ಬೆಂಗಳೂರು: ಒಬ್ಬ ತಂದೆಗೆ ಹುಟ್ಟಿದ ಮಕ್ಕಳೇ ಆಗಿದ್ದಲ್ಲಿ ಕಾಂಗ್ರೆಸ್ ನಾಯಕರು ನಮ್ಮ ಪ್ರಶ್ನೆಗೆ ಉತ್ತರಿಸುತ್ತಾರೆ. ಇಲ್ಲವಾದಲ್ಲಿ ಅವರು ಒಬ್ಬ ತಂದೆಗೆ ಹುಟ್ಟಿದವರಲ್ಲ ಎಂದು ನಾವು ಭಾವಿಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಚುನಾವಣಾ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡೈರಿ ಬಿಡುಗಡೆ ಮಾಡಿರುವ ಕಾಂಗ್ರೆಸ್ ನಾಯಕರು ನಾನು ಕೇಳಿರುವ ಹತ್ತು ಪ್ರಶ್ನೆಗಳಿಗೆ ಉತ್ತರಿಸಲಿ. ಡೈರಿಯನ್ನು ತಮಗೆ ತಂದುಕೊಟ್ಟವರು ಯಾರು ಎಂಬುದನ್ನು ಬಹಿರಂಗಪಡಿಸಲಿ. ಒಬ್ಬ ತಂದೆಗೆ ಹುಟ್ಟಿದ ಮಕ್ಕಳೇ ಆಗಿದ್ದಲ್ಲಿ ಕಾಂಗ್ರೆಸ್ ನಾಯಕರು ನಮ್ಮ ಪ್ರಶ್ನೆಗೆ ಉತ್ತರಿಸುತ್ತಾರೆ ಎಂದು ವಿವಾದಾತ್ಮಕ ರೀತಿಯಲ್ಲಿ ಸವಾಲು ಎಸೆದಿದ್ದಾರೆ.
ತನಿಖೆಯ ಬಗ್ಗೆ ನಾವು ನಂತರ ಯೋಚಿಸೋಣ. ಈ ಡೈರಿಯ ಹಿಂದೆ ಖಂಡಿತ ಬಿಜೆಪಿಯವರು ಇಲ್ಲ,ಕಾಂಗ್ರೆಸ್ನ ರಾಜಕೀಯ ಮತ್ತು ಕ್ರಿಮಿನಲ್ ಪಿತೂರಿ ಇರೋದು ನಿಶ್ಚಿತ ಎಂದರು.