ETV Bharat / city

ಕಾಂಗ್ರೆಸ್​​​ನಿಂದ ಹುತಾತ್ಮ ಸೈನಿಕರಿಗೆ ನಾಳೆ ಶ್ರದ್ಧಾಂಜಲಿ: ಕೇಂದ್ರದ ವಿರುದ್ಧ ಮೌನ ಧರಣಿ - ಚೀನಾ ವಿರುದ್ಧ ಪ್ರತಿಭಟನೆ

ಲಡಾಕ್‌ನ ಗಾಲ್ವಾನ್‌ ನದಿ ಕಣಿವೆಯ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷ ಮತ್ತು ಭಾರತ ಯೋಧರ ಸಾವು ಖಂಡಿಸಿ ನಾಳೆ ರಾಜ್ಯ ಕಾಂಗ್ರೆಸ್​​​ ಪ್ರತಿಭಟನೆ ನಡೆಸಲಿದೆ.

Congress protest against central government
ಗಾಂಧಿ ಪ್ರತಿಮೆ
author img

By

Published : Jun 25, 2020, 9:23 AM IST

ಬೆಂಗಳೂರು: ಭಾರತ - ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಿಗೆ ಕಾಂಗ್ರೆಸ್ ಇಂದು ಶೃದ್ಧಾಂಜಲಿ ಸಲ್ಲಿಸಲಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಮೌನ ಧರಣಿ ನಡೆಸಲು ತೀರ್ಮಾನಿಸಲಾಗಿದೆ.

Congress protest against central government
ಡಿ.ಕೆ.ಶಿವಕುಮಾರ್​ ಅವರು ಹೊರಡಿಸಿರುವ ಪ್ರಕಟಣೆ

'ಶಹೀದೊಂಕೊ ಸಲಾಂ ದಿವಸ' ಹೆಸರಿನಲ್ಲಿ ನಗರದ ರೇಸ್​​​ಕೋರ್ಸ್ ರಸ್ತೆಯ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಮುಂಭಾಗ ನಾಳೆ ಬೆಳಗ್ಗೆ 11 ರಿಂದ 12ರವರೆಗೆ ಈ ಧರಣಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಡಿಕೆಶಿ ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.