ETV Bharat / city

ಕೊರೊನಾ ಎರಡನೇ ಅಲೆ: ಬಿಗಿ ಮಾರ್ಗಸೂಚಿ ಹೊರಡಿಸಿ ರಾಜ್ಯ ಸರ್ಕಾರ ಆದೇಶ

author img

By

Published : Mar 24, 2021, 11:00 PM IST

ರಾಜಕೀಯ ಪಕ್ಷಗಳ ಸಭೆ ಸಮಾರಂಭ, ರ‍್ಯಾಲಿಗೂ 500 ಜನ ನಿಗದಿಪಡಿಸಲಾಗಿದೆ. ಹೆಚ್ಚು ಜನ ಸೇರಿದರೆ ರ‍್ಯಾಲಿ ಆಯೋಜಿಸಿದವರ ಮೇಲೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ನೂತನ ಕೋವಿಡ್ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

corona-new-guidelines-in-karnataka
ಕೊರೊನಾ ಎರಡನೇ ಅಲೆ: ಬಿಗಿ ಮಾರ್ಗಸೂಚಿ ಹೊರಡಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ, ಬಿಗಿ ನಿಯಮ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಇಲಾಖೆ ಕೋವಿಡ್ ಮಾರ್ಗಸೂಚಿ ಹೊರಡಿಸಿದ್ದು, ಸಾರ್ವಜನಿಕರು ಕಟ್ಟುನಿಟ್ಟಾಗಿ ಮಾರ್ಗಸೂಚಿ ಪಾಲನೆ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆ.

ಮಾಸ್ಕ್ ಧರಿಸದಿದ್ದಲ್ಲಿ ಬೆಂಗಳೂರು ನಗರ ಮತ್ತು ಇತರ ನಗರಗಳಲ್ಲಿ 250 ರೂ.‌ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ. ಪಾಲಿಕೆ ವ್ಯಾಪ್ತಿ ಹೊರತುಪಡಿಸಿ 100 ರೂ. ದಂಡ ವಿಧಿಸಲಾಗುವುದು. ಬಿಬಿಎಂಪಿ ಮಾರ್ಷಲ್​ಗಳು, ಹೆಡ್ ಕಾನ್​​ಸ್ಟೇಬಲ್ ಮತ್ತು ಮೇಲ್ಪಟ್ಟ ಪೊಲೀಸ್ ಅಧಿಕಾರಿ, ಹೆಲ್ತ್ ಇನ್ಸ್​​​ಪೆಕ್ಟರ್, ಪಿಡಿಒ, ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ. ಸಾಮಾಜಿಕ ಅಂತರ ಪಾಲನೆ ಮಾಡದೇ ಇದ್ದರೆ 250 ರೂ. ದಂಡ ವಿಧಿಸಲಾಗುತ್ತದೆ.

ಮದುವೆ ಹಾಲ್, ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಸೀಮಿತ ಜನರನ್ನು ಹೊರತುಪಡಿಸಿ ಹೆಚ್ಚು ಜನ ಇದ್ದರೆ ಹಾಗೂ ಮಾಸ್ಕ್ ಧರಿಸದೇ ಇದ್ದಲ್ಲಿ, ನಾನ್ ಎಸಿ ಪಾರ್ಟಿ ಹಾಲ್​​ಗೆ ಐದು ಸಾವಿರ ರೂ. ದಂಡ, ಎಸಿ ಹಾಲ್​ಗೆ 10 ಸಾವಿರ ರೂ. ದಂಡ ವಿಧಿಸಲಾಗುವುದು.

ಒಳಾಂಗಣ ಸಭಾಂಗಣದಲ್ಲಿ 200 ಜನ, ಹೊರಾಂಗಣದಲ್ಲಿ 500 ಜನ ಮಾತ್ರ ಅನುಮತಿ ನೀಡಲಾಗಿದೆ. ಸ್ಟಾರ್ ಹೋಟೆಲ್​​ನಲ್ಲಿ ಹೆಚ್ಚು ಜನ ಸೇರಿಸಿ ಕಾರ್ಯಕ್ರಮ ನಡೆಸಿದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಇನ್ನು ರಾಜಕೀಯ ಪಕ್ಷಗಳ ಸಭೆ ಸಮಾರಂಭ, ರ‍್ಯಾಲಿಗೂ 500 ಜನ ನಿಗದಿ ಪಡಿಸಲಾಗಿದೆ. ಹೆಚ್ಚು ಜನ ಸೇರಿದರೆ ರ‍್ಯಾಲಿ ಆಯೋಜಿಸಿದವರ ಮೇಲೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

ಎಲ್ಲೆಲ್ಲಿ ಎಷ್ಟು ಮಂದಿಗೆ ಅನುಮತಿ?:

ಬರ್ಥ್ ಡೇ ಪಾರ್ಟಿ, ಇತರೆ ಕಾರ್ಯಕ್ರಮ

  • ಒಳಾಂಗಣ ಸಭಾಂಗಣ 50 ಮಂದಿ ಮಿತಿ
  • ಹೊರಾಂಗಣ 100 ಮಂದಿ ಮಿತಿ

ಸಾವು ಮತ್ತು ಅಂತ್ಯಕ್ರಿಯೆ

  • ಒಳಾಂಗಣ ಸಭಾಂಗಣ 50 ಮಂದಿ ಮಿತಿ
  • ಹೊರಾಂಗಣ 100 ಮಂದಿ ಮಿತಿ

ಶವಸಂಸ್ಕಾರ

  • 50 ಮಂದಿ ಮಿತಿ

ಇತರೆ ಕಾರ್ಯಕ್ರಮಗಳು

  • 100 ಮಂದಿ ಮಿತಿ

ಧಾರ್ಮಿಕ ಸಭೆ, ಸಮಾರಂಭ

  • 500 ಮಂದಿ ಮಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.