ಬೆಂಗಳೂರು: ದೇಶದಲ್ಲಿ ಇತ್ತೀಚೆಗೆ ಕೊರೊನಾ ಸೋಂಕಿನಿಂದ ಗುಣಮುಖರಾಗುವ ಪ್ರಮಾಣ ಸರಾಸರಿ ಶೇ.52.80 ಇದ್ದರೆ, ಬೆಂಗಳೂರಿನ ಪ್ರಮಾಣದ ಸರಾಸರಿ ಶೇ 42ರಷ್ಟು. ಸಾವಿನ ಪ್ರಮಾಣದಲ್ಲಿ ದೇಶದಲ್ಲಿ ಶೇಕಡಾ 3.4ರಷ್ಟಿದ್ದರೆ, ರಾಜ್ಯದ ರಾಜಧಾನಿಯಲ್ಲಿ ಶೇಕಡಾ 5.8ಕ್ಕೆ ಏರಿದೆ.
ಮೇ ತಿಂಗಳವರೆಗೂ ದೇಶದಲ್ಲಿ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರಿನ ಗುಣಮುಖ ಪ್ರಮಾಣ ಈಗ ಕಳಪೆ ಫಲಿತಾಂಶ ನೀಡುತ್ತಿರುವ ಜೊತೆಗೆ ಸಾವಿನ ಪ್ರಮಾಣವು ಏರಿಕೆ ಆಗುತ್ತಿದೆ.
ಮೇ 31ಕ್ಕೆ ಬೆಂಗಳೂರು 358 ಕೊರೊನಾ ಪ್ರಕರಣ ಕಂಡುಬಂದಿದ್ದು, ಜೂನ್ 17ಕ್ಕೆ 834 ಪ್ರಕರಣಗಳು ದಾಖಲೆಯಾಗಿದೆ. ಜೂನ್ 1ರಿಂದ ಅನ್ ಲಾಕ್ ನಂತರ 17 ದಿನಗಳಲ್ಲಿ 474 ಪ್ರಕರಣಗಳು ಹೆಚ್ಚಾಗಿವೆ.
ಮಹಾರಾಷ್ಟ್ರದ ಮುಂಬೈ ನಗರದಲ್ಲಿ 60,228 ಸೋಂಕು ದೃಢ ಆಗಿದ್ದರೆ ಗುಣಮುಖರಾಗುವ ಸಂಖ್ಯೆ 31,041. ಇದರ ಪ್ರಕಾರ ಗುಣಮುಖರಾಗುವ ಸರಾಸರಿ ಶೇ 51.5ರಷ್ಟಿದೆ. ಬೆಂಗಳೂರಿನ ಅಂಕಿ- ಅಂಶಗಳನ್ನು ನೋಡಿದರೆ ಸೋಂಕು ದೃಢ ಸಂಖ್ಯೆ 834 ಆಗಿದ್ದು ಗುಣಮುಖ ಆಗಿರುವವರ ಸಂಖ್ಯೆ 369, ಇದರ ಪ್ರಕಾರ ಗುಣಮುಖರಾಗುವ ಸರಾಸರಿ ಶೇ 42ರಷ್ಟು ಇದೆ ಎಂದು ಸರ್ಕಾರಿ ಅಂಕಿ - ಅಂಶಗಳು ತಿಳಿಸುತ್ತಿದೆ.
ಇನ್ನು ಸಾವಿನ ಪ್ರಮಾಣವನ್ನು ಮುಂಬೈ ಹಾಗೂ ಬೆಂಗಳೂರನ್ನು ಹೋಲಿಸಿದದೆ ಮುಂಬೈ ನಗರದಲ್ಲಿ ಶೇ 5.2ರಷ್ಟು ಇದ್ದರೆ ಬೆಂಗಳೂರಿನಲ್ಲಿ ಸಾವಿನ ಪ್ರಮಾಣ 5.7ರಷ್ಟಾಗಿದೆ.
ಇತ್ತೀಚೆಗೆ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಕೊರೊನಾ ಪರೀಕ್ಷೆಗಳನ್ನು ದಿನೇ ದಿನೇ ಕಡಿಮೆ ಮಾಡುತ್ತಿದೆ. ಇದಲ್ಲದೇ ಅಂತಾರಾಜ್ಯ ಸಂಚಾರದಿಂದ ಪ್ರಕರಣಗಳು ಏರುತ್ತಿದೆ. ಮೂಲಗಳ ಪ್ರಕಾರ ಹೆಚ್ಚಿನ ಪ್ರಕರಣಗಳು ಪತ್ತೆಯಾದರೆ ಸರ್ಕಾರದ ಬಳಿ ಚಿಕಿತ್ಸೆಗೆ ಯಾವುದೇ ಪರ್ಯಾಯ ಮಾರ್ಗಗಳು ಇಲ್ಲ.
ಒಟ್ಟಾರೆಯಾಗಿ ವಿವಿಧ ನಗರಗಳಲ್ಲಿ ಸೋಂಕಿನ ಸಂಖ್ಯೆಯಲ್ಲಿ ಭಾರಿ ಅಂತರವಿದ್ದರೂ ಸದ್ಯದ ಅಂಕಿ ಅಂಶಗಳನ್ನು ನೋಡಿದರೆ, ಬೆಂಗಳೂರಿನ ಗುಣಮುಖ ಪ್ರಮಾಣ ಹಾಗೂ ಸಾವಿನ ಪ್ರಮಾಣ ರಾಷ್ಟ್ರೀಯ ಸರಾಸರಿಯನ್ನು ಮೀರಿ ಮುನ್ನುಗ್ಗುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ.