ETV Bharat / city

ಕೊರೊನಾ ಸೋಂಕಿನ ಜೊತೆಗೆ ಆಸ್ತಿ ಕೈತಪ್ಪುವ ಭೀತಿ.. ಜನ ಏನ್​ ಮಾಡ್ತಿದ್ದಾರೆ ಗೊತ್ತೇ?

ಕೋವಿಡ್ ಹಿನ್ನೆಲೆಯಲ್ಲಿ ಕೆಲವರು ಹಲವು ಕಾರಣಗಳಿಗೆ ಅನಾರೋಗ್ಯರಾಗಿ ವಿಶ್ರಾಂತಿ ಪಡೆಯುತ್ತಿರುವ ಪಾಲಕರನ್ನೂ ನೋಂದಣಿ ಕಚೇರಿಗೆ ಕರೆದೊಯ್ದು ಕರಾರು ಪತ್ರ ಮಾಡಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮೊದಲೇ ಟೋಕನ್ ಪಡೆಯದೇ ನೇರವಾಗಿ ಪಾಲಕರನ್ನು ಕಚೇರಿಗೆ ಕರೆತಂದು ತುರ್ತಾಗಿ ನೋಂದಣಿ ಮಾಡಿಕೊಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.

death corona patients property registration

author img

By

Published : Apr 24, 2021, 7:19 PM IST

ಬೆಂಗಳೂರು : ಮಹಾಮಾರಿ ಕೋವಿಡ್ ಸೋಂಕಿನಿಂದ ಹಿರಿಯ ನಾಗರಿಕರು ಸಾವನ್ನಪ್ಪುತ್ತಿದ್ದು, ಅವರ ಹೆಸರಿನಲ್ಲಿರುವ ಆಸ್ತಿ ತಗಾದೆಯಾಗಬಹುದೆಂದು ಕೆಲವರು ಉಪ ನೋಂದಣಿ ಕಚೇರಿಗೆ ಎಡತಾಕುತ್ತಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇದರಲ್ಲಿ ಹೆಚ್ಚು ಹಿರಿಯ ನಾಗರೀಕರು ಮೃತಪಡುತ್ತಿದ್ದಾರೆ. ಆಸ್ತಿ ಹೊಂದಿರುವ ಹಿರಿಯ ನಾಗರಿಕರು ಅಕಾಲಿಕ ಮರಣ ಹೊಂದಿದರೆ ಅವರ ಹೆಸರಿನಲ್ಲಿರುವ ಆಸ್ತಿ ವಿಚಾರದಲ್ಲಿ ಸಹೋದರರು ಅಥವಾ ಸಂಬಂಧಿಕರು ತಕರಾರು ತೆಗೆಯಬಹುದು ಅಥವಾ ನ್ಯಾಯಾಲಯದ ಮೆಟ್ಟಿಲೇರಿದರೆ ಮತ್ತಷ್ಟು ಕಷ್ಟವಾಗಬಹುದೆಂಬ ಭೀತಿಯಲ್ಲಿ ಆಸ್ತಿ ವಾರಸುದಾರರಿಂದ ವಿಲ್, ದಾನಪತ್ರ ಮಾಡಿಸಿಕೊಳ್ಳಲು ಉಪ ನೋಂದಣಿ ಕಚೇರಿಗಳಿಗೆ ಎಡತಾಗುತ್ತಿದ್ದಾರೆ.

ಕೆಲವರು ಹಲವು ಕಾರಣಗಳಿಗೆ ಅನಾರೋಗ್ಯರಾಗಿ ವಿಶ್ರಾಂತಿ ಪಡೆಯುತ್ತಿರುವ ಪಾಲಕರನ್ನೂ ನೋಂದಣಿ ಕಚೇರಿಗೆ ಕರೆದೊಯ್ದು ಕರಾರು ಪತ್ರ ಮಾಡಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮೊದಲೇ ಟೋಕನ್ ಪಡೆಯದೇ ನೇರವಾಗಿ ಪಾಲಕರನ್ನು ಕಚೇರಿಗೆ ಕರೆತಂದು ತುರ್ತಾಗಿ ನೋಂದಣಿ ಮಾಡಿಕೊಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಏರುತ್ತಿದ್ದಾರೆ.

ಕೊರೊನಾ ಮಾರ್ಗಸೂಚಿಗಳನ್ನು ಸಹ ಪಾಲನೆ ಮಾಡುತ್ತಿಲ್ಲ. ಇದರಿಂದ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸ್ವಯಾರ್ಜಿತ ಆಸ್ತಿಯನ್ನು ವಾರಸುದಾರ ಯಾರಿಗೆ ಬೇಕಾದರೂ ವಿಲ್ ಅಥವಾ ದಾನ ಪತ್ರ ಮಾಡಬಹುದು. ವಿಲ್ ಮಾಡಿದರೆ ಅದರಲ್ಲಿನ ಷರತ್ತುಗಳು ಪೂರ್ಣಗೊಂಡ ಮೇಲೆ ಆಸ್ತಿಯ ಹಕ್ಕು ವಿಲ್‌ನಲ್ಲಿ ಉಲ್ಲೇಖಿಸಿರುವ ವ್ಯಕ್ತಿಗೆ ವರ್ಗಾವಣೆಯಾಗಲಿದೆ.

ದಾನ ಪತ್ರವಾದರೆ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾದ ಕೂಡಲೇ ವಾರಸುದಾರನಿಗೆ ಹಕ್ಕು ಬರಲಿದೆ. ವಿಲ್ ಮತ್ತು ದಾನ ಪತ್ರಕ್ಕೆ ಕಾನೂನಿನಲ್ಲಿ ಹೆಚ್ಚು ಮಾನ್ಯತೆ ಮತ್ತು ಕಡಿಮೆ ಖರ್ಚು ತಗಲುವ ಕಾರಣಕ್ಕೆ ಎಲ್ಲರೂ ವಿಲ್ ಮತ್ತು ದಾನ ಪತ್ರಕ್ಕೆ ಮೊರೆ ಹೋಗುತ್ತಿದ್ದಾರೆ.

ಒಂದು ವೇಳೆ ಕೊರೊನಾ ಸೋಂಕಿಗೆ ಆಸ್ತಿಯ ವಾರಸುದಾರ ನಿಧನವಾದರೆ ಉತ್ತಾರಧಿಕಾರಿಗೆ ಅಧಿಕಾರ ಸಿಗುವುದೆಂಬ ಕಾರಣಕ್ಕೆ ಕೆಲವರು ಮಾಡುತ್ತಿದ್ದಾರೆ. ಇನ್ನೂ ಕೆಲವರು ಮಕ್ಕಳ ಒತ್ತಡಕ್ಕೆ ಒಳಗಾಗಿ ಅಥವಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ಭರವಸೆಯಿಂದ ಹಿರಿಯರು ಅನಿವಾರ್ಯವಾಗಿ ವಿಲ್ ಮತ್ತು ದಾನಪತ್ರ ಮಾಡಿಕೊಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ತಿ ಮೇಲೆ ಬ್ಯಾಂಕ್ ಸಾಲ ಪಡೆಯಲು ನಾಗರಿಕರು ಹೆಚ್ಚು ಆ ತೋರಿಸುತ್ತಿದ್ದಾರೆ. ಸೈಟು, ಮನೆ, ವಾಣಿಜ್ಯ ಕಟ್ಟಡಗಳನ್ನು ಅಡವಿಟ್ಟು ಲಕ್ಷಾಂತರ ರೂ. ಸಾಲ ಪಡೆದು ಆಸ್ತಿ ದಾಖಲೆಗಳಿಗೆ ನೋಂದಣಿ ಮಾಡಿಸಲು ಫೈನಾನ್ಸ್ ಕಂಪನಿ ಅಧಿಕಾರಿ ಮತ್ತು ಸಾಲಗಾರರು ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಕೆಲವರು ಆಸ್ಪತ್ರೆ ಖರ್ಚಿಗೆ ಸಾಲ ಪಡೆಯುತ್ತಿರುವುದಾಗಿ ಹೇಳುತ್ತಿದ್ದಾರೆ. ಇನ್ನೂ ಹಲವರು ಒಂದು ಸಾಲ ತೀರಿಸಲು ಮತ್ತೊಂದು ಸಾಲ ಮಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ರಾಜ್ಯದ ವಿವಿಧೆಡೆ ಸಬ್ ರಿಜಿಸ್ಟ್ರಾರ್ ಸೇರಿ ಅಧಿಕಾರಿ, ಸಿಬ್ಬಂದಿಗೆ ಕೊರೊನಾ ಸೋಂಕು ಭೀತಿ ಎದುರಾಗಿದೆ. ಕೆಲ ಸಿಬ್ಬಂದಿಗೂ ಸೋಂಕು ತಗುಲಿರುವ ಉದಾಹರಣೆಗಳೂ ಇವೆ. ಕರಾರು ಪತ್ರಗಳನ್ನು ಮಾಡಿಸಿಕೊಳ್ಳಲು ಜನರು ಮಾತ್ರ ಆತುರವಾಗಿ ಉಪ ನೋಂದಣಿ ಕಚೇರಿಗಳಿಗೆ ಬರುತ್ತಿದ್ದಾರೆ.

ಒಂದು ಕರಾರು ಪತ್ರಕ್ಕೆ ಹತ್ತಾರು ಮಂದಿ ಬರುತ್ತಿದ್ದಾರೆ. ಕಡ್ಡಾಯವಾಗಿ ಬೆರಳಚ್ಚು ಕೊಡಬೇಕಾಗಿದ್ದು, ಇಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದರೂ ಬರಲೇಬೇಕಾದ ಕಾರಣಕ್ಕೆ ಎಲ್ಲ ರೀತಿಯ ಜನರು ಕಚೇರಿಗೆ ಬರುತ್ತಿದ್ದ ಪರಿಣಾಮ ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿ, ಸಿಬ್ಬಂದಿಯಲ್ಲಿ ಸೋಂಕು ಹೆಚ್ಚಾಗುತ್ತಿದೆ ಎನ್ನುತ್ತಾರೆ ಸಿಬ್ಬಂದಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.