ETV Bharat / city

BDA ನಿರ್ಮಿತ ಡಿ ಗ್ರೂಪ್ ಲೇಔಟ್​​ ನಿವೇಶನಗಳ ಅಕ್ರಮ ಮಾರಾಟ ಆರೋಪ: ಅಸೋಸಿಯೇಷನ್ ಅಧ್ಯಕ್ಷನ ಬಂಧನ - ಬೆಂಗಳೂರು ವಂಚನೆ ಪ್ರಕರಣ

ಬಿಡಿಎ(BDA) ನಿರ್ಮಿತ ಡಿ ಗ್ರೂಪ್ ಲೇಔಟ್ (D group layout)​​ ನಿವೇಶಗಳ ಅಕ್ರಮ ಮಾರಾಟ ಆರೋಪದ ಮೇಲೆ ಅಸೋಸಿಯೇಷನ್ ಅಧ್ಯಕ್ಷ ನಟರಾಜ್ (Nataraj) ಎಂಬುವರನ್ನು ಅನ್ನಪೂರ್ಣೇಶ್ವರಿನಗರ ಠಾಣೆಯ ಪೊಲೀಸರು (annapoorneshwari police station) ಬಂಧಿಸಿದ್ದಾರೆ.

D group layout association president Nataraj
ಡಿ ಗ್ರೂಪ್ ಲೇಔಟ್ ಅಸೋಸಿಯೇಷನ್ ಅಧ್ಯಕ್ಷ ನಟರಾಜ್
author img

By

Published : Nov 11, 2021, 9:42 AM IST

ಬೆಂಗಳೂರು: ಒಂದೇ ನಿವೇಶನವನ್ನು ಎರಡರಿಂದ ಮೂರು ಮಂದಿಗೆ ಅಕ್ರಮವಾಗಿ ಮಾರಾಟ ಮಾಡಿ ಕೋಟ್ಯಂತರ ರೂ. ವಂಚನೆ (fraud) ಎಸಗಿದ ಆರೋಪದ ಮೇಲೆ ಬಿಡಿಎ (BDA) ನಿರ್ಮಿತ ಡಿ ಗ್ರೂಪ್ ಲೇಔಟ್ (D group layout) ಅಸೋಸಿಯೇಷನ್ ಅಧ್ಯಕ್ಷ ನಟರಾಜ್ (Nataraj) ಎಂಬುವರನ್ನು ಅನ್ನಪೂರ್ಣೇಶ್ವರಿನಗರ ಠಾಣೆಯ ಪೊಲೀಸರು (annapoorneshwari police station) ಬಂಧಿಸಿದ್ದಾರೆ.

ವಂಚನೆ?

ಆರೋಪಿ ಸರ್ಕಾರದ ಡಿ ಗ್ರೂಪ್ ಎಂಪ್ಲಾಯಿಸ್, ಸೆಂಟ್ರಲ್ ಅಸೋಸಿಯೇಷನ್ ಸೊಸೈಟಿ ಸಂಘ ನಿರ್ಮಿಸಿದ ನಿವೇಶನಗಳನ್ನು ನೀಡುವುದಾಗಿ ಹೇಳಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ (dcp sanjeev patil) ಮಾಹಿತಿ ನೀಡಿದ್ದಾರೆ.

10ಕ್ಕೂ ಅಧಿಕ ಮಂದಿಯಿಂದ ದೂರು:

ವಂಚನೆಗೊಳಗಾದವರು ಸಮೀಪದ ಠಾಣೆಗೆ ದೂರು ನೀಡಬಹುದು. ಈವರೆಗೆ ಸುಮಾರು 10ಕ್ಕೂ ಅಧಿಕ ಮಂದಿ ದೂರು ನೀಡಿದ್ದಾರೆ. 8 ಎಫ್.ಐ.ಆರ್ ಈವರೆಗೆ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.

ಡಿಸಿಪಿ ಸಂಜೀವ್ ಪಾಟೀಲ್

ಆರೋಪಿಗಳ ಪೈಕಿ ನಾಗರಾಜ್ ಸಂಘದ ಅಧ್ಯಕ್ಷನಾಗಿದ್ದು, ಗೋವಿಂದರಾಜು ಪ್ರಧಾನ ಕಾರ್ಯದರ್ಶಿಯಾಗಿದ್ದಾನೆ. ಯಶವಂತಪುರ ಹೋಬಳಿಯ ಶ್ರೀಗಂಧಕಾವಲ್ ಸಂಘದಿಂದ ಅಭಿವೃದ್ಧಿ ಪಡಿಸಿದ ನಿವೇಶನಗಳು ಇವೆ. ದೂರುದಾರ ದಿನೇಶ್ ಎನ್ನುವವರು 2003ರಲ್ಲಿ ಸರ್ವೇ ನಂಬರ್ 30/1ರಲ್ಲಿ 2.25 ಲಕ್ಷ ರೂ ಕೊಟ್ಟು 30*50 ಅಳತೆಯ ನಿವೇಶನ ಖರೀದಿಸಿ, ಪತ್ನಿ ಪೂರ್ಣಿಮಾ ಹೆಸರಿಗೆ ನೋಂದಾಯಿಸಿದ್ದರು.

ಆದರೆ, ಆ ಜಾಗ ಪಾರ್ಕಿಂಗ್​​ಗೆ ಸೇರಿಕೊಂಡಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಇಬ್ಬರು ಆರೋಪಿಗಳು ಬದಲಿ ಜಾಗ ಕೊಡುವುದಾಗಿ ಹೇಳಿದ್ದರು. ಆದರೆ, ಈವರೆಗೂ ಜಾಗ ಕೊಟ್ಟಿಲ್ಲ. ಹಣ ಕೂಡ ವಾಪಸ್ ನೀಡಿಲ್ಲ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ಅಮೃತ ಮಹೋತ್ಸವ: ರಾಜ್ಯ ತಲುಪಿದ ಕಾಶ್ಮೀರ ಟು ಕನ್ಯಾಕುಮಾರಿ ಸೈಕಲ್ ಯಾತ್ರೆ ಕೈಗೊಂಡ ಅಧಿಕಾರಿ

ಡಿ ಗ್ರೂಪ್ ಲೇಔಟ್‌ (D group layout) ನಲ್ಲಿ ಕೆಲ ಸೈಟ್‌ಗಳನ್ನು ಬಿಡಿಎ(BDA) ಅನುಮತಿ ಪಡೆದು ಫಲಾನುಭವಿಗಳಿಗೆ ಹಂಚಲಾಗಿದೆ. ಎಕರೆಗಟ್ಟಲೇ ಭೂಮಿಯನ್ನು ರೈತರಿಂದ ನೇರವಾಗಿ ಖರೀದಿಸಿ ಸೈಟ್ ಮಾಡಿ ಮಾರಾಟ ಮಾಡಲಾಗಿದೆ. ಬಾಕಿ ಸೈಟ್‌ಗಳಿಗೆ ಬಿಡಿಎ ಅನುಮತಿ ಬೇಕಿದೆ. ಈ ಮಧ್ಯೆ ರೈತರಿಂದ ಖರೀದಿಸಿದ ಕೆಲ ಜಾಗವನ್ನು ರೈತರಿಗೆ ಹಿಂದಿರುಗಿಸಲಾಗಿದೆ. ಇದೀಗ ಬಿಡಿಎ ಅನುಮತಿಗಾಗಿ ಕಾಯುತ್ತಿರುವ ಸೈಟ್‌ಗಳಲ್ಲಿ ಸ್ವಾಧೀನ ಪತ್ರ ಇದೆ.

ಆದರೆ, ಸೈಟ್ ನಂಬರ್‌ಗಳಿಗೂ ಜಮೀನಿನ ಸೈಟ್ ನಂಬರ್‌ಗಳಿಗೆ ಬಹಳ ವ್ಯತ್ಯಾಸವಿದೆ. ಇದನ್ನು ಉಪಯೋಗಿಸಿಕೊಂಡ ಆರೋಪಿಗಳು ವಂಚನೆ (fraud) ಮಾಡಿರುವುದು ಬೆಳಕಿಗೆ ಬಂದಿದೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ (dcp sanjeev patil) ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.