ಕೆ.ಆರ್. ಪುರ: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆ ಕೆಆರ್ ಪುರ ಕ್ಷೇತ್ರದ ವಿಜಿನಾಪುರ ಸರ್ಕಾರಿ ಮಾದರಿ ಶಾಲೆಯಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ಸೂಚನೆಯಂತೆ ಮುಖಂಡ ಬಾಬುಸೆಲ್ವಂ ಅವರು ಮಕ್ಕಳಿಗೆ ಮಾಸ್ಕ್, ಸೋಪುಗಳು, ಹ್ಯಾಂಡ್ ವಾಷ್ ಲಿಕ್ವಿಡ್ನ್ನು ವಿತರಿಸಿದರು.
ಅಲ್ಲದೆ ಕ್ಷೇತ್ರದ ಪ್ರತಿಯೊಂದು ಸರ್ಕಾರಿ ಶಾಲಾ ಮಕ್ಕಳಿಗೂ ಮುಂಜಾಗ್ರತ ಸಾಮಾಗ್ರಿಗಳನ್ನು ಉಚಿತವಾಗಿ ನೀಡುವ ಮೂಲಕ ಕೊರಾನಾ ವೈರಸ್ ಹರಡದಂತೆ ತಡೆಯಬೇಕು ಎಂದು ಮನವಿ ಮಾಡಿಕೊಂಡರು. ಮಾಸ್ಕ್ ಮಾರಟ ದಂಧೆ ಶುರುವಾಗಿದ್ದು ಇದಕ್ಕೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ರು.