ETV Bharat / city

ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂನಿಂದ ಸಾವಿರ ಕೋಟಿ ಆದಾಯಕ್ಕೆ ಹೊಡೆತ ಸಾಧ್ಯತೆ

ಕಳೆದ ವರ್ಷದ ಕೊರೊನಾ ಲಾಕ್​ಡೌನ್​ನಿಂದ ಅಂದಾಜು 5 ಸಾವಿರ ಕೋಟಿಯಷ್ಟು ಆದಾಯವನ್ನು ಕಳೆದುಕೊಂಡಿದ್ದ ಸರ್ಕಾರಕ್ಕೆ ಈಗ ಮತ್ತೊಮ್ಮೆ ಟಫ್ ರೂಲ್ಸ್ ಕಾರಣದಿಂದ ಅಂದಾಜು 1 ಸಾವಿರ ಕೋಟಿ ಆದಾಯಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ.

author img

By

Published : Apr 21, 2021, 5:24 PM IST

Updated : Apr 21, 2021, 6:57 PM IST

ಬೆಂಗಳೂರು
ಬೆಂಗಳೂರು

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಕೊರೊನಾ ಹೊಸ ಮಾರ್ಗಸೂಚಿ ಜಾರಿಯಾಗಿದ್ದು, ವಾಣಿಜ್ಯ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ 800-1000 ಕೋಟಿ ರೂ.ಗಳ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.

ಮೇ 4ರವರೆಗೆ ರಾಜ್ಯದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಒಳಗೊಂಡಂತೆ ಟಫ್ ರೂಲ್ಸ್ ಜಾರಿಗೊಳಿಸಲಾಗಿದೆ. 14 ದಿನಗಳ ಕಾಲ ಮಾಲ್, ಥಿಯೇಟರ್, ರಂಗಮಂದಿರ ಮುಚ್ಚಲಿದ್ದು, ರೆಸ್ಟೋರೆಂಟ್​ಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ಕಲ್ಪಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಶೇ. 50ರಷ್ಟು ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಹೀಗಾಗಿ ಸರ್ಕಾರದ ಆದಾಯಕ್ಕೆ ಹೊಡೆತ ಬೀಳುವುದು ಬಹುತೇಕ ಖಚಿತವಾಗಿದೆ.

ವೀಕೆಂಡ್​ ಕರ್ಫ್ಯೂ - ಆದಾಯಕ್ಕೆ ಹೊಡೆತ!

ಏಪ್ರಿಲ್‌ 24-25 ಮತ್ತು ಮೇ 1-2ರಂದು ಒಟ್ಟು ನಾಲ್ಕು ದಿನ ಇಡೀ ದಿನ ಕರ್ಫ್ಯೂ ಇರುವ ಕಾರಣ ವಾಣಿಜ್ಯ ಚಟುವಟಿಕೆ ಬಂದ್ ಆಗಲಿದ್ದು, ನಾಲ್ಕು ದಿನದ ಆದಾಯಕ್ಕೆ ಹೊಡೆತ ಬೀಳಲಿದೆ. ಅಲ್ಲದೆ ಬಾಕಿ 10 ದಿನದಲ್ಲಿ ಅಗತ್ಯ ವಸ್ತುಗಳ ವಲಯಕ್ಕೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಅವಕಾಶವಿದ್ದು, ಉಳಿದಿದ್ದಕ್ಕೆ ಕೆಲ ನಿರ್ಬಂಧ ಇರುವ ಕಾರಣ ಆರ್ಥಿಕತೆಗೆ ಹೊಡೆತ ಬೀಳಲಿದೆ.

ಕನಿಷ್ಠ ಸಿಬ್ಬಂದಿ ಬಳಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಮಾರ್ಗಸೂಚಿಯಲ್ಲಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಆರ್​ಟಿಒ ಕಚೇರಿಯಲ್ಲಿ ವಾಹನ ನೋಂದಣಿಗಳ ಸಂಖ್ಯೆ ಇಳಿಕೆಯಾಗಲಿದ್ದು, ಉಪ ನೋಂದಣಾಧಿಕಾರಿ ಕಚೇರಿಯಲ್ಲಿಯೂ ಸ್ವತ್ತುಗಳ ನೋಂದಣಿಯಲ್ಲಿ ಇಳಿಮುಖವಾಗಲಿದೆ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತಂದುಕೊಡುವಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಮತ್ತು ಆರ್​ಟಿಒ ಪ್ರಮುಖವಾಗಿದ್ದು, ಇವುಗಳ ಆದಾಯದಲ್ಲಿ ಇಳಿಕೆಯಾಗಲಿದೆ.

ಆದಾಯಕ್ಕೆ 1 ಸಾವಿರ ಕೋಟಿಯಷ್ಟು ಪೆಟ್ಟು?

ಕಳೆದ ವರ್ಷದ ಕೊರೊನಾ ಲಾಕ್​ಡೌನ್​ನಿಂದ ಅಂದಾಜು 5 ಸಾವಿರದಷ್ಟು ಆದಾಯವನ್ನು ಕಳೆದುಕೊಂಡಿದ್ದ ಸರ್ಕಾರಕ್ಕೆ ಈಗ ಮತ್ತೊಮ್ಮೆ ಟಫ್ ರೂಲ್ಸ್ ಕಾರಣದಿಂದ ಅಂದಾಜು 1 ಸಾವಿರ ಕೋಟಿ ಆದಾಯಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ. ಈಗಾಗಲೇ ಸಾರಿಗೆ ಮುಷ್ಕರದ ಕಾರಣ ಕಳೆದ 15 ದಿನಗಳು ಸಾರಿಗೆ ಸ್ಥಗಿತವಾದ ಕಾರಣ ಅಂದಾಜು 250 ಕೋಟಿ ಆದಾಯಕ್ಕೆ ಬ್ರೇಕ್ ಬಿದ್ದಿದ್ದು, ಅದರ ಹೊರೆಯೂ ಸರ್ಕಾರದ ಮೇಲೆ ಬೀಳಲಿದೆ ಎನ್ನಲಾಗುತ್ತಿದೆ.

ನಿರ್ಮಾಣ ಕಾಮಗಾರಿ, ಕೈಗಾರಿಕೆ, ಉತ್ಪಾದಕ ವಲಯಕ್ಕೆ ನಿರ್ಬಂಧ ಇಲ್ಲದೆ ಇದ್ದರೂ ಇತರ ಚಟುವಟಿಕೆಗಳ ನಿರ್ಬಂಧದ ಕಾರಣದಿಂದಾಗಿ ಈ ಬಾರಿಯ 14 ದಿನಗಳ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂನಿಂದ ಅಂದಾಜು ಆದಾಯಕ್ಕೆ 1 ಸಾವಿರ ಕೋಟಿಯಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಜಿಎಸ್​​ಟಿ ಸಂಗ್ರಹ, ಜಿಡಿಪಿ ದರದ ಮೇಲೂ ಪರಿಣಾಮ!

ಜಿಎಸ್​ಟಿ ಸಂಗ್ರಹದ ಮೇಲೂ ಪರಿಣಾಮ ಬೀರಲಿದ್ದು, ಜಿಡಿಪಿ ದರದ ಬೆಳವಣಿಗೆ ಮೇಲೆಯೂ ಕರ್ಫ್ಯೂ ಪರಿಣಾಮ ಬೀರಲಿದೆ. ಇದೆಲ್ಲವನ್ನೂ ಅಂದಾಜಿಸಿಯೇ ಸರ್ಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರ ಸಿದ್ಧವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Last Updated : Apr 21, 2021, 6:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.