ETV Bharat / city

ಡಿಕೆಶಿ ಬಂಧನ ಕಾನೂನು ಬಾಹಿರ, ಅವರೊಂದಿಗೆ ನಾವಿದ್ದೇವೆ: ಸಿದ್ದರಾಮಯ್ಯ

ತಪ್ಪು ಮಾಡಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಸಮನ್ಸ್ ಕೊಟ್ಟು ಅಟೆಂಡ್ ಆಗದೇ ಹೋದರೆ ದಸ್ತಗಿರಿ ಮಾಡಲಿ. ಆದರೆ ಕರೆದಾಗೆಲ್ಲ ಹೋಗಿದ್ದಾರೆ, ಹಬ್ಬದ ದಿನವೂ ಬಿಟ್ಟಿಲ್ಲ. ಡಿ.ಕೆ.ಶಿವಕುಮಾರ್ ಬಂಧನ ಕಾನೂನು ಬಾಹಿರವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ
author img

By

Published : Sep 4, 2019, 11:52 AM IST

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಕಾನೂನು ಬಾಹಿರವಾಗಿದ್ದು, ರಾಜಕೀಯ ಪ್ರೆರಿತ, ದ್ವೇಷದಿಂದ ಕೂಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ತಮ್ಮ ನಿವಾಸ ಕಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾರೋ ಕೊಲೆ ಮಾಡಿದ್ರೆ, ದರೋಡೆ ಮಾಡಿದ್ರೆ, ಸಾಕ್ಷಿಗಳನ್ನು ನಾಶ ಮಾಡಿದ್ರೆ ಅಂಥವರನ್ನು ದಸ್ತಗಿರಿ ಮಾಡಬೇಕು. ತಪ್ಪು ಮಾಡಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಸಮನ್ಸ್ ಕೊಟ್ಟು ಅಟೆಂಡ್ ಆಗದೇ ಹೋದರೆ ದಸ್ತಗಿರಿ ಮಾಡಲಿ. ಆದರೆ ಕರೆದಾಗೆಲ್ಲ ಹೋಗಿದ್ದಾರೆ, ಹಬ್ಬದ ದಿನವೂ ಬಿಟ್ಟಿಲ್ಲ. ಡಿಕೆಶಿ ಪಾಪ ಕಣ್ಣೀರು ಹಾಕಿಬಿಟ್ಟರು. ಎಷ್ಟು ಅಮಾನವೀಯ ಇದು. ನಾಲ್ಕು ದಿನವೂ ವಿಚಾರಣೆಗೆ ಹೋಗಿದ್ದಾರೆ. ಸಂಪೂರ್ಣ ರಾಜಕೀಯ ಸೇಡಿನ ಕ್ರಮ ಇದು. ಕಾಂಗ್ರೆಸ್ ಪಕ್ಷ ಇದನ್ನು ಸಹಿಸೋದಿಲ್ಲ. ಪಕ್ಷದ ವತಿಯಿಂದ ಹೋರಾಟ ಮಾಡ್ತೇವೆ. ನಾವೆಲ್ಲ ಡಿಕೆಶಿ ಜೊತೆಗಿದ್ದೇವೆ. ರಾಜಕೀಯವಾಗಿ, ಕಾನೂನಾತ್ಮಕವಾಗಿ ಅವರ ಪರ ಹೋರಾಟ ಮಾಡ್ತೇವೆ ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ

ಇದು ದ್ವೇಷದ ರಾಜಕಾರಣ.‌ 30-40 ವರ್ಷದಿಂದ ಡಿ.ಕೆ.ಶಿವಕುಮಾರ್​ ರಾಜಕೀಯದಲ್ಲಿದ್ದಾರೆ. ಚಿದಂಬರಂ ಅವರಿಗೂ ಹೀಗೆ ಮಾಡಿದ್ರು. ಇದೀಗ ಡಿಕೆಶಿಗೆ ಹೀಗೆ ಮಾಡಿದ್ದಾರೆ. ಅವರ ತಂದೆಯ ಕಾರ್ಯಕ್ರಮಕ್ಕೆ ಹೋಗಲೂ ಬಿಟ್ಟಿಲ್ಲ. ಮನುಷ್ಯತ್ವ ಇರೋರು ಹೀಗೆ ಮಾಡಲ್ಲ. ಮತ್ತಷ್ಟು ಕೈ ಮುಖಂಡರನ್ನ ಕೇಂದ್ರ ಟಾರ್ಗೆಟ್ ಮಾಡಿದರೆ ಮಾಡಲಿ. ಅದಕ್ಕೆಲ್ಲಾ ಕಾಂಗ್ರೆಸ್ ಹೆದರಲ್ಲ. ಇದು ಜನರಿಗೆ ಅರ್ಥವಾಗ್ತಿದೆ. ರಾಷ್ಟ್ರ ಮತ್ತು ರಾಜ್ಯದಲ್ಲೂ ಈ ಬಗ್ಗೆ ಕಾಂಗ್ರೆಸ್ ದನಿ ಎತ್ತಲಿದೆ ಎಂದರು.

ಇನ್ನು ಸೆ. 7ರಂದು ಪ್ರಧಾನಿ ಮೋದಿ ಬರ್ತಿದ್ದಾರೆ. ಅವತ್ತಾದರೂ ಎಲ್ಲ ಮಂತ್ರಿಗಳು, 25 ಸಂಸದರು ಹೋಗಿ ಇಲ್ಲೇ ಮೋದಿಯವರನ್ನ ಭೇಟಿ ಮಾಡಲಿ. ಸಿಎಂ ಯಡಿಯೂರಪ್ಪನವರು ನೆರೆ ಪರಿಹಾರವನ್ನ ಕೇಳಲಿ ಎಂದರು.

Intro:newsBody:ಡಿಕೆಶಿ ಬಂಧನ ಕಾನೂನುಬಾಹಿರ, ಅವರೊಂದಿಗೆ ನಾವಿದ್ದೇವೆ: ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಸಚಿವ ಡಿ ಕೆ ಶಿವಕುಮಾರ್ ಅರೆಸ್ಟ್ ಕಾನೂನು ಬಾಹಿರವಾಗಿದ್ದು, ರಾಜಕೀಯ ಪ್ರೆರಿತ, ದ್ವೇಷದಿಂದ ಕೂಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ನಿವಾಸ ಕಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಯಾರೋ ಕೊಲೆ ಮಾಡಿದ್ರೆ, ದರೋಡೆ ಮಾಡಿದ್ರೆ, ಸಾಕ್ಷಿಗಳನ್ನು ನಾಶ ಮಾಡಿದ್ರೆ ಅಂಥವರನ್ನು ದಸ್ತಗಿರಿ ಮಾಡಬೇಕು. ತಪ್ಪು ಮಾಡಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಸಮನ್ಸ್ ಕೊಟ್ಟು ಅಟೆಂಡ್ ಆಗದೇ ಹೋದರೆ ದಸ್ತಗಿರಿ ಮಾಡಲಿ. ಆದರೆ ಕರೆದಾಗೆಲ್ಲ ಹೋಗಿದ್ದಾರೆ. ಹಬ್ಬದ ದಿನವೂ ಬಿಟ್ಟಿಲ್ಲ. ಡಿಕೆ ಶಿ ಪಾಪ ಕಣ್ಣೀರು ಹಾಕಿಬಿಟ್ಟರು ಎಂದು ಹೇಳಿದರು.
ಎಷ್ಡು ಅಮಾನವೀಯ ಇದು? ನಾಲ್ಕು ದಿನವೂ ವಿಚಾರಣೆಗೆ ಹೋಗಿದ್ದಾರೆ, ಸಂಪೂರ್ಣ ರಾಜಕೀಯ ಸೇಡಿನ ಕ್ರಮ ಇದು. ಕಾಂಗ್ರೆಸ್ ಪಕ್ಷ ಇದನ್ನು ಸಹಿಸೋದಿಲ್ಲ. ಪಕ್ಷದ ವತಿಯಿಂದ ಹೋರಾಟ ಮಾಡ್ತೇವೆ. ನಾವೆಲ್ಲ ಡಿಕೆಶಿ ಜೊತೆಗಿದ್ದೇವೆ. ರಾಜಕೀಯವಾಗಿ, ಕಾನೂನಾತ್ಮಕವಾಗಿ ಅವರ ಪರ ಹೋರಾಟ ಮಾಡ್ತೇವೆ ಎಂದು ಹೇಳಿದರು.
ನಾಲ್ಕು ದಿನ ವಿಚಾರಣೆ ಮಾಡಿ ದಸ್ತಗಿರಿ ಮಾಡೋದು ಸರಿಯಲ್ಲ. ಸಾಕ್ಷಧಾರ ನಾಶ ಮಾಡಿದ್ರೆ, ಕಣ್ಮರೆಯಾದ್ರೆ ಅಂತವರನ್ನ ದಸ್ತಗಿರಿ ಮಾಡಲಿ. ಆದ್ರೆ ಇದು ದ್ವೇಷದ ರಾಜಕಾರಣ.‌ 30-40 ವರ್ಷದಿಂದ ಡಿಕೆಶಿವಕುಮಾರ ರಾಜಕಾರದಲ್ಲಿದ್ದಾರೆ. ಚಿದಂಬರಂಗೂ ಹೀಗೆ ಮಾಡಿದ್ರು. ಇದೀಗ ಡಿ ಕೆ ಶಿವಕುಮಾರಗೂ ಹೀಗೆ ಮಾಡಿದ್ದಾರೆ. ಅವರ ತಂದೆಯ ಕಾರ್ಯಕ್ರಮಕ್ಕೆ ಹೋಗಲೂ ಬಿಟ್ಟಿಲ್ಲ. ಮನುಷತ್ವ ಇರೋರು ಹೀಗೆ ಮಾಡಲ್ಲ. ಸೆ.7 ರಂದು ಪ್ರಧಾನಿ ಮೋದಿ ಬರ್ತಿದ್ದಾರೆ. ಅವತ್ತಾದರೂ ಎಲ್ಲ ಮಂತ್ರಿಗಳು, 25 ಸಂಸದರು ಹೋಗಿ ಇಲ್ಲೇ ಮೋದಿಯವರನ್ನ ಭೇಟಿ ಮಾಡಲಿ ನೆರೆ ಪರಿಹಾರವನ್ನ ಯಡಿಯೂರಪ್ಪನವರು ಕೇಳಲಿ ಎಂದರು.
ಮತ್ತಷ್ಟು ಕೈ ಮುಖಂಡರನ್ನ ಕೇಂದ್ರ ಟಾರ್ಗೆಟ್ ಮಾಡಿದರೆ ಮಾಡಲಿ.‌ ಕಾಂಗ್ರೆಸ್ ಅದಕ್ಕೆಲ್ಲಾ ಕಾಂಗ್ರೆಸ್ ಹೆದರಲ್ಲ. ಇದು ಜನರಿಗೆ ಅರ್ಥವಾಗ್ತಿದೆ.ರಾಷ್ಟ್ರ ಮತ್ತು ರಾಜ್ಯದಲ್ಲೂ ಈ ಬಗ್ಗೆ ಕಾಂಗ್ರೆಸ್ ದನಿ ಎತ್ತಲಿದೆ ಎಂದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.