ETV Bharat / city

ವಿವಾದಿತ ಜಿಂದಾಲ್ ಭೂಮಿ ಪರಭಾರೆ ನಿರ್ಧಾರ ತಡೆ ಹಿಡಿದ ಸಚಿವ ಸಂಪುಟ ಸಭೆ

ಇಂದು ನಡೆದ ಸಂಪುಟ ಸಭೆಯಲ್ಲಿ ವಿವಾದಿತ ಜಿಂದಾಲ್​ಗೆ ಭೂಮಿ ಪರಭಾರೆ ತೀರ್ಮಾನವನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ.

author img

By

Published : May 27, 2021, 1:59 PM IST

Cabinet Meeting
ವಿವಾದಿತ ಜಿಂದಾಲ್ ಭೂಮಿ ಪರಾಭಾರೆ ನಿರ್ಧಾರಕ್ಕೆ ತಡೆ ಹಿಡಿದ ಸಚಿವ ಸಂಪುಟ ಸಭೆ

ಬೆಂಗಳೂರು: ವಿವಾದಿತ ಜಿಂದಾಲ್​ಗೆ ಭೂಮಿ ಪರಭಾರೆ ತೀರ್ಮಾನವನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಭೂಮಿ ಪರಭಾರೆ ಸಂಬಂಧ ಮತ್ತಷ್ಟು ಮಾಹಿತಿ ಕಲೆಹಾಕಿ ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯ ಈ ವಿಚಾರವಾಗಿ ಕೋರ್ಟ್​ನಲ್ಲಿ ಅರ್ಜಿ‌ ಸಲ್ಲಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಕೋರ್ಟ್​ನಲ್ಲಿದೆ. ಈ ಸಂಬಂಧ ನೋಟಿಸ್ ಜಾರಿ ಮಾಡಿದೆ ಎಂದು ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಕಾನೂನು ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಹೇಳಿದ್ದರು.

ಭೂಮಿ ಮಾರಾಟ ನಿರ್ಧಾರಕ್ಕೆ‌ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ತೀರ್ಮಾನವನ್ನು ಕೂಡಲೇ ಕೈಬಿಡುವಂತೆ ಬಿಜೆಪಿ ಶಾಸಕರು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು. ರಾಜ್ಯ ಸರ್ಕಾರ ಜಿಂದಾಲ್ ಕಬ್ಬಿಣ ಮತ್ತು ಉಕ್ಕು ಸಂಸ್ಥೆಗೆ ಕಡಿಮೆ ದರದಲ್ಲಿ ಭೂಮಿ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿತ್ತು. ಒಟ್ಟು 36,67 ಎಕರೆ ಜಮೀನನ್ನು ಜಿಂದಾಲ್​ಗೆ ಮಾರಾಟ ಮಾಡಿರುವುದು ಸಾಕಷ್ಟು ವಿವಾದ ಉಂಟುಮಾಡಿತ್ತು. ಈ ಸಂಬಂಧ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ ಸೇರಿದಂತೆ ಅನೇಕ ಶಾಸಕರು ಸರ್ಕಾರದ ಜಿಂದಾಲ್​ಗೆ ಭೂಮಿ ಪರಭಾರೆ ನಿರ್ಧಾರದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಹೈಕಮಾಂಡ್​ಗೆ ಲಿಖಿತ ದೂರು ಸಲ್ಲಿಸಿದ್ದರು. ಇದೀಗ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್​ಗೆ ಭೂಮಿ ಪರಭಾರೆ ನಿರ್ಧಾರವನ್ನು ತಡೆ ಹಿಡಿಯಲಾಗಿದೆ.

ಮೇಕೆದಾಟು ಎನ್​ಜಿಟಿ ಆದೇಶ ಪ್ರಶ್ನಿಸಲು ಸೂಚನೆ:

ಮೇಕೆದಾಟು ಯೋಜನೆ ಸಂಬಂಧ ಎನ್‌ಜಿಟಿ ಸಮಿತಿ ರಚಿಸಿರುವ ಆದೇಶವನ್ನು ಪ್ರಶ್ನಿಸಿ ಎನ್​ಜಿಟಿಯಲ್ಲೇ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಸಂಬಂಧ ಸಿಎಂ‌ ನೇತೃತ್ವದಲ್ಲಿ ಸಭೆ ನಡೆಸಿದ್ದೇವೆ. ಜಲಸಂಪನ್ಮೂಲ ಅಧಿಕಾರಿಗಳು, ಕಾನೂನು ತಜ್ಞರ ಜೊತೆ ಸಭೆ ನಡೆಸಲಾಗಿದೆ‌. ಈ ಅದೇಶ ಸಮಂಜಸ ಅಲ್ಲ. ಮಾಧ್ಯಮಗಳ ವರದಿ ಆಧಾರದಲ್ಲಿ ಎನ್​​ಜಿಟಿ ಈ ಆದೇಶವನ್ನು ನೀಡಿದೆ. ಈ ಆದೇಶವನ್ನು ಪ್ರಶ್ನಿಸಲಿದ್ದು, ಅದನ್ನು ವಾಪಸ್ ಪಡೆಯಲು ಕೋರಲಿದ್ದೇವೆ ಎಂದರು.

ಸಂಪುಟ ಸಭೆಯ ಇತರೆ ತೀರ್ಮಾನಗಳು

  • ಧಾರವಾಡ ಹಾಲು ಒಕ್ಕೂಟದ ವತಿಯಿಂದ ಹಾವೇರಿ ತಾಲೂಕಿನ ಜಂಗಮನಕೊಪ್ಪ ಗ್ರಾಮದಲ್ಲಿ 1 ಲಕ್ಷ ಲೀಟರ್​ ಸಾಮರ್ಥ್ಯದ ಹಾಲು ಸಂಸ್ಕರಣಾ ಡೇರಿ ಹಾಗೂ ಯು.ಹೆಚ್.ಟಿ ಪ್ಯಾಕಿಂಗ್ ಘಟಕದ ಯೋಜನೆಯನ್ನು ಪಿ.ಪಿ.ಪಿ. ಮಾದರಿಯಲ್ಲಿ ಅನುಷ್ಠಾನಗೊಳಿಸಲು ಹಾಗೂ ಸರ್ಕಾರದಿಂದ 15 ಕೋಟಿ ರೂ. ಅನುದಾನ ನೀಡುವ ಪ್ರಸ್ತಾವನೆಗೆ ಅನುಮೋದನೆ.
  • ಕರ್ನಾಟಕ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಎನರ್ಜಿ ಸ್ಟೋರೇಜ್ ಪಾಲಿಸಿ 2017ಕ್ಕೆ ತಿದ್ದುಪಡಿಗೆ ಅನುಮೋದನೆ ನೀಡಲಾಗಿದೆ. 2012ರಲ್ಲಿ ಈ ಸಂಬಂಧ ಮುಂಚೆಯೇ ನೀತಿ ಜಾರಿಯಲ್ಲಿತ್ತು. ಈ ನೀತಿಗೆ ಕೆಲ ವಿನಾಯಿತಿ ನೀಡುವ ಸಂಬಂಧ ತಿದ್ಧುಪಡಿ ಮಾಡಲು 50 ಎಕರೆ ಸ್ಥಿರ ಆಸ್ತಿಗೆ ನಿಗದಿಗೊಳಿಸಿ, 15% ಬಂಡಾವಳ ಸಬ್ಸಿಡಿ ನೀಡುವ ಸಂಬಂಧ ತಿದ್ದುಪಡಿಗೆ ಅಸ್ತು.
  • 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆನ್ನಲಾಗಿರುವ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರುಗಳನ್ನು ಅಭಿಯೋಜನೆಗೊಳಪಡಿಸಲು ನೀಡಿದ್ದ ಅನುಮೋದನೆ ತಿರಸ್ಕಾರ.
  • ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಸ್ನಾತಕೋತ್ತರ ಬಾಲಕ-ಬಾಲಕಿಯರ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡ ಕಾಮಗಾರಿಗಳನ್ನು ರೂ. 46.20 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಹಾಗೂ ಉಪಕರಣಗಳನ್ನು ರೂ. 12.02 ಕೋಟಿ ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
  • ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲೂಕು, ಆದಿನಾರಾಯಣ ಹೊಸಹಳ್ಳಿ ಗ್ರಾಮದಲ್ಲಿ ಒಟ್ಟು 18-07 ಎಕರೆ ಸರ್ಕಾರಿ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಮಂಜೂರು.
  • ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚುಂಚನಹಳ್ಳಿ ಮತ್ತು ಬ್ಯಾಲದಕೆರೆ ಗ್ರಾಮಗಳ ವಿವಿಧ ಸರ್ವೆ ನಂ.ಗಳಲ್ಲಿ ಒಟ್ಟು 32-18 ಎಕರೆ ಜಮೀನುಗಳನ್ನು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠಕ್ಕೆ ಮಂಜೂರು ಮಾಡಿರುವ ಆದೇಶದಲ್ಲಿ ಸರ್ವೆ ನಂ. ತಿದ್ದುಪಡಿ ಮಾಡಲು ಒಪ್ಪಿಗೆ.
  • ಕಲಬುರಗಿ ಜಿಲ್ಲೆ, ಶರಣಸಿರಸಗಿ ಗ್ರಾಮದ ಸ.ನಂ. 243 ರಲ್ಲಿ 7 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ರಾಷ್ಟೋತ್ಥಾನ ಪರಿಷತ್​ಗೆ ಮಂಜೂರು.
  • ಬೆಂಗಳೂರು ನಗರದ, ಬಸವನಗುಡಿಯಲ್ಲಿರುವ ಕಾರಂಜಿ ಆಂಜನೇಯಸ್ವಾಮಿ ದೇವಾಲಯಕ್ಕೆ ಸೇರಿದ ಜಾಗವನ್ನು ಯುವಕ ಸಂಘಕ್ಕೆ 1975ರಲ್ಲಿ 25 ವರ್ಷದ ಅವಧಿಗೆ ಗುತ್ತಿಗೆ ನೀಡಲಾಗಿದ್ದ 8400 ಚದರ ಅಡಿ ಜಾಗವನ್ನು ಮರುಗುತ್ತಿಗೆ ನೀಡಲು ಅಸ್ತು.
  • ಜಲ ಜೀವನ್ ಮಿಷನ್ ಯೋಜನೆಯಡಿ ಹಾಗೂ NABARD Infrastructure Development Assistance (NIDA) ನೆರವಿನಿಂದ ರಾಯಚೂರು ಜಿಲ್ಲೆಯ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ಹಾಗೂ 7 ನಗರ ಸ್ಥಳೀಯ ಸಂಸ್ಥೆಗಳಾದ ಮಾನ್ವಿ, ಮಸ್ಕಿ, ಕವಿತಾಳ, ತುರ್ವಿಹಾಳ, ಬಾಳಗನೂರು, ಸಿರವಾರ, ಹಟ್ಟಿಗಳನ್ನು ಒಳಗೊಂಡಂತೆ 1998.01 ಕೋಟಿ ಅಂದಾಜು ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಅನುಮೋದನೆ.
  • ಜಲ ಜೀವನ್ ಮಿಷನ್ ಯೋಜನೆಯಡಿ ಹಾಗೂ NABARD Infrastructure Development Assistance (NIDA) ನೆರವಿನಿಂದ ಬಾಗೇವಾಡಿ ವಿಜಯಪುರ ಮತ್ತು ಇಂಡಿ ಜಿಲ್ಲೆಯ ವಿಜಯಪುರ, ಬಸವನಬಾಗೇವಾಡಿ ತಾಲೂಕುಗಳಲ್ಲಿನ ಜನವಸತಿಗಳು ಹಾಗೂ ಇಂಡಿ ಟೌನ್ ಮತ್ತು ಇತರೆ 4 ನಗರ ಸ್ಥಳೀಯ ಸಂಸ್ಥೆಗಳಾದ ಚಡ್ಭನ್, ಮನಗೂಲಿ, ನಿಡಗುಂದಿ ಮತ್ತು ಕೊಲ್ಹಾರ್ (ಯೋಜನೆ-1) ಒಳಗೊಂಡಂತೆ ರೂ. 1431.48 ಕೋಟಿ ಅಂದಾಜು ವೆಚ್ಚದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ್ ಮಿಷನ್ ಯೋಜನೆಯಡಿ ಹಾಗೂ NABARD Infrastructure Development Assistance (NIDA) ನೆರವಿನಿಂದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ಸಿಂದಗಿ ತಾಲೂಕುಗಳಲ್ಲಿನ ಎಲ್ಲಾ ಗ್ರಾಮೀಣ ಜನವಸತಿಗಳು ಹಾಗೂ ಮುದ್ದೇಬಿಹಾಳ ಮತ್ತು ಸಿಂದಗಿ ಟೌನ್‌ಗಳು ಹಾಗೂ ಇತರೆ 1 ನಗರ ಸ್ಥಳೀಯ ಸಂಸ್ಥೆಗಳಾದ ದೇವರ ಹಿಪ್ಪರಗಿ, ಆಲ್ಮೇಲ್, ತಾಳಿಕೋಟೆ ಮತ್ತು ನಲತವಾಡ್ (ಯೋಜನೆ-2) ಒಳಗೊಂಡಂತೆ ರೂ. 954.51 ಕೋಟಿ ಅಂದಾಜು ವೆಚ್ಚದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಆಡಳಿತಾತ್ಮಕ ಅನುಮೋದನೆ
  • ಜಲ ಜೀವನ್ ಮಿಷನ್ ಯೋಜನೆಯಡಿ ಹಾಗೂ NABARD Infrastructure Development Assistance (NIDA) ನೆರವಿನಿಂದ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ, ಪಾಂಡವಪುರ ಮತ್ತು ನಾಗಮಂಗಲ ತಾಲೂಕಿನ ಆಯ್ದ ಗ್ರಾಮೀಣ ಜನವಸತಿಗಳಿಗೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿ, ನಾಗಮಂಗಲ ಪಟ್ಟಣ, ಬಿ.ಜಿ. ನಗರ ಹಾಗೂ ಕೆ.ಆರ್.ಪೇಟೆ ತಾಲೂಕಿನ 5 ವಸತಿ ಶಾಲೆಗಳನ್ನು ಒಳಗೊಂಡಂತೆ 690.36 ಕೋಟಿ ಅಂದಾಜು ವೆಚ್ಚದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ್ ಮಿಷನ್ ಯೋಜನೆಯಡಿ ಹಾಗೂ NABARD Infrastructure Development Assistance (NIDA) ನೆರವಿನಿಂದ ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ಮತ್ತು ಕಲಘಟಗಿ ತಾಲೂಕುಗಳಲ್ಲಿನ ಎಲ್ಲಾ ಜನವಸತಿಗಳಿಗೆ ಕಲಘಟಗಿ ಪಟ್ಟಣ ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಾರ್ಗ ಮಧ್ಯದ 8 ಹೆಚ್ಚುವರಿ ಜನವಸತಿಗಳಿಗೆ (ಯಡ್ರಾವಿ, ಬೆಟಸೂರ್, ಹಿರೇ ಉಲ್ಲಿಗೇರಿ, ಚಿಕ್ಕ ಉಲ್ಲಿಗೇರಿ, ಇನಾಮಹೊಂಗಲ್, ಸಂಗ್ರೇಶ ಕೊಪ್ಪ, ಯಡಹಳ್ಳಿ ಮತ್ತು ಕೆಂಚರಮಣಹಲ್) ಸಂಬಂಧಿಸಿದ 1032.49 ಕೋಟಿ ಅಂದಾಜು ವೆಚ್ಚದ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ ಮಿಷನ್ ಯೋಜನೆಯಡಿ ಹಾಗೂ Rural Infrastructure Development Fund XXVI (RIDF) ಅಡಿ NABARDನ ಸಾಲದ ನೆರವಿನಿಂದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ 788 ಗ್ರಾಮೀಣ ಜನವಸತಿಗಳಿಗೆ ಹಾಗೂ ಬೈಂದೂರು, ಪಡುವರಿ ಮತ್ತು ಯಡ್ತರೆ ಪಟ್ಟಣದಲ್ಲಿನ ಜನವಸತಿಗಳಿಗೆ ಸಂಬಂಧಿಸಿದ ರೂ. 396 ಕೋಟಿಗಳ ಅಂದಾಜು ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
  • ಜಲ ಜೀವನ ಮಿಷನ್ ಹಾಗೂ Rural Infrastructure Development Fund XXVI (RIDF) ಅಡಿ NABARDನ ಸಾಲದ ನೆರವಿನಿಂದ ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆ ಪಟ್ಟಣ ಮತ್ತು 215 ಗ್ರಾಮೀಣ ಜನವಸತಿಗಳಿಗೆ ಸಂಬಂಧಿಸಿದ ರೂ. 276 ಬಹುಗ್ರಾಮ ಕೋಟಿಗಳ ಅಂದಾದು ವೆಚ್ಚದ ಕುಡಿಯುವ ನೀರು ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
  • ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯು ಬೆಂಗಳೂರಿನ ಸಿಂಗಸಂದ್ರದಲ್ಲಿ ಸಂಸ್ಥೆಗೆ ಸೇರಿದ ನಿವೇಶನದಲ್ಲಿ ರೂ. 77.91 ಕೋಟಿ ಅಂದಾಜು ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
  • ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿರುವ ಎಂ.ಎಸ್.ಕೆ. ಮಿಲ್ ವಾಣಿಜ್ಯ ಬಡಾವಣೆಯಲ್ಲಿ ನೂತನ ಮಾದರಿಯ ತರಕಾರಿ ಮಾರುಕಟ್ಟೆ ಸಂಕೀರ್ಣವನ್ನು ರೂ. 26.30 ಕೋಟಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.
  • ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ಎರಡನೇ ತಿದ್ದುಪಡಿ) ವಿಧೇಯಕ, 2021 ಘಟನೋತ್ತರ ಅನುಮೋದನೆ.
  • ಕರ್ನಾಟಕ ಪುರಸಭೆಗಳು ಮತ್ತು ಕೆಲವು ಇತರೆ ಕಾಯ್ದೆಗಳು (ತಿದ್ದುಪಡಿ) ವಿಧೇಯಕ, 2021ಕ್ಕೆ ಅನುಮೋದನೆ.
  • ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ಯಾಕೇಜ್-1 ರಡಿ ಮೈಸೂರು ರಸ್ತೆಯಿಂದ ಉತ್ತರಹಳ್ಳಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಕೆಂಚೇನಹಳ್ಳಿ ಮುಖ್ಯ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿಯನ್ನು ರೂ. 25.70 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ.
  • ಕನಕಪುರ ನಗರಸಭೆಯ ನೂತನ ಕಚೇರಿ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಗಾಗಿ ರೂ. 10.26 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.