ETV Bharat / city

ಕೊರೊನಾ ವಾರಿಯರ್​​ಗೆ ವಂಚಿಸಿದ ಸೈಬರ್​​​ ಖದೀಮರು!

ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಕೊರೊನಾ ವಾರಿಯರ್​​ವೊಬ್ಬರಿಗೆ ಸೈಬರ್ ಖದೀಮರು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

cyber fraud
ಸೈಬರ್ ವಂಚನೆ
author img

By

Published : Jul 29, 2020, 10:15 AM IST

ಬೆಂಗಳೂರು: ಕೊರೊನಾ ಸೋಂಕು ಸದ್ಯ ಎಲ್ಲೆಡೆ‌‌ ತನ್ನ ಆರ್ಭಟ ತೋರುತ್ತಿದೆ. ಇದನ್ನು ತಡೆಯಲು ಕೊರೊನಾ ವಾರಿಯರ್ಸ್​ ಹಗಲಿರುಳು ಶ್ರಮಿಸುತ್ತಿದ್ದು, ಇಂತಹ ಕೊರೊನಾ ವಾರಿಯರ್​​​ವೊಬ್ಬರಿಗೆ ಸೈಬರ್​ ಖದೀಮರು ವಂಚನೆ ಮಾಡಿದ್ದಾರೆ.

ಬೆಂಗಳೂರಿನ ಯಶವಂತಪುರದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಯುವತಿಗೆ ನ್ಯಾಪ್ಟಾಲ್​ ಜಾಹೀರಾತು ಕಂಪನಿಯ 918017216387 ನಂಬರ್​​ನಿಂದ ರಾಜೇಶ್ ಎಂಬ ವ್ಯಕ್ತಿ ಕರೆ ಮಾಡಿ 1 ಲಕ್ಷದ 20 ಸಾವಿರ ರೂಪಾಯಿಯ ಗಿಫ್ಟ್​ ವೋಚರ್ ಬಂದಿದೆ ಎಂದಿದ್ದಾನೆ.

ಮೊದಲಿಗೆ ವಂಚಕನ ಮಾತನ್ನು ನಂಬದ ಯುವತಿ ಕರೆ ಸ್ಥಗಿತಗೊಳಿಸಿದ್ದಾಳೆ. ಮತ್ತೆ ಮತ್ತೆ ಕರೆ ಮಾಡಿದ ನಂತರ ಯುವತಿ ನಂಬಿದ್ದಾಳೆ. ಈ ವೇಳೆ ಗಿಫ್ಟ್​ ವೋಚರ್​ ಬೇಕಾದರೆ ಮೊದಲು ನಮ್ಮ ಅಕೌಂಟ್​ಗೆ ಹಣ ಹಾಕಬೇಕು ಎಂದು ವಂಚಕ ಹೇಳಿದಾಗ ಹಂತ ಹಂತವಾಗಿ 1 ಲಕ್ಷದ 70 ಸಾವಿರ ರೂಪಾಯಿ ಹಣವನ್ನು ವಂಚಕನ ಖಾತೆಗೆ ಹಾಕಿದ್ದಾಳೆ.

ಕೆಲವು ದಿನಗಳ ನಂತರ ಅನುಮಾನಗೊಂಡ ಆಕೆ ಪರಿಶೀಲಿಸಿದಾಗ ತಾನು ಮೋಸ ಹೋಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಯುವತಿ ಉತ್ತರ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.