ETV Bharat / city

10 ರೂಪಾಯಿಗೂ ಹಲ್ಲೆ ಮಾಡ್ತಿದ್ದ.... ಕಡೆಗೆ ಬೀದಿ ಹೆಣವಾದ! - ಬೆಂಗಳೂರು ಅಪರಾಧ ಸುದ್ದಿ

ಕೊಲೆಯಾಗಿರುವ ಸೋಯೆಬ್, ಹಲ್ಲೆಗೊಳಗಾದವರ ಬಳಿ 10 ರೂಪಾಯಿ ಇದ್ದರೂ ಅದನ್ನ ಕಿತ್ತುಕೊಂಡು ಹಲ್ಲೆ ನಡೆಸಿ ಓಡಿ ಹೋಗುತ್ತಿದ್ದ. ವಿಪರೀತ ಗಾಂಜಾ ವ್ಯಸನಿಯಾಗಿದ್ದ ಸೋಯೆಬ್, ನಿನ್ನೆ ಗೋರಿಪಾಳ್ಯದಲ್ಲಿರುವ ತನ್ನ ಅಕ್ಕನ ಮನೆಗೆ ಬಂದಿದ್ದಾನೆ. ಆದರೆ ಇಂದು ಈತ ಕೊಲೆಯಾಗಿ ಹೋಗಿದ್ದಾನೆ.

Criminal murdered in Bangalore
ಸಿಲಿಕಾನ್​ ಸಿಟಿಯಲ್ಲಿ ಮತ್ತೊಂದು ಮರ್ಡರ್​!
author img

By

Published : Jan 12, 2020, 6:32 PM IST

ಬೆಂಗಳೂರು: ಹಳೇ ವೈಷಮ್ಯಕ್ಕೆ ವ್ಯಕ್ತಿಯೋರ್ವನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೋಯೆಬ್ ಎಂಬ ನಟೋರಿಯಸ್ ಕ್ರಿಮಿನಲ್​ನನ್ನು ಗೋರಿಪಾಳ್ಯದಲ್ಲಿ ಇಂದು ಬೆಳಗಿನ ಜಾವ ನಾಲ್ಕೂವರೆ ಸುಮಾರಿಗೆ ಹಂತಕರು ಕೊಚ್ಚಿ ಕೊಂದಿದ್ದಾರೆ.

ಥಣಿಸಂದ್ರದ ನಿವಾಸಿಯಾಗಿರುವ ಸೋಯೆಬ್ ಮೇಲೆ ಚಂದ್ರಾ ಲೇಔಟ್, ಬ್ಯಾಟರಾಯನಪುರ, ಜೆಜೆನಗರ ಪೊಲೀಸ್ ಠಾಣೆಗಳಲ್ಲಿ ಒಟ್ಟು 25 ಪ್ರಕರಣಗಳಿವೆ. ಹುಟ್ಟು ಕ್ರಿಮಿನಲ್ ಆಗಿರುವ ಸೋಯೆಬ್, ಲಾಂಗ್ ಹಿಡಿದು ರಾಬರಿಗೆ ನಿಂತರೆ ಮೊದಲು ಗಾಯಗೊಳಿಸಿ ನಂತರ ಸುಲಿಗೆ ಮಾಡ್ತಿದ್ದನಂತೆ.

ಸಿಲಿಕಾನ್​ ಸಿಟಿಯಲ್ಲಿ ಮತ್ತೊಂದು ಮರ್ಡರ್​!

ಹಲ್ಲೆಗೊಳಗಾದವರ ಬಳಿ 10 ರೂಪಾಯಿ ಇದ್ದರೂ ಅದನ್ನ ಕಿತ್ತುಕೊಂಡು ಹಲ್ಲೆ ನಡೆಸಿ ಓಡಿ ಹೋಗುತ್ತಿದ್ದ. ವಿಪರೀತ ಗಾಂಜಾ ವ್ಯಸನಿಯಾಗಿದ್ದ ಸೋಯೆಬ್, ನಿನ್ನೆ ಗೋರಿಪಾಳ್ಯದಲ್ಲಿರುವ ತನ್ನ ಅಕ್ಕನ ಮನೆಗೆ ಬಂದಿದ್ದಾನೆ. ಈ ವೇಳೆ ಬೈಕ್ ವಿಚಾರದಲ್ಲಿ ಖಾಲಿದ್ ಎಂಬಾತನ ಜೊತೆ ಕಿರಿಕ್ ನಡೆಸಿದ್ದ.

ಇವರಿಬ್ಬರ ನಡುವೆ ಹಣಕಾಸಿನ ಸಮಸ್ಯೆ ಕೂಡ ಇತ್ತು. ಬೈಕ್ ವಿಚಾರದಲ್ಲಾದ ಸಣ್ಣ ಜಗಳ ಸ್ಥಳದಲ್ಲಿ ಬಗೆಹರಿದರೂ, ಬೆಳಗಿನ ಜಾವದವರೆಗೂ ಗಾಂಜಾ ನಶೆಯಲ್ಲಿದ್ದ ಸೊಯೇಬ್ ಮೇಲೆ ಏಕಾಏಕಿ ಎರಗಿದ ಆರೋಪಿಗಳು ಕೊಂದು ಹಾಕಿದ್ದಾರೆ ಎನ್ನಲಾಗಿದೆ. ಈತನನ್ನು ಹರ್ಷದ್, ಖಾಲೀದ್, ಸುಹೇಲ್, ರಾಹೀಲ್ ಮತ್ತು ಇರ್ಫಾನ್ ಕೊಂದಿರುವ ಶಂಕೆ ಇದೆ.

ಸದ್ಯ ಹರ್ಷದ್ ಎಂಬಾತನನ್ನು ಜೆಜೆ ನಗರ ಪೊಲೀಸ್ ಇನ್ಸ್​ಪೆಕ್ಟರ್ ವಶಕ್ಕೆ ಪಡೆದಿದ್ದು, ಅವನ ಮೂಲಕ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Intro:10ರೂಪಾಯಿಗು ಹಲ್ಲೆ ಮಾಡ್ತಿದ್ದ
ಕೊನೆಗೆ ಬೀದಿ ಹೆಣವಾದ

ಬೈಟ್ ಚೇತನ್ ಸಿಂಗ್ ರಾಥೋಡ್ ಕೇಂದ್ರ ವಿಭಾಗ
Mojo

ದ್ವೇಷಕ್ಕೆ ಕೊಚ್ಚಿ ಕೊಲೆ ಮಾಡಿರುವ ಘಟನೆ ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸೋಯೆಬ್ ಎಂಬ ನಟೋರಿಯಸ್ ಕ್ರಿಮಿನಲ್ ನನ್ನ ಗೋರಿಪಾಳ್ಯದಲ್ಲಿ ಇಂದು ಬೆಳಗಿನ ಜಾವ ನಾಲ್ಕೂವರೆಗೆ ಹಂತಕರು ಕೊಚ್ಚಿ ಕೊಂದಿದ್ದಾರೆ.

ಥಣಿಸಂದ್ರದ ನಿವಾಸಿಯಾಗಿರುವ ಸೊಯೇಬ್ ಮೇಲೆ ಚಂದ್ರಾಲೇಔಟ್ ಬ್ಯಾಟರಾಯನಪುರ , ಜೆಜೆನಗರ ಪೊಲೀಸ್ ಠಾಣೆಗಳಲ್ಲಿ ಒಟ್ಟು 25 ಕೇಸುಗಳಿವೆ. ಹುಟ್ಟಾ ಕ್ರಿಮಿನಲ್ ಆಗಿರುವ ಸೊಯೇಬ್, ಲಾಂಗ್ ಹಿಡಿದು ರಾಬರಿಗೆ ನಿಂತರೆ ಮೊದಲು ಗಾಯಗೊಳಿಸಿ ನಂತರ ಸುಲಿಗೆ ಮಾಡ್ತಿದ್ದ .

ಹಲ್ಲೆ ಗೊಳಗಾದವರ ಬಳಿ 10 ರೂಪಾಯಿ ಇದ್ದರೂ ಅದನ್ನ ಕಿತ್ತುಕೊಂಡು ಹಲ್ಲೆ ನಡೆಸಿ ಓಡಿ ಹೋಗುತ್ತಿದ್ದ . ವಿಪರೀತ ಗಾಂಜಾ ವ್ಯಸನಿಯಾಗಿರುವ ಸೊಯೇಬ್ ನೆನ್ನೆ ಗೋರಿಪಾಳ್ಯದಲ್ಲಿರುವ ತನ್ನ ಅಕ್ಕನ ಮನೆಗೆ ಬಂದಿದ್ದಾನೆ. ಈ ವೇಳೆ ಬೈಕ್ ಟಚ್ ಆಗಿದೆ ಎಂಬ ಕಾರಣಕ್ಕೆ ಖಾಲಿದ್ ಎಂಬಾತನ ಜೊತೆ ಕಿರಿಕ್ ನಡೆಸಿದ್ದ

ಈ ಇವರಿಬ್ಬರ ನಡುವೆ ಹಣಕಾಸಿನ ಸಮಸ್ಯೆ ಕೂಡ ಇತ್ತು. ಬೈಕ್ ಟಚ್ ಸಣ್ಣ ಜಗಳ ಸ್ಥಳದಲ್ಲಿ ಬಗೆಹರಿದರೂ ಬೆಳಗಿನ ಜಾವದವರೆಗೂ ಗಾಂಜಾ ನಶೆಯಲ್ಲಿದ್ದ ಸೊಯೇಬ್ ಮೇಲೆ ಏಕಾಏಕಿ ನುಗ್ಗಿದ ನಾಲ್ವರು ಕೊಂದು ಹಾಕಿದ್ದಾರೆ. ಇನ್ನು ಹರ್ಷದ್ , ಖಾಲೀದ್, ಸುಹೇಲ್, ರಾಹೀಲ್, ಮತ್ತು ಇರ್ಫಾನ್ ಕೊಂದಿರುವ ಶಂಕೆ ಇದೆ. ಸದ್ಯ ಹರ್ಷದ್ ಎಂಬಾತನನ್ನ ಈಗಾಗಲೆ ಜೆಜೆ ನಗರ ಪೊಲೀಸ್ ಇನ್ಸ್ಪೆಕ್ಟರ್ ವಶಕ್ಕೆ ಪಡೆದಿದ್ದು ಅವನ ಮೂಲಕ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. Body:KN_BNG_07_MURDER_7204498Conclusion:KN_BNG_07_MURDER_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.