ಬೆಂಗಳೂರು : ಆಟವಾಡುತ್ತಿದ್ದ ಬಾಲಕ ಮನೆ ಹತ್ತಿರದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾನಗರದ ಹೆಣ್ಣೂರು ಬಸ್ ಡಿಪೋ ಹಿಂಭಾಗದಲ್ಲಿನ 3ನೇ ಬ್ಲಾಕ್, ಎಚ್ಬಿಆರ್ ಲೇಔಟ್ನಲ್ಲಿ ನಡೆದಿದೆ.
ಅಶ್ವಿನ್ (5) ಮೃತ ಬಾಲಕ. ಇಂದು ಸಂಜೆ ಅಶ್ವಿನ್ ಆಟ ಆಡುವ ವೇಳೆ ಅಚಾನಕ್ಕಾಗಿ ಬಾವಿಗೆ ಬಿದ್ದಿದ್ದಾನೆ. ನಂತರ ನಾಪತ್ತೆಯಾದ ಬಾಲಕನಿಗಾಗಿ ಪೋಷಕರು ಎರಡು ಗಂಟೆಗಳ ಕಾಲ ಹುಡುಕಾಡಿದ್ದಾರೆ. ಬಳಿಕ ಪಕ್ಕದಲ್ಲೇ ಇದ್ದ ಬಾವಿ ನೋಡಿದಾಗ ದೇಹ ಮೇಲ್ಗಡೆ ತೇಲುತ್ತಿತ್ತು.
ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.