ETV Bharat / city

ಮನೆಯಲ್ಲೇ ಕೂತು ಹಣ ದೋಚ್ತಾರೆ ಖದೀಮರು: ಲಾಕ್​ಡೌನ್​ ವೇಳೆ ಹೀಗಿತ್ತು ಸಿಲಿಕಾನ್​ ಸಿಟಿಯ ಸೈಬರ್ ಕ್ರೈಂ ಕಹಾನಿ!

ಲಾಕ್​ಡೌನ್ ಘೋಷಣೆಯಾದಾಗಿನಿಂದ ಒಂದಲ್ಲಾ ಒಂದು ರೀತಿಯ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಖದೀಮರು ಮನೆಯಲ್ಲಿಯೇ ಕುಳಿತು ವೆಬ್​​ಸೈಟ್​ಗಳನ್ನು ಹ್ಯಾಕ್​ ಮಾಡಿ ಹಣ ದೋಚುತ್ತಿದ್ದಾರೆ.

ccb
ಸಿಸಿಬಿ
author img

By

Published : May 13, 2020, 10:46 PM IST

ಬೆಂಗಳೂರು: ಕೊರೊನಾ ಮಹಾಮಾರಿ ಎಲ್ಲೆಡೆ ತಲ್ಲಣ ಸೃಷ್ಟಿ‌ ಮಾಡ್ತಿದೆ. ಕೆಲವರು ಕೆಲಸ ಇಲ್ಲದೆ ಮನೆಯಲ್ಲೇ ಇದ್ದಾರೆ. ಈ ಪರಿಸ್ಥಿತಿಯನ್ನ ದುರ್ಬಳಕೆ ಮಾಡಿಕೊಂಡಿರುವ ಸೈಬರ್ ಖದೀಮರು, ಮನೆಯಲ್ಲೇ ಕೂತು ವೆಬ್​​​ಸೈಟ್​ಗಳನ್ನ ಹ್ಯಾಕ್ ಮಾಡುತ್ತಿದ್ದಾರೆ. ಸದ್ಯ ಲಾಕ್​ಡೌನ್​ ಸಂದರ್ಭದಲ್ಲಿ ಹಲವಾರು ರೀತಿಯ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ. ಅವುಗಳಲ್ಲಿ ಕೆಲವೊಂದು ಇಲ್ಲಿವೆ.

1.ವಾಯುಸೇನೆ ಹೆಸರಲ್ಲಿ ದೋಖಾ

ಹೆಚ್ಚಾಗಿ ಸೈಬರ್ ಖದೀಮರು ಸೇನೆಯ ಹೆಸರಿನಲ್ಲಿ‌ ಬಹುತೇಕ ದೋಖಾ ಮಾಡುತ್ತಾರೆ. ಹಾಗೆಯೇ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಸಂಜಯ್ ಎಂಬುವವರನ್ನ ಪರಿಚಯಿಸಿಕೊಂಡಿದ್ದ ಖದೀಮನೊಬ್ಬ ಮೇಲಾಧಿಕಾರಿಗಳಿಗೆ ದೇವರ ವಿಗ್ರಹ ಬೇಕಿದೆ. ಅಲ್ಲದೆ 40 ಸಾವಿರ ಮೌಲ್ಯದ ಮೂರ್ತಿ ಖರೀದಿಸುವುದಾಗಿ ಹೇಳಿ ನಂತರ ಮೊದಲು ಖಾತೆಗೆ 1 ರೂಪಾಯಿ ಹಾಕಿ ಎಂದಿದ್ದಾನೆ. ವ್ಯಾಪಾರಸ್ಥ ಸಂಜಯ್ 5 ರೂಪಾಯಿ ತದ ನಂತರ 10 ರೂಪಾಯಿ ವರ್ಗಾಯಿಸಿದ್ದಾರೆ‌ . ಈ ರೀತಿ ವ್ಯವಹರಿಸುವುದು ನಮ್ಮ ವಾಯುಸೇನೆ ಪದ್ಧತಿ ಎಂದು ನಂಬಿಸಿದ್ದಾನೆ. ಇದಾದ ಕೆಲ ನಿಮಿಷಗಳ ಬಳಿಕ ಸಂಜಯ್ ಅವರ ಖಾತೆಯಿಂದ 8 ಸಾವಿರ ದೋಚಿದ್ದಾನೆ.

2.ಐಫೋನ್ ಗಿಫ್ಟ್ ನೆಪದಲ್ಲಿ ದೋಖಾ

ರಾಮ್ ಪ್ರಸಾದ್ ಎಂಬುವವರು ಅಪರಿಚಿತರ ಐಫೋನ್​​ ಆಸೆಗೆ ಬಿದ್ದು 25 ಸಾವಿರ ಕಳೆದುಕೊಂಡಿದ್ದಾರೆ. ಮೂರು ದಿನಗಳ ಹಿಂದೆ ರಾಮ್ ಪ್ರಸಾದ್ ಅವರಿಗೆ ಕರೆ ಮಾಡಿದ ದುಷ್ಕರ್ಮಿ ನಿಮ್ಮ ಫೋನ್ ನಂಬರ್​ಗೆ ಐಫೋನ್ ಉಡುಗೊರೆ ಬಂದಿದೆ ಎಂದು ಹೇಳಿ ಲಿಂಕ್​​ಅನ್ನು ಕಳುಹಿಸಿದ್ದಾನೆ. ಇದನ್ನ ನಂಬಿದ ವ್ಯಕ್ತಿ ಲಿಂಕ್​ ಕ್ಲಿಕ್​ ಮಾಡಿ ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡಿದ್ದಾನೆ.

3.ವಕೀಲರೊಬ್ಬರ ಕಂಪ್ಯೂಟರ್ ಹ್ಯಾಕ್
ಗಾಂಧೀನಗರದ ನಿವಾಸಿ ವಕೀಲ ಬಾಬುಲಾಲ್ ಎಂಬುವವರು ತೆರಿಗೆ ಸಲಹೆಗಾರರಾಗಿದ್ದು, ಗಾಂಧೀನಗರದಲ್ಲಿ ಕನ್ಸಲ್ಟೆನ್ಸಿ ಹೆಸರಿನಲ್ಲಿ ಕಂಪನಿ ನಡೆಸುತ್ತಿದ್ದರು. ಲಾಕ್​ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 24ರಂದು ಕಚೇರಿಯನ್ನು ಬಂದ್ ಮಾಡಲಾಗಿತ್ತು. ಲಾಕ್​ಡೌನ್ ಸಡಿಲಿಕೆಯಾದ ಹಿನ್ನೆಲೆ ಮತ್ತೆ ಏಪ್ರಿಲ್​ 3ರಂದು ಕಚೇರಿ ಬಾಗಿಲು ತೆರೆದು ಪರಿಶೀಲಿಸಿದಾಗ ಕಂಪ್ಯೂಟರ್ ಕಾರ್ಯನಿರ್ವಹಿಸಿಲ್ಲ. ಎರಡು ದಿನಗಳ ನಂತರ ತಂತ್ರಜ್ಞರನ್ನು ಕರೆದು ಪರಿಶೀಲನೆ ನಡೆಸಿದಾಗ ಸೈಬರ್ ದಾಳಿ ನಡೆದಿರುವುದು ಕಂಡು ಬಂದಿದೆ. ಕಚೇರಿಯಲ್ಲಿನ ಎರಡು ಕಂಪ್ಯೂಟರ್​​​​ಗಳ ಡೆಸ್ಕ್​ ಟಾಪ್​ನಲ್ಲಿ ಎಲ್ಲಾ ಕಡತಗಳನ್ನು ಸ್ವಾಮ್ಯಕ್ಕೆ ತೆಗೆದುಕೊಂಡಿದ್ದೇವೆ ಎಂಬ ಸಂದೇಶ ಬಂದಿದೆ. ಈ ಹಿನ್ನೆಲೆ ವಕೀಲರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

4.ಆದಾಯ ತೆರಿಗೆ ಇಲಾಖೆ ನಕಲಿ ಲಿಂಕ್
ಆದಾಯ ತೆರಿಗೆ ಹೆಸರಿನಲ್ಲಿ ಮೊಬೈಲ್​​​​ಗೆ ಇಮೇಲ್ ಮೂಲಕ ಲಿಂಕ್ ಕಳುಹಿಸಿ, ಲಿಂಕ್​ನಲ್ಲಿ ನಂಬರ್, ಬ್ಯಾಂಕ್ ವಿವರ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನಂಬರ್, ಎಟಿಎಂ ಪಿನ್ ಸೇರಿದಂತೆ ಮತ್ತಿತರೆ ಮಾಹಿತಿಯನ್ನು ಭರ್ತಿ ಮಾಡಿಸಿಕೊಂಡು ಆದಾಯ ತೆರಿಗೆ ಇಲಾಖೆಯವರು ಎಂದು ಮೊದಲು ನಂಬಿಸುತ್ತಾರೆ. ಇದಾದ ಕೆಲ ಹೊತ್ತಿನಲ್ಲೇ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲಾ ಫೇಕ್. ಯಾವುದೇ ಕಾರಣಕ್ಕೂ ಬ್ಯಾಂಕ್​​ನ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಐಟಿ ಇಲಾಖೆ ಜನರಿಗೆ ಸೂಚನೆ ನೀಡಿದೆ.

5.ವರ್ಕ್ ಫ್ರಮ್ ಹೋಂ ಸಿಸ್ಟಮ್ ಟಾರ್ಗೆಟ್
ಲಾಕ್​ಡೌನ್​​ ಆದಾಗಿನಿಂದಲೂ ಕೆಲವು ಐಟಿ ಕಂಪನಿಗಳ ಉದ್ಯೋಗಿಗಳು ಮನೆಯಿಂದಲೇ ಕಂಪನಿ ಕೊಟ್ಟ ಕಂಪ್ಯೂಟರ್​ಗಳಿಂದ ಕೆಲಸ ಮಾಡುತ್ತಿದ್ದಾರೆ. ಅದೇ ಕಂಪ್ಯೂಟರ್​​ಅನ್ನು ತಮ್ಮ ವೈಯುಕ್ತಿಕ ವಿಚಾರಕ್ಕೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನ ಹ್ಯಾಕ್ ಮಾಡುತ್ತಿರುವ ಖದೀಮರು, ಇಮೇಲ್​ ಹಾಗೂ ಬ್ಯಾಂಕ್ ಅಕೌಂಟ್ ಬಳಸಿಕೊಂಡು ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.