ಬೆಂಗಳೂರು: ಕೊರೊನಾ ಪರೀಕ್ಷೆ ಮಾಡಲು ರಾಜ್ಯದಲ್ಲೀಗ 10 ಲ್ಯಾಬ್ಗಳಿದ್ದು, ಪರೀಕ್ಷೆ ರಿಸ್ಟಲ್ ಬರಲು 5-6 ಗಂಟೆಯಾಗುತ್ತೆ. ಹೀಗಾಗಿ, ಕೋವಿಡ್-19 ಪರೀಕ್ಷೆಗೆ ಏಪ್ರಿಲ್ 8 ರಂದು ಭಾರತಕ್ಕೆ ಕಿಟ್‌ಗಳ ಆಮದು ಮಾಡಲಾಗುತ್ತಿದ್ದು, ಇದನ್ನ ಕೇವಲ ಹಾಟ್‌ಸ್ಪಾಟ್ ಎಂದು ಗುರುತಿಸಿರುವ ಸ್ಥಳಗಳಿಗೆ ಮಾತ್ರ ICMR ನೀಡಲಿದೆ.
ಬೆಂಗಳೂರು, ಮೈಸೂರು, ಬೆಳಗಾವಿಯಂತಹ ಹಾಟ್ಸ್ಪಾಟ್ಗಳಲ್ಲಿ ಕಿಟ್ ಬಳಕೆ ಮಾಡಲಾಗುತ್ತೆ. ರ‍್ಯಾಪಿಡ್ ಕಿಟ್‌ನಿಂದ ಅತಿ ಸುಲಭವಾಗಿ ಮತ್ತು ವೇಗವಾಗಿ ಕೋವಿಡ್ 19 ಟೆಸ್ಟ್ ಮಾಡಬಹುದು. ಈ ಹಿನ್ನೆಲೆಯಲ್ಲಿ ಸೋಂಕಿತರು ಹೆಚ್ಚಿರುವ ಪ್ರದೇಶದಲ್ಲಿ ಕಿಟ್ ನೀಡಲು ನಿರ್ಧಾರ ಮಾಡಲಾಗಿದ್ದು, ICMR ನಿಂದ 7 ಲಕ್ಷ ರ‍್ಯಾಪಿಡ್ ಆ್ಯಂಟಿ ಬಾಡಿ ಟೆಸ್ಟಿಂಗ್ ಕಿಟ್ ಖರೀದಿ ಮಾಡಲು ಮುಂದಾಗಿದೆ. ಕೋವಿಡ್-19 ಪರೀಕ್ಷೆಗೆ ಏಪ್ರಿಲ್ 8 ರಂದು ಭಾರತಕ್ಕೆ ಕಿಟ್‌ಗಳ ಆಮದು ಮಾಡಲಾಗುತ್ತಿದ್ದು, ಇದನ್ನ ಕೇವಲ ಹಾಟ್‌ಸ್ಪಾಟ್ ಎಂದು ಗುರುತಿಸಿರುವ ಸ್ಥಳಗಳಿಗೆ ಮಾತ್ರ ICMR ನೀಡಲಿದೆ.
ಇನ್ನು, ಎರಡು ಫೇಸ್‌ಗಳಲ್ಲಿ ಕಿಟ್‌ಗಳನ್ನು ಪಡೆಯಲಾಗುತ್ತಿದೆ. ಮೊದಲ ಫೇಸ್‌ನಲ್ಲಿ 5 ಲಕ್ಷ ಕಿಟ್‌ಗಳನ್ನು ತರಿಸಿಕೊಳ್ಳಲಾಗುತ್ತಿದೆ. ಅಂದಹಾಗೆ, ಈ ಮೊದಲು ಪರೀಕ್ಷೆಗಾಗಿ ಮೂಗು ಹಾಗೂ ಗಂಟಲಿನ ದ್ರವ ತೆಗೆದುಕೊಳ್ಳಲಾಗ್ತಿತ್ತು. ಆದರೆ, ರ‍್ಯಾಪಿಡ್ ಆ್ಯಂಟಿ ಬಾಡಿ ಟೆಸ್ಟಿಂಗ್ ಕಿಟ್‌ನಿಂದ ಪರೀಕ್ಷೆ ನಡೆಸಲು ಕೇವಲ ರಕ್ತದ ಮಾದರಿ ಸಾಕು. ಸ್ಯಾಂಪಲ್ ಸಂಗ್ರಹ ಕೂಡ ಅತ್ಯಂತ ಸುಲಭವಾಗಿದೆ. ಸಾಮಾನ್ಯ ರಕ್ತ ಪರೀಕ್ಷೆ ಮಾಡುವಾಗ ಹೇಗೆ ರಕ್ತವನ್ನ ತೆಗೆಯುತ್ತಾರೋ ಅದೇ ರೀತಿ ಸ್ಯಾಂಪಲ್ ಸಂಗ್ರಹ ಮಾಡಲಾಗತ್ತೆ.
ಇನ್ನು,ಹೊಸ ಮಾದರಿ ಕೊರೊನಾ ಟೆಸ್ಟಿಂಗ್ ಕಿಟ್ನಲ್ಲಿ 15 ನಿಮಿಷಕ್ಕೆ ಫಲಿತಾಂಶ ಸಿಗಲಿದೆ. ಈಗಿರುವ ಪಿಸಿಆರ್ ಟೆಸ್ಟಿಂಗ್ನಲ್ಲಿ ಫಲಿತಾಂಶಕ್ಕೆ 5ರಿಂದ 6 ಗಂಟೆ ಸಮಯಾವಕಾಶ ಬೇಕು. ಈವರೆಗೂ ದೇಶದಲ್ಲಿ 70 ಸಾವಿರ ಜನರಿಗೆ ಮಾತ್ರ ಕೊರೊನಾ ಟೆಸ್ಟ್ ಮಾಡಲಾಗಿದೆ.