ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನಾನು ನೋಡಿಲ್ಲ. ಕಾಶ್ಮೀರದಲ್ಲಿ ನಡೆದ ಘಟನೆ ಸುಳ್ಳಲ್ಲ. ಆದರೂ, ಸಿನಿಮಾದಲ್ಲಿರುವುದು ನಿರ್ದೇಶಕರ ಒಂದು ಕಲ್ಪನೆ ಮಾತ್ರ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ ನಡೆದ ಘಟನೆಗಳು ಸುಳ್ಳು ಎಂದು ಹೇಳಲ್ಲ. ಕಲ್ಪನೆಯ ಆಧಾರದ ಮೇಲೆ ಸಿನಿಮಾವನ್ನು ಚಿತ್ರಿಸಲಾಗಿದೆ. ಗೋದ್ರಾ ಹತ್ಯಾಕಾಂಡದ ಬಗ್ಗೆ ಏಕೆ ಸಿನಿಮಾ ಆಗುತ್ತಿಲ್ಲ?. ಅದನ್ನೂ ತೋರಿಸಲಿ. ದೇಶದಲ್ಲಿ ಕೋಮು ಗಲಭೆ ಆಗಬಾರದು ಅಷ್ಟೇ ಎಂದರು.
ಕೋಮು ಗಲಭೆಗಳು ಆದಾಗ ಸರ್ಕಾರದ ಜವಾಬ್ದಾರಿ ವಹಿಸಬೇಕಿತ್ತು. ಆಗ ಯಾವ ಸರ್ಕಾರ ಇತ್ತು ಎಂಬ ಬಗ್ಗೆನೂ ಚರ್ಚೆಯಾಗಬೇಕು. ಕನ್ನಡದಲ್ಲಿ ಸಿನಿಮಾ ಡಬ್ ಆಗುವುದಾದರೆ ಆಗಲಿ. ಕೊನೆಯದಾಗಿ ಇದೊಂದು ಸಿನಿಮಾವಷ್ಟೇ. ನೋಡುವವರು ನೋಡುತ್ತಾರೆ ಎಂದು ಹೇಳಿದರು.
ಓದಿ: ಚುನಾವಣೆಗೂ ಮುನ್ನ ಸಿಎಂ ಘೋಷಣೆ ಮಾಡುವ ಸಂಪ್ರದಾಯ ಕಾಂಗ್ರೆಸ್ನಲ್ಲಿಲ್ಲ: ಬಿ.ಎಂ.ಪಾಟೀಲ್