ಬೆಂಗಳೂರು: ಅಭಿವೃದ್ಧಿ ಮಾಡುತ್ತೇವೆ ಎಂದು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ನಾಯಕರು ಇದೀಗ ಸಚಿವರಾಗಿ ಮಾಡಿದ ಸಾಧನೆ ಏನು ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದೆ.
-
ಆಪರೇಷನ್ ಕಮಲಕ್ಕೆ ಒಳಗಾದವರು,
— Karnataka Congress (@INCKarnataka) September 10, 2020 " class="align-text-top noRightClick twitterSection" data="
ಅಭಿವೃದ್ಧಿಗಾಗಿ @BJP4Karnataka ಸೇರಿದ್ದೇವೆಂದು ಹೇಳಿಕೊಂಡವರು,
ನಿದ್ರಾವಸ್ಥೆಯಲ್ಲಿರುವ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಒಂದು ವರ್ಷದಿಂದ ಕಡಿದು ಗುಡ್ಡೆ ಹಾಕಿದ್ದೇನು?#BJPBetrayedKarnataka
">ಆಪರೇಷನ್ ಕಮಲಕ್ಕೆ ಒಳಗಾದವರು,
— Karnataka Congress (@INCKarnataka) September 10, 2020
ಅಭಿವೃದ್ಧಿಗಾಗಿ @BJP4Karnataka ಸೇರಿದ್ದೇವೆಂದು ಹೇಳಿಕೊಂಡವರು,
ನಿದ್ರಾವಸ್ಥೆಯಲ್ಲಿರುವ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಒಂದು ವರ್ಷದಿಂದ ಕಡಿದು ಗುಡ್ಡೆ ಹಾಕಿದ್ದೇನು?#BJPBetrayedKarnatakaಆಪರೇಷನ್ ಕಮಲಕ್ಕೆ ಒಳಗಾದವರು,
— Karnataka Congress (@INCKarnataka) September 10, 2020
ಅಭಿವೃದ್ಧಿಗಾಗಿ @BJP4Karnataka ಸೇರಿದ್ದೇವೆಂದು ಹೇಳಿಕೊಂಡವರು,
ನಿದ್ರಾವಸ್ಥೆಯಲ್ಲಿರುವ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಒಂದು ವರ್ಷದಿಂದ ಕಡಿದು ಗುಡ್ಡೆ ಹಾಕಿದ್ದೇನು?#BJPBetrayedKarnataka
ಆಪರೇಷನ್ ಕಮಲಕ್ಕೆ ಒಳಗಾದವರು, ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇವೆಂದು ಹೇಳಿಕೊಂಡವರು, ನಿದ್ರಾವಸ್ಥೆಯಲ್ಲಿರುವ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಒಂದು ವರ್ಷದಿಂದ ಕಡಿದು ಗುಡ್ಡೆ ಹಾಕಿದ್ದೇನು? ಎಂದು ಪ್ರಶ್ನಿಸಿದೆ. ಸರ್ಕಾರದ ಕಾರ್ಯವೈಖರಿಯನ್ನು ಸಹ ಟೀಕಿಸಿರುವ ಕಾಂಗ್ರೆಸ್, ಹಲವು ಬಗೆಯ ಕಷ್ಟನಷ್ಟಗಳನ್ನು ಎದುರಿಸುತ್ತಿರುವ ಜನರಿಗೆ ಸ್ಪಂದಿಸಲು ರಾಜ್ಯದಲ್ಲಿ ಸರ್ಕಾರವೆಂಬುದೇ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ. ಕೇಂದ್ರದಿಂದ ಆರ್ಥಿಕ ನೆರವು ಕೋರಲು ಧೈರ್ಯವಿಲ್ಲದ ಪುಕ್ಕಲು ಸರ್ಕಾರ ರಾಜ್ಯದಲ್ಲಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಆಫ್ ಲೈನ್ ಪರೀಕ್ಷೆ ಬೇಡ:
ಕೊರೊನಾ ಸೋಂಕು ಅಪಾಯಕಾರಿಯಾಗಿ ಹೆಚ್ಚುತ್ತಿದ್ದರೂ ಕೂಡಾ ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ಆಫ್ಲೈನ್ ಪರೀಕ್ಷೆಗಳನ್ನು ನಡೆಸಲು ಹೊರಟಿದೆ. ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ. ಆದಷ್ಟು ಬೇಗ ರಾಜ್ಯ ಬಿಜೆಪಿ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ವಹಿಸಲಿ ಎಂದು ಕಾಂಗ್ರೆಸ್ ಎಚ್ಚರಿಸಿದೆ.
ಕ್ಲೀನ್ ಚಿಟ್:
2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ ಅಂದಿನ ಅಧ್ಯಕ್ಷ ಮತ್ತು 9 ಸದಸ್ಯರಿಗೆ ಕ್ಲೀನ್ ಚಿಟ್ ನೀಡಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ತಮ್ಮ ಅವಧಿಯಲ್ಲಾದ ಅಕ್ರಮಗಳನ್ನು ಮುಚ್ಚಿಹಾಕಲು ಹೊರಟಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.