ಬೆಂಗಳೂರು: ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೊಲೀಸ್ ಇಲಾಖೆಗೂ ಕೊರೊನಾ ಭೀತಿ ಹುಟ್ಟಿಸಿದೆ. ಇಲ್ಲಿಯವರೆಗೆ 120ಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು ತಗುಲಿದ್ದು, ಕೆಲಸಕ್ಕೆ ಬರಲು ಸಿಬ್ಬಂದಿ ಹಿಂಜರಿಯುತ್ತಿದ್ದಾರೆ.
ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಇಬ್ಬರು ಎಎಸ್ಐ, ಒಬ್ಬ ಕಾನ್ಸ್ಟೇಬಲ್, ಡಿಜಿ ಕಚೇರಿಯ ಲೆಕ್ಕಾಧಿಕಾರಿ ಕೋವಿಡ್ಗೆ ಬಲಿಯಾಗಿದ್ದಾರೆ. ಈಗಾಗಲೇ 15,800 ಸಿಬ್ಬಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಇವರಲ್ಲಿ 9,700 ಸಿಬ್ಬಂದಿಗೆ ಎರಡನೇ ಬಾರಿಯ ವಾಕ್ಸಿನೇಷನ್ ಕೂಡ ಆಗಿದೆ. ಆದರೆ, ಪಾಸಿಟಿವ್ ಪ್ರಮಾಣ ಮಾತ್ರ ಹೆಚ್ಚಾಗುತ್ತಲೇ ಇದ್ದು, 50 ವರ್ಷ ಮೇಲ್ಪಟ್ಟವರೆ ಹೆಚ್ಚಾಗಿ ಕೊರೊನಾಗೆ ಬಲಿಯಾಗುತ್ತಿದ್ದಾರೆ.
ಇದನ್ನೂ ಓದಿ: ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಸಾರಿಗೆ ನೌಕರರು... ಬೀದಿಗಿಳಿದರೆ ಬಂಧನಕ್ಕೆ ಸಜ್ಜಾದ ಪೊಲೀಸರು