ETV Bharat / city

ಆರ್ಥಿಕ ಸ್ವಾಯತ್ತತೆ ನಿಯಂತ್ರಣ ಜವಾಬ್ದಾರಿ ನೀಡುವ ಬಗ್ಗೆ ಸಮಿತಿ ರಚನೆಗೆ ನಿರ್ಧಾರ : ಸ್ಪೀಕರ್ ಕಾಗೇರಿ

1921ರಲ್ಲಿ ವಿಧಾನಸಭಾ ಸಚಿವಾಲಯಕ್ಕೆ ಆರ್ಥಿಕ ಸ್ವಾಯತ್ತತೆ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಲೋಕಸಭೆಯಲ್ಲಿ ಆರ್ಥಿಕ ಸ್ವಾಯತ್ತತೆ ನೀಡಲಾಗಿದೆ. ಆದರೆ, ರಾಜ್ಯಗಳಿಗೆ ನೀಡಲಾಗಿಲ್ಲ. ಆರ್ಥಿಕ ಸ್ವಾಯತ್ತತೆ ನೀಡಲು ಪೀಠಾಸೀನರ ಸಮಿತಿ ಮಾಡಿ, ಸಿಎಂ ಮತ್ತು ವಿಪಕ್ಷಗಳ ಸಮ್ಮುಖದಲ್ಲಿ ಅನುಮತಿ ನೀಡಲು ನಿರ್ಧಾರ ಮಾಡಿದ್ದೇವೆ. ಅಂದುಕೊಂಡಂತಾದರೆ ನಮ್ಮ ರಾಜ್ಯವೂ ಆರ್ಥಿಕ ಸ್ವಾಯತ್ತತೆ ಸಾಲಿನಲ್ಲಿ ಸೇರಲಿದೆ..

committee on financial autonomy control responsibility
ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
author img

By

Published : Nov 21, 2021, 3:50 PM IST

ಬೆಂಗಳೂರು : ಆರ್ಥಿಕ ಸ್ವಾಯತ್ತತೆ ನಿಯಂತ್ರಣ (Financial autonomy control) ಜವಾಬ್ದಾರಿಯನ್ನು ನೀಡುವ ಬಗ್ಗೆ ಸಮಿತಿ ರಚನೆಗೆ ನಿರ್ಧಾರ ಮಾಡಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwara Hegde Kageri) ಅವರು ತಿಳಿಸಿದರು.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1921ರಲ್ಲಿ ವಿಧಾನಸಭಾ ಸಚಿವಾಲಯಕ್ಕೆ ಆರ್ಥಿಕ ಸ್ವಾಯತ್ತತೆ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಲೋಕಸಭೆಯಲ್ಲಿ ಆರ್ಥಿಕ ಸ್ವಾಯತ್ತತೆ (Financial autonomy) ನೀಡಲಾಗಿದೆ.

ಆದರೆ, ರಾಜ್ಯಗಳಿಗೆ ನೀಡಲಾಗಿಲ್ಲ. ಆರ್ಥಿಕ ಸ್ವಾಯತ್ತತೆ ನೀಡಲು ಪೀಠಾಸೀನರ ಸಮಿತಿ ಮಾಡಿ. ಸಿಎಂ ಮತ್ತು ವಿಪಕ್ಷಗಳ ಸಮ್ಮುಖದಲ್ಲಿ ಅನುಮತಿ ನೀಡಲು ನಿರ್ಧಾರ ಮಾಡಿದ್ದೇವೆ. ಅಂದುಕೊಂಡಂತಾದರೆ ನಮ್ಮ ರಾಜ್ಯವೂ ಆರ್ಥಿಕ ಸ್ವಾಯತ್ತತೆ ಸಾಲಿನಲ್ಲಿ ಸೇರಲಿದೆ ಎಂದರು.

ಅತ್ಯುತ್ತಮ ವಿಧಾನಸಭೆ-ಅತ್ಯುತ್ತಮ ವಿಧಾನ ಪರಿಷತ್ ಪ್ರಶಸ್ತಿ : ರಾಷ್ಟ್ರಪತಿ, ರಾಜ್ಯಪಾಲರ ಭಾಷಣ, ಪ್ರಶ್ನೋತ್ತರ ವೇಳೆ ಸದನದಲ್ಲಿ ಗದ್ದಲ ಉಂಟಾಗದಂತೆ ನೋಡಿಕೊಳ್ಳಲು ಸರ್ವ ಪಕ್ಷಗಳ ಜೊತೆಗೆ ಸಮಾಲೋಚಿಸಿ ನಿರ್ಣಯ ಕೈಗೊಳ್ಳಲಾಗುವುದು. ನೂತನ ಆಯ್ಕೆಯಾಗುವ ಶಾಸಕರಿಗೆ ತರಬೇತಿ ನೀಡಲಾಗುತ್ತದೆ.

ಅತ್ಯುತ್ತಮ ವಿಧಾನಸಭೆ- ಅತ್ಯುತ್ತಮ ವಿಧಾನ ಪರಿಷತ್ ಪ್ರಶಸ್ತಿ ನೀಡಲು ಹಿಂದೆಯೇ ಚರ್ಚೆಯಾಗಿತ್ತು. ಉತ್ತಮ ವಿಧಾನಸಭೆ, ಪರಿಷತ್ ಪ್ರಶಸ್ತಿ ನೀಡಲು ಸಮಿತಿ ರಚನೆಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಶಿಮ್ಲಾದಲ್ಲಿ ಪೀಠಾಸಿನಾಧಿಕಾರಿಗಳ ಸಮ್ಮೇಳನ : ನವೆಂಬರ್ 17 ಮತ್ತು 18ರಂದು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಪೀಠಾಸಿನಾಧಿಕಾರಿಗಳ ಸಮ್ಮೇಳನ ನಡೆಯಿತು. 26 ರಾಜ್ಯಗಳ ವಿಧಾನಸಭಾಧ್ಯಕ್ಷರು, ಸಚಿವಾಲಯದ ಕಾರ್ಯದರ್ಶಿಗಳು, ಅಧಿಕಾರಿಗಳು ಭಾಗವಹಿಸಿದ್ದರು. ಅತ್ಯಂತ ಯಶಸ್ವಿಯಾಗಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ.

ಎರಡು ವಿಷಯಗಳ ಬಗ್ಗೆ ವಿಶೇಷ ಚರ್ಚೆ ನಡೆದಿದೆ. ಶತಮಾನದ ಪಯಣ, ನಡೆಯಬೇಕಾದ ಮಾರ್ಗದ ಬಗ್ಗೆ ಚರ್ಚೆ ನಡೆಯಿತು. ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ ಬಗ್ಗೆ ಪೀಠಾಸಿನಾಧಿಕಾರಿಗಳ ಜವಾಬ್ದಾರಿ ಬಗ್ಗೆ ನಾನು ಮಾತನಾಡಿದ್ದೆ ಎಂದು ಹೇಳಿದರು.

ರಾಜ್ಯದಲ್ಲಿ ನಡೆದ ರೀತಿಯಲ್ಲೇ ಹಿಮಾಚಲ ಪ್ರದೇಶ ವಿಧಾನಸಭಾ ಸಮ್ಮೇಳನ ಸಭಾಂಗಣದಲ್ಲಿ ಲೋಕಸಭೆ ಸ್ಪೀಕರ್ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದರು. ಇಲ್ಲಿ ಮಾಡಿದಂತೆ ಯಾರೂ ಅಲ್ಲಿ ವಿವಾದ ಮಾಡದೇ ಪ್ರಬುದ್ಧವಾಗಿ ನಡೆದುಕೊಂಡರು ಎಂದು ಹೇಳಿದರು.

ಡಿಕೆಶಿಗೆ ತಿರುಗೇಟು : ಶಾಸಕ ಶ್ರೀನಿವಾಸ್ ಮಾನೆ ಪ್ರಮಾಣವಚನ ಕುರಿತಾಗಿ ನಾನು ಅವರ ಜೊತೆ ಮಾತನಾಡಿದ್ದೇನೆ. ಅವರಿಗೆ ಬೇರೆ ದಿನ ನೀಡುವುದಾಗಿ ಹೇಳಿದ್ದೇನೆ. ಅಂದು ಪ್ರಮಾಣವಚನ ಸ್ವೀಕರಿಸಿದೆ ಹೊರಗೆ ಹೋದರು. ಬೇರೆ ಕಾರ್ಯಕ್ರಮ ಇದ್ದಿದ್ದರಿಂದ ನಾನು ಹೊರಗೆ ಬಂದೆ ಎಂದು ಹೇಳಿದರು.

ಸ್ಪೀಕರ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಗರಂ‌ ಆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕಾಗೇರಿ, ಪ್ರವಾಹದಲ್ಲಿ ಈಜುವಾಗ ಕೆಲವೊಮ್ಮೆ ಸುಮ್ಮನಿರಬೇಕಾಗುತ್ತದೆ. ಕೆಪಿಸಿಸಿ ಅಧ್ಯಕ್ಷರಿಗೆ, ಸಭಾಧ್ಯಕ್ಷರ ಸ್ಥಾನದ ಗೌರವದ ಬಗ್ಗೆ ಅರಿವಿದೆ ಅಂದುಕೊಂಡಿದ್ದೇನೆ ಎಂದರು.

ಹತ್ತು ದಿನ ಬೆಳಗಾವಿಯಲ್ಲಿ ಅಧಿವೇಶನ : ಕಳೆದ ಮೂರು ವರ್ಷಗಳ ಬಳಿಕ ಬೆಳಗಾವಿಯ ಸುವರ್ಣಸೌಧದಲ್ಲಿ (Belagavi Suvarnasiudha) 10 ದಿನಗಳ ಕಾಲ ವಿಧಾನಮಂಡಲದ ಕಲಾಪ ನಡೆಸಲು ನಿರ್ಧರಿಸಲಾಗಿದೆ.

ಡಿಸೆಂಬರ್ 13 ರಿಂದ 24ರವರೆಗೆ ಕಲಾಪ ನಡೆಯುತ್ತದೆ. ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಓದಿ: ಕಾಂಗ್ರೆಸ್‌ ಸಾಗರದಷ್ಟು ಬೆಳೆದಿದೆ, ಅದರ 75 ವರ್ಷದ ಆಡಳಿತ ಸಮುದ್ರದ ಉಪ್ಪು ನೀರಿನಂತೆ.. ಬಿಎಸ್​ವೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.