ETV Bharat / city

ರೋಗ ನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ರೂಪಾಂತರಿ ಕೊರೊನಾ..!

author img

By

Published : Dec 31, 2020, 12:26 AM IST

ಹಳೆಯ ವೈರಸ್​ಗಿಂತ ರೂಪಾಂತರಿ ವೈರಸ್ ಅತ್ಯಂತ ವೇಗವಾಗಿ ಹರಡುತ್ತದೆ. ಇದರಿಂದಾಗಿ ಮುಂಜಾಗ್ರತೆ ತೆಗೆದುಕೊಳ್ಳಬೇಕೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

corona virus strain and immunity
ರೋಗ ನಿರೋಧಕ ಶಕ್ತಿ ಮತ್ತು ರೂಪಾಂತರಿ ವೈರಸ್

ಬೆಂಗಳೂರು: ಭಾರತಕ್ಕೆ ಬ್ರಿಟನ್​ ವೈರಸ್ ಕಾಲಿಟ್ಟಾಗಿದೆ. ಹಳೇ ವೈರಸ್ ಸಂಕಷ್ಟದಿಂದಲ್ಲೇ ಹೊರಬರಲು ಸಮಯ ತೆಗೆದುಕೊಂಡ ಮಂದಿಗೆ ಇದೀಗ ರೂಪಾಂತರದ ಸೋಂಕು ಕಾಟ ಶುರುವಾಗಿದೆ‌‌.

ಡಾ.ಜಗದೀಶ್ ಹಿರೇಮಠ್

ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯಿಂದ ಈ ರೂಪಾಂತರದ ವೈರಸ್ ತಪ್ಪಿಸಿಕೊಳ್ಳುತ್ತದೆ. ಹಾಗೆಯೇ ವೈರಸ್​ ವಿರುದ್ಧ ಕೆಲಸ ಮಾಡಲು ದೇಹದಲ್ಲಿನ ರೋಗ ನಿರೋಧಕ ಶಕ್ತಿ ತುಂಬಾ ದಿನ ತೆಗೆದುಕೊಳ್ಳುತ್ತದೆ. ಅತಿ ವೇಗವಾಗಿ ಹರಡುವ ಕಾರಣದಿಂದ ಈ ವೈರಸ್ ಅನ್ನು ಅತಿ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಕ್ವಾರಂಟೈನ್​ ಕೇಂದ್ರದಿಂದ ತಪ್ಪಿಸಿಕೊಂಡು ಆಂಧ್ರ ಸೇರಿದ ಮಹಿಳೆಯಲ್ಲಿ ರೂಪಾಂತರಿ ಕೊರೊನಾ ವೈರಸ್

ಈ ವಿಚಾರಕ್ಕೆ ಸಂಬಂಧಪಟ್ಟಂತೆಬ ಎಸಿಇ ಸುಹಾಸ್ ಆಸ್ಪತ್ರೆಯಲ್ಲಿ ಕೋವಿಡ್ ವಿಭಾಗದಲ್ಲಿ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ಡಾ.ಜಗದೀಶ್ ಹಿರೇಮಠ್ ಮಾತಾನಾಡಿದ್ದು, ರೂಪಾಂತರಿ ವೈರಸ್ ತೊಂದರೆ ಮಾಡುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ ಎಂದಿದ್ದಾರೆ.

ಹಳೆಯ ವೈರಸ್​ಗಿಂತ ಇದು ಬಹುಬೇಗ ಹರಡುತ್ತದೆ. ಕಡಿಮೆ ಜನಸಂಖ್ಯೆ ಇರುವ ಲಂಡನ್​ನಲ್ಲಿ ದಿನಕ್ಕೆ 50-60 ಸಾವಿರ ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಿರುವಾಗ ನಮ್ಮಲ್ಲಿ ಜನಸಾಂದ್ರತೆ ಹೆಚ್ಚಿರುವ ಕಾರಣ ಯಾವ ರೀತಿ ತೊಂದರೆ ಮಾಡಬಹುದು ಎಂಬದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಜೊತೆಗೆಮುಂಜಾಗ್ರತೆ ವಹಿಸಬೇಕು ಎಂದು ಡಾ. ಜಗದೀಶ್ ಹಿರೇಮಠ್ ಸೂಚನೆ ನೀಡಿದ್ದಾರೆ.

ರೂಪಾಂತರ ವೈರಸ್ ಲಕ್ಷಣಗಳೇನು??

  • ಹಸಿವು ಆಗದೇ ಇರುವುದು
  • ಮಾನಸಿಕ ಗೊಂದಲ
  • ವಾಸನೆ ತಿಳಿಯದೇ ಇರುವುದು
  • ತಲೆನೋವು, ಸ್ನಾಯು ನೋವು
  • ಚರ್ಮದ ಮೇಲೆ ಗುಳ್ಳೆ ಕಾಣಿಸಿಕೊಳ್ಳುವುದು

ವೈರಸ್​ನಿಂದ ಪರಾಗುವುದು ಹೇಗೆ?

  • ಹೊರಗೆ ಇರುವಾಗ ಮಾಸ್ಕ್ ಧರಿಸುವುದು
  • ಕೈಗಳನ್ನ ಮುಖದ ಬಳಿ ತರದೇ ಇರುವುದು
  • ಸಾಮಾಜಿಕ ಅಂತರ ಪಾಲನೆ ಮಾಡುವುದು
  • ಹೊರಗೆ ಇದ್ದಾಗ ಸ್ಯಾನಿಟೈಸರ್ ಬಳಸುವುದು
  • ಮನೆಗೆ ಬಂದ ಕೂಡಲೇ ಸ್ವಚ್ಚವಾಗುವುದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.