ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವುದನ್ನು ಖಂಡಿಸಿ ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಿರುವ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನ ಮಾಜಿ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್‌ನ ಇಬ್ಬರು ಮಾಜಿ ಸಚಿವರು, ರಾಜ್ಯ ಸರ್ಕಾರಕ್ಕೆ ಮೇಕೆದಾಟು ಯೋಜನೆ ಜಾರಿಗೆ ತರುವ ಬದ್ಧತೆ ಇಲ್ಲ. ಉತ್ತಮ ಆಶಯದೊಂದಿಗೆ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ವಿರುದ್ಧ ಷಡ್ಯಂತ್ರ ರೂಪಿಸುವ ಕಾರ್ಯ ಮಾಡುತ್ತಿದೆ ಎಂದು ದೂರಿದ್ದಾರೆ.
ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಸರಣಿ ಟ್ವೀಟ್ ಮಾಡಿದ್ದು, ನೀರಿನ ನ್ಯಾಯ ಬದ್ಧವಾದ ಹಕ್ಕುದಾರಿಕೆಗಾಗಿ ಮೇಕೆದಾಟು ಅಭಿಯಾನದಡಿ ಹಮ್ಮಿಕೊಂಡಿರುವ ಕಾಂಗ್ರೆಸ್ ಪಾದಯಾತ್ರೆಯನ್ನು ಕಂಡು ಹತಾಶರಾಗಿರುವ ರಾಜ್ಯ ಬಿಜೆಪಿ ಪಕ್ಷದವರು ದಿನ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ತಮ್ಮ ಭಯಗ್ರಸ್ಥ ಮನಸ್ಥಿತಿಯನ್ನು ಜನರೆದುರು ಅನಾವರಣಗೊಳಿಸಿದ್ದಾರೆ ಎಂದಿದ್ದಾರೆ.
-
ನೀರಿನ ನ್ಯಾಯ ಬದ್ಧವಾದ ಹಕ್ಕುದಾರಿಕೆಗಾಗಿ ಮೇಕೆದಾಟು ಅಭಿಯಾನದಡಿ ಹಮ್ಮಿಕೊಂಡಿರುವ ಕಾಂಗ್ರೆಸ್ ಪಾದಯಾತ್ರೆಯನ್ನು ಕಂಡು ಹತಾಶರಾಗಿರುವ @BJP4Karnataka ಪಕ್ಷದವರು ದಿನ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ತಮ್ಮ ಭಯಗ್ರಸ್ಥ ಮನಸ್ಥಿತಿಯನ್ನು ಜನರೆದುರು ಅನಾವರಣಗೊಳಿಸಿದ್ದಾರೆ.
— Dr H.C.Mahadevappa (@CMahadevappa) January 12, 2022 " class="align-text-top noRightClick twitterSection" data="
1/5
">ನೀರಿನ ನ್ಯಾಯ ಬದ್ಧವಾದ ಹಕ್ಕುದಾರಿಕೆಗಾಗಿ ಮೇಕೆದಾಟು ಅಭಿಯಾನದಡಿ ಹಮ್ಮಿಕೊಂಡಿರುವ ಕಾಂಗ್ರೆಸ್ ಪಾದಯಾತ್ರೆಯನ್ನು ಕಂಡು ಹತಾಶರಾಗಿರುವ @BJP4Karnataka ಪಕ್ಷದವರು ದಿನ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ತಮ್ಮ ಭಯಗ್ರಸ್ಥ ಮನಸ್ಥಿತಿಯನ್ನು ಜನರೆದುರು ಅನಾವರಣಗೊಳಿಸಿದ್ದಾರೆ.
— Dr H.C.Mahadevappa (@CMahadevappa) January 12, 2022
1/5ನೀರಿನ ನ್ಯಾಯ ಬದ್ಧವಾದ ಹಕ್ಕುದಾರಿಕೆಗಾಗಿ ಮೇಕೆದಾಟು ಅಭಿಯಾನದಡಿ ಹಮ್ಮಿಕೊಂಡಿರುವ ಕಾಂಗ್ರೆಸ್ ಪಾದಯಾತ್ರೆಯನ್ನು ಕಂಡು ಹತಾಶರಾಗಿರುವ @BJP4Karnataka ಪಕ್ಷದವರು ದಿನ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ತಮ್ಮ ಭಯಗ್ರಸ್ಥ ಮನಸ್ಥಿತಿಯನ್ನು ಜನರೆದುರು ಅನಾವರಣಗೊಳಿಸಿದ್ದಾರೆ.
— Dr H.C.Mahadevappa (@CMahadevappa) January 12, 2022
1/5
ಮೇಕೆದಾಟು ಯೋಜನೆ ಕುರಿತು ರಾಜ್ಯದ ಸಮಗ್ರ ಯೋಜನಾ ವರದಿಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿತ್ತು. ಇದನ್ನು ವಿರೋಧಿಸಿ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದೆ. ಯೋಜನೆಗೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ತಮಿಳುನಾಡು ಮನವಿ ಮಾಡಿದೆ ಎಂದು ಹೇಳಿದ್ದಾರೆ.
'ಏಕಮುಖ ಪತ್ರಿಕಾ ಜಾಹೀರಾತಿನ ಮೊರೆ'
ಹೀಗಿರುವಾಗ ಜನರ ಹಿತ ಕಾಪಾಡಬೇಕಾದ ಜವಾಬ್ದಾರಿಯನ್ನು ಹೊಂದಿರುವ ರಾಜ್ಯ ಬಿಜೆಪಿ ಸರ್ಕಾರವು ಜನರ ಬದುಕಿನ ಹಿತಕ್ಕೆ ಪೂರಕವಾಗಿ ತಮಿಳುನಾಡು ಸರ್ಕಾರದ ರೀತಿ ವ್ಯವಸ್ಥಿತ ನ್ಯಾಯಾಂಗ ಹೋರಾಟವನ್ನಾಗಲೀ ಶಾಂತಿಯುತ ಮಾತುಕತೆಯನ್ನಾಗಲೀ ಮಾಡಿ ಈ ಸಮಸ್ಯೆಯನ್ನು ಪರಿಹರಿಸಲು ಯತ್ನಿಸುತ್ತಿಲ್ಲ. ಈ ಸರಳ ಸಂಗತಿಯನ್ನು ರಾಜ್ಯದ ಜನರ ಎದುರು ಬಂದು ಹೇಳಿದರೆ, ಜನರು ಇವರ ಅಪ್ರಾಮಾಣಿಕ ರಾಜ್ಯದ್ರೋಹಿ ನಡವಳಿಕೆಗಳಿಗೆ ಇವರ ಮುಖಕ್ಕುಗಿದು ಛೀಮಾರಿ ಹಾಕುತ್ತಾರೆಂಬ ಕಾರಣಕ್ಕೆ ಇವರು ಏಕಮುಖ ಪತ್ರಿಕಾ ಜಾಹೀರಾತಿನ ಮೊರೆ ಹೋಗಿದ್ದು, ಅದು ಇವರ ದುರ್ಬಲತೆಗೆ ಹಿಡಿದ ಕನ್ನಡಿಯಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಯಾವ ದಿಕ್ಕಿನಲ್ಲಿ ನೋಡಿದರೂ ಜನರ ಬದುಕಿನ ವಿಷಯದಲ್ಲಿ ಈವರೆಗೂ ಕವಡೆ ಕಾಸಿನ ಕಿಮ್ಮತ್ತಿಲ್ಲದೇ ಬೇಜವಾಬ್ದಾರಿಯಿಂದ ವರ್ತಿಸಿರುವ ಕೇಂದ್ರ ಬಿಜೆಪಿ ಮತ್ತು ರಾಜ್ಯ ಬಿಜೆಪಿಗರು ಸಂವಿಧಾನಾತ್ಮಕ ಸಾರ್ವಜನಿಕ ಸೇವೆಗೆ ಎಂದಿಗೂ ತಕ್ಕವರಲ್ಲ ಎಂದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
'ವಿಶ್ವಾಸವಿದ್ದರೆ ಬಹಿರಂಗ ವೇದಿಕೆಗೆ ಬರಲಿ'
ಮಾಜಿ ಸಚಿವ ಪ್ರಿಯಾಂಕ ಖರ್ಗೆ ಟ್ವೀಟ್ ಮಾಡಿ, ಕಾಂಗ್ರೆಸ್ ಪಾದಯಾತ್ರೆಯಿಂದ ಕಂಗೆಟ್ಟಿರುವ ಬಿಜೆಪಿ ಪದೇ ಪದೇ ಜಾಹಿರಾತು ನೀಡಿ ಮಾನ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಈ ಜಾಹಿರಾತಿನಲ್ಲಿರುವ ಅಂಶಗಳ ಬಗ್ಗೆ ವಿಶ್ವಾಸವಿದ್ದರೆ ಬಹಿರಂಗ ವೇದಿಕೆಗೆ ಬರಲಿ, ಮೇಕೆದಾಟು ಯೋಜನೆಯ ಲಾಭ ಪಡೆಯುವ ಜಿಲ್ಲೆಗಳ ಜನರ ಮುಂದೆ ನಿಂತು ಕಾಂಗ್ರೆಸ್‌ನ ಪಾದಯಾತ್ರೆಯ ವಿಷಯದಲ್ಲಿ ಹುರುಳಿಲ್ಲ ಎಂದು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.
-
ಕಾಂಗ್ರೆಸ್ ಪಾದಯಾತ್ರೆಯಿಂದ ಕಂಗೆಟ್ಟಿರುವ ಬಿಜೆಪಿ ಪದೇ ಪದೇ ಜಾಹಿರಾತು ನೀಡಿ ಮಾನ ಉಳಿಸಿಕೊಳ್ಳಲು ಯತ್ನಿಸುತ್ತಿದೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 12, 2022 " class="align-text-top noRightClick twitterSection" data="
ಈ ಜಾಹಿರಾತಿನಲ್ಲಿರುವ ಅಂಶಗಳ ಬಗ್ಗೆ ವಿಶ್ವಾಸವಿದ್ದರೆ ಬಹಿರಂಗ ವೇದಿಕೆಗೆ ಬರಲಿ,
ಮೇಕೆದಾಟು ಯೋಜನೆಯ ಲಾಭ ಪಡೆಯುವ ಜಿಲ್ಲೆಗಳ ಜನರ ಮುಂದೆ ನಿಂತು ಕಾಂಗ್ರೆಸ್‌ನ ಪಾದಯಾತ್ರೆಯ ವಿಷಯದಲ್ಲಿ ಹುರುಳಿಲ್ಲ ಎಂದು ಸಾಬೀತುಪಡಿಸಲಿ. pic.twitter.com/tL3akgXnVJ
">ಕಾಂಗ್ರೆಸ್ ಪಾದಯಾತ್ರೆಯಿಂದ ಕಂಗೆಟ್ಟಿರುವ ಬಿಜೆಪಿ ಪದೇ ಪದೇ ಜಾಹಿರಾತು ನೀಡಿ ಮಾನ ಉಳಿಸಿಕೊಳ್ಳಲು ಯತ್ನಿಸುತ್ತಿದೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 12, 2022
ಈ ಜಾಹಿರಾತಿನಲ್ಲಿರುವ ಅಂಶಗಳ ಬಗ್ಗೆ ವಿಶ್ವಾಸವಿದ್ದರೆ ಬಹಿರಂಗ ವೇದಿಕೆಗೆ ಬರಲಿ,
ಮೇಕೆದಾಟು ಯೋಜನೆಯ ಲಾಭ ಪಡೆಯುವ ಜಿಲ್ಲೆಗಳ ಜನರ ಮುಂದೆ ನಿಂತು ಕಾಂಗ್ರೆಸ್‌ನ ಪಾದಯಾತ್ರೆಯ ವಿಷಯದಲ್ಲಿ ಹುರುಳಿಲ್ಲ ಎಂದು ಸಾಬೀತುಪಡಿಸಲಿ. pic.twitter.com/tL3akgXnVJಕಾಂಗ್ರೆಸ್ ಪಾದಯಾತ್ರೆಯಿಂದ ಕಂಗೆಟ್ಟಿರುವ ಬಿಜೆಪಿ ಪದೇ ಪದೇ ಜಾಹಿರಾತು ನೀಡಿ ಮಾನ ಉಳಿಸಿಕೊಳ್ಳಲು ಯತ್ನಿಸುತ್ತಿದೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 12, 2022
ಈ ಜಾಹಿರಾತಿನಲ್ಲಿರುವ ಅಂಶಗಳ ಬಗ್ಗೆ ವಿಶ್ವಾಸವಿದ್ದರೆ ಬಹಿರಂಗ ವೇದಿಕೆಗೆ ಬರಲಿ,
ಮೇಕೆದಾಟು ಯೋಜನೆಯ ಲಾಭ ಪಡೆಯುವ ಜಿಲ್ಲೆಗಳ ಜನರ ಮುಂದೆ ನಿಂತು ಕಾಂಗ್ರೆಸ್‌ನ ಪಾದಯಾತ್ರೆಯ ವಿಷಯದಲ್ಲಿ ಹುರುಳಿಲ್ಲ ಎಂದು ಸಾಬೀತುಪಡಿಸಲಿ. pic.twitter.com/tL3akgXnVJ
ಇದನ್ನೂ ಓದಿ: ಕಾಂಗ್ರೆಸ್ ನಡೆಗೆ ದಿಢೀರ್ ಬ್ರೇಕ್.. ಮೇಕೆದಾಟು ಪಾದಯಾತ್ರೆ ನಿಷೇಧಿಸಿ ಸರ್ಕಾರದಿಂದ ಮಹತ್ವದ ಆದೇಶ