ಬೆಂಗಳೂರು : ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿಧನ ಶಾಕ್ ತಂದಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತಮ್ಮ ಟ್ವಿಟರ್ ಖಾತೆ ಮೂಲಕ ಸಂತಾಪ ಕೋರಿದ್ದಾರೆ.
ಅರುಣ್ ಜೇಟ್ಲಿ ದೇಶದ ಅತ್ಯುತ್ತಮ ರಾಜಕೀಯ ನಾಯಕ. ಹಲವು ಖಾತೆಗಳನ್ನು ನಿಭಾಯಿಸಿದ್ದವರು. ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೆಚ್ಡಿಡಿ ತಿಳಿಸಿದ್ದಾರೆ.