ಬೆಂಗಳೂರು: ಏರ್ಪೋರ್ಟ್ ರಸ್ತೆಯಲ್ಲಿರುವ ಹೆಚ್ಎಎಲ್ ಸಂಸ್ಥೆಯ ಗಾಟ್ಗೆ ಸಮುದಾಯ ಭವನವನ್ನು 160 ಬೆಡ್ಗಳ ಕೋವಿಡ್ ಚಿಕಿತ್ಸಾ ಕೇಂದ್ರವನ್ನಾಗಿ ಮಾಡಲಾಗಿದೆ.
16 ದಿನಗಳಲ್ಲಿ ಈ ಆಸ್ಪತ್ರೆಯನ್ನು ಸ್ಥಾಪಿಸಿ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ಒಪ್ಪಂದದ ಪ್ರಕಾರ ಬಿಬಿಎಂಪಿ, ವೈದ್ಯಕೀಯ ಸಿಬ್ಬಂದಿ ಇಲ್ಲಿ ಅಗತ್ಯ ಸೇವೆಗಳನ್ನು ನೋಡಿಕೊಳ್ಳಬೇಕು. ಸ್ಥಳದ ಜವಾಬ್ದಾರಿ ಮಾತ್ರ ಹೆಚ್ಎಎಲ್ ಸಂಸ್ಥೆಯದ್ದು ಎಂದು ತಿಳಿಸಲಾಗಿದೆ.
ಹೆಚ್ಎಎಲ್ ಸಂಸ್ಥೆ 26.25 ಕೋಟಿ ರೂಪಾಯಿಯನ್ನು ಪಿಎಂ ಕೋವಿಡ್ ನಿಧಿಗೆ ದೇಣಿಗೆಯಾಗಿ ನೀಡಿದೆ. ಜೊತೆಗೆ ಹೈದ್ರಾಬಾದ್ನ ನಾಸಿಕ್ ಸೇರಿದಂತೆ 7 ವಿವಿಧ ನಗರಗಳಲ್ಲಿ 600 ಬೆಡ್ಗಳ ವ್ಯವಸ್ಥೆಯಿರುವ ಜಾಗಗಳನ್ನು ಸಂಸ್ಥೆಯಿಂದ ಗುರುತಿಸಲಾಗಿದೆ ಎಂದು ತಿಳಿಸಿದೆ.