ETV Bharat / city

ಕೋವಿಡ್ ತ್ಯಾಜ್ಯ ನಿರ್ವಹಣೆ: ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಮಾರ್ಗಸೂಚಿಗಳೇನು? - ಕೊರೊನಾ ತ್ಯಾಜ್ಯ ನಿರ್ವಹಣೆ

ಕೋವಿಡ್-19 ರೋಗಿಗಳ ಪತ್ತೆ/ಚಿಕಿತ್ಸೆ/ಪ್ರತ್ಯೇಕವಾಗಿ ಇರಿಸುವಿಕೆಯ ಸಮಯದಲ್ಲಿ ಉತ್ಪನ್ನವಾದ ತ್ಯಾಜ್ಯಗಳ ನಿರ್ವಹಣೆ, ಉಪಚಾರ ಹಾಗೂ ವಿಲೇವಾರಿ ಕುರಿತು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

COVID-19 Waste management
ಬಿಬಿಎಂಪಿ
author img

By

Published : Aug 24, 2020, 8:03 PM IST

ಬೆಂಗಳೂರು: ಕೋವಿಡ್-19 ಘನತ್ಯಾಜ್ಯಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕೋವಿಡ್-19 ರೋಗಿಗಳ ಪತ್ತೆ/ಚಿಕಿತ್ಸೆ/ಪ್ರತ್ಯೇಕವಾಗಿ ಇರಿಸುವಿಕೆಯ ಸಮಯದಲ್ಲಿ ಉತ್ಪನ್ನವಾದ ತ್ಯಾಜ್ಯಗಳ ನಿರ್ವಹಣೆ, ಉಪಚಾರ ಹಾಗೂ ವಿಲೇವಾರಿ ಕುರಿತು ಪರಿಷ್ಕೃತ ಮಾರ್ಗಸೂಚಿಗಳನ್ನೂ ಅದರಲ್ಲಿ ಪ್ರಕಟಿಸಿದೆ. ಅದರಂತೆ, ರಾಜ್ಯ ಸರ್ಕಾರ ಮನೆಯ ಆರೈಕೆಯಲ್ಲಿರುವ ಸೋಂಕಿತರಿಗೆ ಉತ್ಪಾದಿಸುವ ತ್ಯಾಜ್ಯಗಳ ನಿರ್ವಹಣೆಯ ಕುರಿತೂ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಮನೆಯ ಆರೈಕೆಯಲ್ಲಿರುವ ಸೋಂಕಿತರಿಂದ ಉತ್ಪನ್ನವಾಗುವ ಘನತ್ಯಾಜ್ಯಗಳ ನಿರ್ವಹಣೆ ಮಾಡಲು ಬಿಬಿಎಂಪಿ ವಿಶೇಷ ತಂಡಗಳನ್ನು ರಚಿಸಿದೆ. ಇಂತಹ ಪ್ರಸಂಗದಲ್ಲಿ ರಾಜ್ಯದ ಎಲ್ಲ ಬಿಬಿಎಂಪಿ, ನಗರ ಸಭೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು.

ಅನುಸರಿಸಬೇಕಾದ ಕ್ರಮಗಳೇನು?: ಮನೆ ಆರೈಕೆಯಲ್ಲಿರುವ ಸೋಂಕಿತರು ಮತ್ತು ಅವರ ಕುಟುಂಬ ಸದಸ್ಯರು ಘನ ತ್ಯಾಜ್ಯ ನಿರ್ವಹಣೆ ಮಾಡಲು ಅನುಸರಿಸಬೇಕಾದ ಹೀಗಿವೆ. ಪೀಡಿತರು ಬಳಸುವ ಮಾಸ್ಕ್​​ಗಳು, ಟಿಶ್ಯೂಗಳು, ಶೌಚಾಲಯ ವಸ್ತುಗಳು ಅಥವಾ ರಕ್ತ ಶರೀರದ ಸ್ರಾವಗಳಿಂದ ಮಲಿನವಾದ ಸ್ವಾಬ್​​ಗಳು, ಬಳಸಿದ ಸಿರಂಜ್​ಗಳು, ಔಷಧಗಳು ಸೇರಿದಂತೆ ಅವುಗಳನ್ನು ಜೀವ-ವೈದ್ಯಕೀಯ ತ್ಯಾಜ್ಯವೆಂದು ಪರಿಗಣಿಸಬೇಕು. ಮತ್ತು ಶೇ.1ರಷ್ಟು ಹೈಪೋಕ್ಲೋರೆಟ್ ದ್ರಾವಣದಲ್ಲಿ ನೆನೆಸಿ ಸಿಂಪಡಿಸುವುದು ಹಾಗೂ ಮುಚ್ಚಳವಿರುವ ಪ್ರತ್ಯೇಕವಾಗಿ ಹಳದಿ ಬಣ್ಣದ ಚೀಲದಲ್ಲಿ ವಿಲೇವಾರಿ ಮಾಡಬೇಕು.

ಕಾಗದದ ಚೀಲದಲ್ಲಿ ಇಡಬೇಕು: ಸ್ಥಳೀಯ ನಾಗರಿಕ/ಬಿಬಿಎಂಪಿ ಅಧಿಕಾರಿಗಳು ಮನೆಯ ಆರೈಕೆಯಲ್ಲಿರುವ ಸೋಂಕಿತರಿಗೆ ಹಳದಿ ಬಣ್ಣದ ಚೀಲಗಳನ್ನು ಒದಗಿಸಬೇಕು ಹಾಗೂ ಅದನ್ನು ಅಧಿಕಾರಿಗಳು ವಾರಕ್ಕೆರಡು ಬಾರಿ ಸಂಗ್ರಹಿಸುವಂತೆ ಸೂಚಿಸಲಾಗಿದೆ. ಇನ್ನು ಆರೈಕೆ ಮಾಡುವವರು ಮತ್ತು ಇತರ ಕುಟುಂಬ ಸದಸ್ಯರು ಬಳಸುವ ಮುಖ ಮಾಸ್ಕ್ ಮತ್ತು ಗ್ಲೌಸ್​​ಗಳನ್ನು ಮರುಬಳಕೆ ತಡೆಗಟ್ಟಲು ಸಾಮಾನ್ಯ ತ್ಯಾಜ್ಯದಂತೆ ವಿಲೇವಾರಿ ಮಾಡುವ ಮೊದಲು ಕನಿಷ್ಠ 72 ಗಂಟೆಗಳ ಕಾಲ ಕಾಗದದ ಚೀಲದಲ್ಲಿ ಇಡಬೇಕು.

ಬಿಬಿಎಂಪಿಯ ವಿಶೇಷ ಆಯುಕ್ತ (ಆರೋಗ್ಯ-ಘನತ್ಯಾಜ್ಯ) ರಂದೀಪ್

ಮನೆ ಆರೈಕೆಯಲ್ಲಿರುವ ಪೀಡಿತರು ಮತ್ತು ಅವರ ಕುಟುಂಬ ಸದಸ್ಯರು ಬಳಸಿದ ಅಥವಾ ಅವರಿಂದ ಉತ್ಪನ್ನವಾದ ಉಳಿದ ಆಹಾರ, ಹಣ್ಣಿನ ರಸದ ಖಾಲಿ ಬಾಟಲಿಗಳು, ಬಳಸಿ ಬಿಸಾಡಬಹುದಾದ ಊಟದ ತಟ್ಟೆ-ಲೋಟಗಳು, ಟೆಟ್ರಾ ಪ್ಯಾಕ್​ಗಳು ಕುಡಿಯುವ ನೀರಿನ ಖಾಲಿ ಬಾಟಲಿಗಳು, ಪ್ಯಾಕೇಜಿಂಗ್ ವಸ್ತುಗಳು ಅಡುಗೆ ಮನೆಯಲ್ಲಿ ಉತ್ಪನ್ನವಾದ ತ್ಯಾಜ್ಯ ನಿರುಪಯುಕ್ತ, ಕಾಗದಗಳು, ನಿರುಪಯುಕ್ತ ಪ್ಲಾಸ್ಟಿಕ್​​ಗಳು, ನೆಲ ಶುಚಿಗೊಸಿದಾಗ ಬಂದ ಧೂಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು.

ಸುರಕ್ಷಿತವಾಗಿ ಕಟ್ಟಿ: ಬಿಬಿಎಂಪಿ ಅಧಿಕಾರಿಗಳು ನೇಮಿಸಿರುವ ತ್ಯಾಜ್ಯ ಸಂಗ್ರಾಹಕರಿಗೆ ಈ ತ್ಯಾಜ್ಯವನ್ನು ಕೋಪಿಷ್ ಸಕಾರಾತ್ಮಕ ವ್ಯಕ್ತಿಯ ಸೋಂಕಿತ ತ್ಯಾಜ್ಯದೊಂದಿಗೆ ಬೆರೆಸಬಾರದು. ಅದನ್ನು ಹಳದಿ ಚೀಲಕ್ಕೆ ಪ್ರತ್ಯೇಕವಾಗಿರಿಸಬೇಕು.

ಹಳದಿ ಚೀಲಗಳು ವಿಲೇವಾರಿ: ಎಲ್ಲ ನಗರ ಸಭೆಗಳು ಹಾಗೂ ಗ್ರಾಮ ಪಂಚಾಯಿತಿಗಳು ಸಾಮಾನ್ಯ ಜೀವ ವೈದ್ಯಕೀಯ ಉಪಚಾರ ಸೌಲಭ್ಯಗಳಿಂದ ನೀಡಲಾಗಿರುವ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದು ಪದ್ಧತಿಯಿಂದ ಹಳದಿ ಚೀಲಗಳ ಸುರಕ್ಷಿತ ವಿಲೇವಾರಿಯನ್ನು ಖಾತ್ರಿ ಪಡಿಸಿಕೊಳ್ಳಬೇಕು. ಮನೆಯವರು ಜೀವ ವೈದ್ಯಕೀಯ ತ್ಯಾಜ್ಯವಿರುವ ಹಳದಿ ಚೀಲಗಳನ್ನು ಬಾಗಿಲ ಬಳಿಯ ಅಧಿಕೃತ ತ್ಯಾಜ್ಯ ಸಂಗ್ರಾಹಕರಿಗೆ ನೀಡಬೇಕು.

ನಿಗದಿಪಡಿಸಿರುವ ಸಂಗ್ರಹ ಕೇಂದ್ರಗಳಲ್ಲಿ ಜೀವ ವೈದ್ಯಕೀಯ ತ್ಯಾಜ್ಯವನ್ನು ಅಧಿಕಾರಿಗಳು ಇಡಬೇಕು. ಮುಂದೆ ನಾಗರಿಕ/ಬಿಬಿಎಂಪಿ ಅಧಿಕಾರಿಗಳು ಸಾಮಾನ್ಯ ಜೀವ ವೈದ್ಯಕೀಯ ಉಪಚಾರ ಸೌಲಭ್ಯಗಳ ಮೂಲಕ ಸುರಕ್ಷಿತ ವಿಲೇವಾರಿಯನ್ನು ಖಾತರಿಪಡಿಸಿಕೊಳ್ಳಬೇಕು ಅಥವಾ ಸಾಮಾನ್ಯ ಜೀವ ವೈದ್ಯಕೀಯ ಉಪಚಾರ ಸೌಲಭ್ಯಗಳಿಂದ (CBWTF) ನೇಮಕವಾದ ಸಂಗ್ರಾಹಕರಿಗೆ ಮನೆಯ ಬಾಗಿಲಲ್ಲಿ ಈ ಜೀವ ವೈದ್ಯಕೀಯ ತ್ಯಾಜ್ಯವನ್ನು ಹಸ್ತಾಂತರಿಸಬೇಕು. ಮನೆಗಳಿಂದ ಹಳದಿ ಚೀಲಗಳನ್ನು ಸಂಗ್ರಹಿಸಿದ ವ್ಯಕ್ತಿಗಳು ವೈದ್ಯಕೀಯ ಮುಖವಾಡ ಕೈಗವಸನ್ನು ಏಪ್ರಾನ್​ ಮತ್ತು ಗಂ ಬೂಟ್​ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕೋವಿಡ್ ತ್ಯಾಜ್ಯ ಸಂಗ್ರಹಿಸುವವರಿಗೆ ಪುಲ್ ಬಾಡಿ ಕಿಟ್ ಕೊಟ್ಟಿದ್ದೇವೆ. ಅವರೇ ಹೋಗಿ ಮನೆಯ ಆರೈಕೆಯಲ್ಲಿರುವ ಸೋಂಕಿತರಿಂದ ಉತ್ಪನ್ನವಾಗುವ ಘನತ್ಯಾಜ್ಯಗಳ ನಿರ್ವಹಣೆ ಮಾಡುತ್ತಾರೆ. ಅದಕ್ಕಾಗಿ ಪ್ರತ್ಯೇಕ ಟಿಪ್ಪರ್ ಆಟೋದಲ್ಲಿ ವಾರ್ಡ್​ನ ಒಂದು ಸ್ಥಳದಲ್ಲಿ ಸಂಗ್ರಹಣೆ ಮಾಡುತ್ತಾರೆ. ನಗರದಲ್ಲಿ ಸುಮಾರು 8 ಸಾವಿರ ಮಂದಿ ಹೋಮ್​ ಐಸೋಲೇಷನ್​ನಲ್ಲಿ ಇದ್ದಾರೆ. ಅವರಿಂದ ಅಂದಾಜು 50-70 ಟನ್ ಕೋವಿಡ್ ತ್ಯಾಜ್ಯ ಸಂಗ್ರಹವಾಗುತ್ತದೆ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ (ಆರೋಗ್ಯ-ಘನತ್ಯಾಜ್ಯ) ರಂದೀಪ್ ಅವರು ಈಟಿವಿ ಭಾರತ್ಗೆ ತಿಳಿಸಿದರು.

ಹೋಮ್​ ಐಸೋಲೇಷನ್​ನಿಂದ ಸಂಗ್ರಹವಾದ ಕೋವಿಡ್ ತ್ಯಾಜ್ಯವನ್ನು ಹೈಪೋಕ್ಲೋರೆಟ್ ದ್ರಾವಣ ಹಾಕಿ ಸುಡಲಾಗುತ್ತದೆ. ಇನ್ನು ಆಸ್ಪತ್ರೆಗಳಿಂದಲೂ ಸುಮಾರು 150-200 ಟನ್​ನಷ್ಟು ಕೋವಿಡ್ ತ್ಯಾಜ್ಯ ಸಂಗ್ರಹವಾಗುತ್ತದೆ. ಅದನ್ನು ಕೆಎಸ್​ಬಿಸಿ ಮಾನಿಟರ್ ಮಾಡುತ್ತದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.