ETV Bharat / city

ಅಧಿವೇಶನ ವಿಸ್ತರಿಸಲು ಒಪ್ಪದ ಸರ್ಕಾರ: ಕಾಂಗ್ರೆಸ್​​​​​​​​ ಸಭಾತ್ಯಾಗ

ರಾಜ್ಯದ ಜ್ವಲಂತ ಸಮಸ್ಯೆ ಕುರಿತು ಚರ್ಚಿಸಲು ಮೂರು ದಿನಗಳ ಅಧಿವೇಶನ ಸಾಕಾಗುವುದಿಲ್ಲ. ವಿಸ್ತರಿಸುವಂತೆ ಪ್ರತಿಪಕ್ಷ ಕಾಂಗ್ರೆಸ್​ ಒತ್ತಾಯಿಸಿತ್ತು. ಅದಕ್ಕೆ ಸರ್ಕಾರ ಒಪ್ಪಿಗೆ ನೀಡದೇ ಇರುವುದರಿಂದ ಕಾಂಗ್ರೆಸ್​ ಸಭಾತ್ಯಾಗ ಮಾಡಿದೆ.

congress-walk-out-at-session
author img

By

Published : Oct 10, 2019, 5:05 PM IST

ಬೆಂಗಳೂರು: ಅಧಿವೇಶನ ವಿಸ್ತರಿಸಲು ಸರ್ಕಾರ ಒಪ್ಪದ ಕಾರಣ ಕಾಂಗ್ರೆಸ್ ಸದನ‌ ಸಲಹಾ ಸಮಿತಿ ಸಭೆಯಿಂದ ಸಭಾತ್ಯಾಗ ಮಾಡಿದೆ.

ಸದನ‌ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಭೆಯಲ್ಲಿ ಮಾಜಿ ಸ್ಪೀಕರ್​ ರಮೇಶ್ ​ಕುಮಾರ್, ಮಾಜಿ ಸಚಿವ ಹೆಚ್.ಕೆ.ಪಾಟೀಲ್‌ ಭಾಗವಹಿಸಿದ್ದೆವು. ನೆರೆ ಸಂಬಂಧ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದ್ದು, ಅಧಿವೇಶನವನ್ನು ಹತ್ತು ದಿನಗಳಿಗೆ ವಿಸ್ತರಿಸುವಂತೆ ಒತ್ತಾಯಿಸಿದೆವು. ಆದರೆ, ಸರ್ಕಾರ ಒಪ್ಪಲಿಲ್ಲ. ಆದ ಕಾರಣ ನಾವು ಸಭೆಯಿಂದ ಸಭಾತ್ಯಾಗ ಮಾಡಿದ್ದೇವೆ ಎಂದು ತಿಳಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಜೆಡಿಎಸ್ ಸದನ ಸಲಹಾ ಸಮಿತಿಯೂ ಸಭೆಯನ್ನು ಬಹಿಷ್ಕರಿಸಿದೆ. ನೆರೆ ಸಂತ್ರಸ್ತರಿಗೆ ಪರಿಹಾರ ಬಗ್ಗೆ ನಿಯಮ 60ರಲ್ಲಿ ನಿಲುವಳಿ ಮಂಡಿಸಿದ್ದೇವೆ. ಸದನದಲ್ಲಿ ಎಲ್ಲಾ ಶಾಸಕರಿಗೆ ಚರ್ಚಿಸುವ ಅವಕಾಶ ನೀಡಬೇಕು‌. ಶಾಸಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇರುವುದು ಇದೊಂದೇ ವೇದಿಕೆ. ಆದ್ದರಿಂದ ಅಧಿವೇಶನವನ್ನು 10 ದಿನಗಳವರೆಗೆ ವಿಸ್ತರಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಬರಗಾಲ ಮತ್ತು ಪ್ರವಾಹ ಸಂಬಂಧ ಚರ್ಚೆ ನಡೆಸಲು ನಮ್ಮ ಮನವಿಗೆ ಸರ್ಕಾರ ಓಗೊಟ್ಟಿಲ್ಲ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ ತದ್ವಿರುದ್ಧವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ 6 ತಂಡಗಳನ್ನು ರಚಿಸಿ ಸಂತ್ರಸ್ತರ ಅಹವಾಲು ಸ್ವೀಕರಿಸಿದೆ. ಶಾಸಕರಿಗೆ ನೀಡಲಾದ‌ ಅನುದಾನ ಕಡಿತಗೊಳಿಸಲಾಗಿದೆ. ಈ ಬಗ್ಗೆ ಕಲಾಪದಲ್ಲಿ ಚರ್ಚಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:Body:KN_BNG_04_BSCMEETING_SIDDARAMAYYA_SCRIPT_7201951

ಅಧಿವೇಶನ ವಿಸ್ತರಿಸಲು ಒಪ್ಪದ ಸರ್ಕಾರ; ಸದನ‌ ಸಲಹಾ ಸಮಿತಿ ಸಭೆಯಿಂದ ಕಾಂಗ್ರಸ್ ವಾಕ್ ಔಟ್

ಬೆಂಗಳೂರು: ಅಧಿವೇಶನ ವಿಸ್ತರಿಸಲು ಸರ್ಕಾರ ಒಪ್ಪದೇ ಇರುವ ಕಾರಣ ಪ್ರತಿಪಕ್ಷ ಕಾಂಗ್ರೆಸ್ ಸದನ‌ ಸಲಹಾ ಸಮಿತಿ ಸಭೆಯಿಂದ ವಾಕ್ ಔಟ್ ಮಾಡಿದೆ.

ಸದನ‌ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಭೆಯಲ್ಲಿ ರಮೇಶ್ ಕುಮಾರ್, ಎಚ್.ಕೆ.ಪಾಟೀಲ್‌ ಬಾಗವಹಿಸಿದ್ದೆವು. ನೆರೆ ಸಂಬಂಧ ವ್ಯಾಪಕ ಚರ್ಚೆ ನಡೆಸುವ ಅಗತ್ಯ ಇದ್ದು, ಅಧಿವೇಶನವನ್ನು ಹತ್ತು ದಿನಗಳಿಗೆ ವಿಸ್ತರಿಸುವಂತೆ ಒತ್ತಾಯಿಸಿದೆವು. ಆದರೆ ಸರ್ಕಾರ ಅಧಿವೇಶನ ವಿಸ್ತರಿಸಲು ಒಪ್ಪದ ಕಾರಣ ನಾವು ಸಭೆಯಿಂದ ವಾಕ್ ಔಟ್ ಮಾಡಿದೆವು ಎಂದು ತಿಳಿಸಿದರು.

ಜೆಡಿಎಸ್ ಸದನ ಸಲಹಾ ಸಮಿತಿ ಸಭೆಯನ್ನು ಬಹಿಷ್ಕರಿಸಿತ್ತು. ನೆರೆ ಸಂತ್ರಸ್ತರಿಗೆ ಪರಿಹಾರ ಬಗ್ಗೆ ರೂಲ್ 60 ರಲ್ಲಿ ನಿಲುವಳಿ ಸೂಚನೆಯನ್ನು ಮಂಡಿಸಿದ್ದೇವೆ. ಎಲ್ಲ ಶಾಸಕರಿಗೆ ಚರ್ಚೆ ಮಾಡುವ ಅವಕಾಶ ನೀಡಬೇಕು‌. ಶಾಸಕರು ತಮ್ಮ ಸಮಸ್ಯೆಗಳನ್ನು ಹೇಳಲು ಇದೊಂದೇ ವೇದಿಕೆಯಾಗಿದೆ. ಅಧಿವೇಶನವನ್ನು 10 ದಿನ ವಿಸ್ತರಿಸಬೇಕೆಂದು ಒತ್ತಾಯಿಸಿದ್ದೇವೆ‌‌ ಎಂದು ತಿಳಿಸಿದರು.

ಆದರೆ, ಬರಗಾಲ ಮತ್ತು ಪ್ರವಾಹ ಸಂಬಂಧ ಚರ್ಚೆ ನಡೆಸುವಾಗಿನ ನಮ್ಮ ಮನವಿಗೆ ಸರ್ಕಾರ ಓಗೊಟ್ಟಿಲ್ಲ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ. ಮೂರೇ ದಿನಕ್ಕೆ ವಿಧಾನ‌ಸಭೆ ಕಲಾಪ‌ ಕರೆದಿದ್ದಾರೆ. ಮೂರು ದಿನ ಚೆರ್ಚೆ ನಡೆಸಿ ಒಂದು ದಿನ ಉತ್ತರ ನೀಡಲಿ. ಕಾಂಗ್ರೆಸ್ 6 ತಂಡಗಳನ್ನು ಮಾಡಿ ಪ್ರವಾಹ ಸಂತ್ರಸ್ತರ ಅಹವಾಲು ಕೇಳಿದ್ದೇವೆ. ಈ ಬಗ್ಗೆ ಸದನದಲ್ಲಿ ಚರ್ಚಿಸಬೇಕಾಗಿದೆ ಎಂದು ವಿವರಿಸಿದರು.

ಶಾಸಕರಿಗೆ ನೀಡಲಾದ‌ ಅನುದಾನವನ್ನು ಕಡಿತ ಮಾಡಲಾಗಿದೆ. ಈ ಬಗ್ಗೆಯೂ ಚರ್ಚೆ ಅಗತ್ಯ ಇದೆ. ಒಟ್ಟಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ತದ್ವಿರುದ್ಧವಾಗಿ ಬಿಜೆಪಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.