ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸೈಕಲ್ ಕಳ್ಳರ ಹಾವಳಿ ಶುರುವಾಗಿದೆ. ದುಬಾರಿ ಬೆಲೆಯ ಸೈಕಲ್ಗಳನ್ನೇ ಟಾರ್ಗೆಟ್ ಮಾಡಿಕೊಂಡು ಖದೀಮರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಇಂದು ಬೆಳಗ್ಗೆ ನಸುಕಿನ ಜಾವ ಕಾರ್ಯಪ್ರವೃತ್ತರಾದ ಖದೀಮರು ವಸಂತನಗರದ ಒಂದೇ ಏರಿಯಾದಲ್ಲಿ ಎರಡು ದುಬಾರಿ ಬೆಲೆಯ ಸೈಕಲ್ಗಳನ್ನು ಕಳ್ಳತನ ಮಾಡಿದ್ದಾರೆ. ಇದಕ್ಕೂ ಮುನ್ನ ಏರಿಯಾದಲ್ಲಿ ರೌಂಡ್ಸ್ ಹಾಕಿದ್ದ ಖದೀಮರು ಬೈಸಿಕಲ್ ಇರುವ ಮನೆಗಳನ್ನು ನೋಡಿಕೊಂಡು ಕಂಪೌಂಡ್ ಜಂಪ್ ಮಾಡಿ ಸಿನಿಮೀಯ ರೀತಿಯಲ್ಲಿ ಸೈಕಲ್ ಕದ್ದು ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಬಿಇಎಂಎಲ್ ಖಾಸಗೀಕರಣ ಪ್ರಶ್ನಿಸಿ ಪಿಐಎಲ್: ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್
ಸಿಸಿಟಿವಿಯಲ್ಲಿ ಬೈಸಿಕಲ್ ಕಳ್ಳತನದ ದೃಶ್ಯ ಸೆರೆಯಾಗಿದೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.