ETV Bharat / city

ರಾಜ್ಯಾದ್ಯಂತ ಶಾಲಾ-ಕಾಲೇಜು ಮುಂದುವರಿಕೆ ; ಬೆಂಗಳೂರಿನ ಶಾಲೆಗಳ ಕುರಿತು ಮುಂದಿನ ವಾರ ನಿರ್ಧಾರ- ಸಚಿವ ನಾಗೇಶ್‌

ಬೆಂಗಳೂರಿನಲ್ಲಿ ಜ.29ರವರೆಗೆ ಶಾಲೆಗಳನ್ನ ಮುಚ್ಚುವ ನಿರ್ಧಾರ ಮುಂದುವರೆಯಲಿದೆ. ಮುಂದಿನ ಶುಕ್ರವಾರ ಮತ್ತೆ ಸಭೆ ನಡೆಸಿ ಬೆಂಗಳೂರು ಶಾಲೆಗಳನ್ನ ತೆರೆಯುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ..

Continuing school and college in karnataka: Minister bc nagesh
ರಾಜ್ಯಾದ್ಯಂತ ಶಾಲಾ-ಕಾಲೇಜು ಮುಂದುವರಿಕೆ; ಬೆಂಗಳೂರಿನ ಶಾಲೆಗಳ ಕುರಿತು ಮುಂದಿನ ವಾರ ನಿರ್ಧಾರ ಎಂದ ಸಚಿವ ನಾಗೇಶ್‌
author img

By

Published : Jan 21, 2022, 4:41 PM IST

Updated : Jan 21, 2022, 8:18 PM IST

ಬೆಂಗಳೂರು : ರಾಜ್ಯಾದ್ಯಂತ ಶಾಲಾ-ಕಾಲೇಜು ನಡೆಯಲಿವೆ. ಬೆಂಗಳೂರಿನಲ್ಲಿ ಶಾಲೆಗಳ ಆರಂಭ ಕುರಿತು ಮುಂದಿನ ವಾರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಕೋವಿಡ್‌ ತಜ್ಞರ ಜೊತೆ ಸಿಎಂ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಮಾಹಿತಿ ನೀಡಿದ ಅವರು, ಬೆಂಗಳೂರು ಹೊರತುಪಡಿಸಿ ಉಳಿದ ಎಲ್ಲಾ ಕಡೆ ಒಂದೊಂದೇ ಶಾಲೆಯನ್ನು ಯೂನಿಟ್ ಆಧಾರದಲ್ಲಿ ತೆಗೆದುಕೊಂಡು ಅಲ್ಲಿನ ಎಸಿ, ತಹಶೀಲ್ದಾರ್, ಬಿಇಒ ಇವರೆಲ್ಲರ ಅಭಿಪ್ರಾಯ ಪಡೆಯಲಾಗುತ್ತದೆ.

ಮಾಧ್ಯಮದವರಿಗೆ ಸಚಿವ ನಾಗೇಶ್‌ ಮಾಹಿತಿ

ಎಲ್ಲಿಯಾದರೂ ಪಾಸಿಟಿವ್ ಬಂದರೆ ಆ ಶಾಲೆ ಮಾತ್ರ ಬಂದ್ ಮಾಡಬೇಕು, ಹೆಚ್ಚು ಪಾಸಿಟಿವ್ ಬಂದರೆ 7 ದಿನ, ಕಡಿಮೆ ಬಂದರೆ ಮೂರು ದಿನ ಶಾಲೆಗಳನ್ನ ಬಂದ್ ಮಾಡಿ ನಂತರ ಶಾಲೆಯನ್ನು ಆರಂಭಿಸಲಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಜ. 29ರವರೆಗೆ ಶಾಲೆಗಳನ್ನ ಮುಚ್ಚುವ ನಿರ್ಧಾರ ಮುಂದುವರೆಯಲಿದೆ. ಮುಂದಿನ ಶುಕ್ರವಾರ ಮತ್ತೆ ಸಭೆ ನಡೆಸಿ ಬೆಂಗಳೂರು ಶಾಲೆಗಳನ್ನ ತೆರೆಯುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

6 ರಿಂದ 15 ವರ್ಷದ ಮಕ್ಕಳಿಗೆ ಪಾಸಿಟಿವಿಟಿ ದರ ಕಡಿಮೆ: 6 ರಿಂದ 15 ವರ್ಷದ ಮಕ್ಕಳಿಗೆ ಪಾಸಿಟಿವಿಟಿ ದರ ಕಡಿಮೆ ಇರುವುದರಿಂದ ಈಗ ಇರುವ ರೀತಿಯಲ್ಲೇ ಶಾಲೆಗಳನ್ನ ನಡೆಸಲಾಗುತ್ತದೆ. ನಾಲ್ಕೈದು ಜಿಲ್ಲೆಗಳಲ್ಲಿ ನಿರ್ಬಂಧ ಇತ್ತು. ಅಲ್ಲಿಯೂ ಕೂಡ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಅಲ್ಲಿಯೂ ಪುನರ್ ಪರಿಶೀಲಿಸಿ ಬಂದ್ ಅಗತ್ಯ ಇಲ್ಲ ಎನ್ನುವ ಕಡೆ ಶಾಲೆಗಳನ್ನು ತೆರೆಯಲು ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 21, 2022, 8:18 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.