ಬೆಂಗಳೂರು: ಕೊರೊನಾ ಲಾಕ್ಡೌನ್ ಆಗಿದ್ದೇ ತಡ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಲಾಕ್ಡೌನ್ ವೇಳೆ ಜನರು ಹೆಚ್ಚು ಮೊಬೈಲ್ ಬಳಕೆ ಮಾಡಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದ ಖದೀಮರು ವಿವಿಧ ಮಾರ್ಗಗಳಲ್ಲಿ ಕೋಟ್ಯಂತರ ಜನರನ್ನು ವಂಚಿಸಿದ್ದಾರೆ.
ದೇಶದ ಕ್ರೈಂ ರೇಟ್ ಬಗ್ಗೆ ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ (ಎನ್ಸಿಆರ್ಬಿ) 2020ರಲ್ಲಿ ನಡೆದ ಅಪರಾಧ ಪ್ರಕರಣಗಳ ವರದಿ ಪ್ರಕಟಿಸಿದೆ. ಈ ಸೈಬರ್ ವಂಚನೆ ಪ್ರಕರಣಗಳು ಅತಿ ಹೆಚ್ಚು ನಡೆದಿರುವುದು ಕರ್ನಾಟಕ ರಾಜ್ಯದಲ್ಲಿ.
ದೇಶದಲ್ಲಿ 50,035 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕ ಒಂದರಲ್ಲೇ 11,097 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 4,047 ಬ್ಯಾಂಕಿಂಗ್ ವಂಚನೆ ಪ್ರಕರಣ ದಾಖಲಾಗಿದ್ದು, ಅದರಲ್ಲಿ 1093 ಒಟಿಪಿ ವಂಚನೆ, 1194 ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ವಂಚನೆ, 578 ನಕಲಿ ಸುದ್ದಿ ಪ್ರಸಾರ, 149 ನಕಲಿ ಫೇಸ್ ಬುಕ್ ಖಾತೆ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಡೇಟಿಂಗ್ ವೆಬ್ಸೈಟ್ನಲ್ಲಿ ಕಾಲ್ಗರ್ಲ್ಗೆ ಕರೆ ಮಾಡಿ 19 ಸಾವಿರ ರೂ. ಕಳೆದುಕೊಂಡ ಚಾಲಕ