ETV Bharat / city

ರಾಜ್ಯದಲ್ಲಿಂದು 85 ಮಂದಿಗೆ ಕೊರೊನಾ‌ ದೃಢ: ಬೆಂಗಳೂರಿನಲ್ಲೇ 82 ಕೇಸ್​, ಶೂನ್ಯ ಸಾವು - ರಾಜ್ಯದ ಕೊರೊನಾ ವರದಿ

ರಾಜ್ಯದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ತುಸು ಏರಿಕೆಯತ್ತ ಸಾಗುತ್ತಿದೆ. ಇಂದು 85 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಬೆಂಗಳೂರಿನಲ್ಲೇ 82 ಕೇಸ್​ಗಳು ಪತ್ತೆಯಾಗಿವೆ.

today-corona
ಕೊರೊನಾ‌ ದೃಢ
author img

By

Published : Apr 26, 2022, 8:20 PM IST

ಬೆಂಗಳೂರು: ರಾಜ್ಯದಲ್ಲಿಂದು 7,171 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 85 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,47,083 ಕ್ಕೆ ಏರಿಕೆ ಆಗಿದೆ.‌ ಪಾಸಿಟಿವ್ ದರ 1.18% ಕ್ಕೆ ಏರಿಕೆ ಕಂಡಿದೆ. ಇತ್ತ 70 ಸೋಂಕಿತರು ಗುಣಮುಖರಾಗಿದ್ದು, ಈತನಕ 39,05,298 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ಈವರೆಗೂ 40,057 ಮೃತಪಟ್ಟಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 1686 ರಷ್ಟಿದೆ.

ಬೆಂಗಳೂರಲ್ಲೇ 82 ಪಾಸಿಟಿವ್​: ರಾಜ್ಯದಲ್ಲಿ ಪತ್ತೆಯಾದ 85 ಕೇಸ್​ಗಳ ಪೈಕಿ ಬೆಂಗಳೂರಿನಲ್ಲೇ 82 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 17,83,081ಕ್ಕೆ ಏರಿಕೆಯಾಗಿದೆ. 24 ಗಂಟೆ ಅವಧಿಯಲ್ಲಿ 66 ಮಂದಿ ಡಿಸ್ಚಾರ್ಜ್ ಆಗಿದ್ದು, 17,64,492 ಮಂದಿ ಗುಣಮುಖರಾಗಿದ್ದಾರೆ. 1,626 ಸಕ್ರಿಯ ಪ್ರಕರಣಗಳಿವೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್: ಅಲ್ಪಾ- 156, ಬೇಟಾ-08, ಡೆಲ್ಟಾ ಸಬ್ ಲೈನ್ ಏಜ್- 4620, ಇತರೆ- 311, ಒಮಿಕ್ರಾನ್- 3775, BAI.1.529- 947, BA1- 99, BA2- 2729

ಇದನ್ನೂ ಓದಿ: 10 ಸಾವಿರ ಕೇಳಿದ ಆಂಬ್ಯುಲೆನ್ಸ್‌ ಚಾಲಕ; ಮಗನ ಶವ ಹೊತ್ತು ಬೈಕ್​ನಲ್ಲೇ 90 ಕಿಮೀ ಸಾಗಿದ ಬಡಪಾಯಿ ತಂದೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.