೆಂಗಳೂರು ನಗರ ಮತ್ತು ಹೊರವಲಯದಲ್ಲಿ ಹೆಚ್ಚಿನ ಸಾರ್ವಜನಿಕರು ಸಂಚಾರ ನಡೆಸುತ್ತಿದ್ದಾರೆ. ವಾಣಿಜ್ಯ ಚಟುವಟಿಕೆಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ. ಜೊತೆಗೆ ಬೇರೆ ಊರುಗಳಿಂದಲೂ ಬೆಂಗಳೂರಿಗೆ ಬರುವ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗಿದೆ.‌

ಇದನ್ನೂ ಓದಿ: ನಿಮ್ಮೆಲ್ಲರ ಪುಣ್ಯದಿಂದ ಸಭಾಪತಿ ನಿವಾಸವನ್ನೇ ಕೊಟ್ಟಿದ್ದಾರೆ : ಬಸವರಾಜ ಹೊರಟ್ಟಿ

ಹೀಗಾಗಿ, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಇತರೆ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಮಸಾಸಂ ಅಕ್ಟೋಬರ್ 4 ರಿಂದ 100 ಬಸ್‌ಗಳನ್ನು ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಲು ನಿರ್ಧರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.