ಬೆಂಗಳೂರು: ತೆರಪಿನ ಶ್ವಾಸಕೋಶದ ಕಾಯಿಲೆಯಿಂದ ತಮಿಳುನಾಡಿನ 62 ವರ್ಷದ ವ್ಯಕ್ತಿ ಮತ್ತು ಜನ್ಮಜಾತ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಜಾರ್ಖಂಡ್‌ನ 40 ವರ್ಷದ ವ್ಯಕ್ತಿಯು ನಗರದ ಆಸ್ಟರ್ ಆಸ್ಪತ್ರೆ ಮತ್ತು ಹೈದರಾಬಾದ್‌ನ ಕಿಮ್ಸ್ ಆಸ್ಪತ್ರೆ ವೈದ್ಯರ ತಂಡ ಜಂಟಿ ಪ್ರಯತ್ನದ ಫಲವಾಗಿ ಮರುಜೀವ ಪಡೆದಿದ್ದಾರೆ. ಇಬ್ಬರಿಗೂ ಶ್ವಾಸಕೋಶ ಕಸಿ, ಹೃದಯ ಹಾಗೂ ಶ್ವಾಸಕೋಶಗಳ ಸಂಯೋಜಿತ ಕಸಿ ನಡೆಸಲಾಗಿದೆ.
ಜಾರ್ಖಂಡ್‌ನ ಪವನ್ ಕುಮಾರ್ ಸಿಂಗ್ ಅವರಿಗೆ ಮಹತ್ವದ ರಚನಾತ್ಮಕ ಸಮಸ್ಯೆಗಳೊಂದಿಗೆ ಜನ್ಮಜಾತ ಹೃದ್ರೋಗದ ಇತಿಹಾಸವಿತ್ತು. ಮತ್ತು ತೀವ್ರವಾದ ಶ್ವಾಸಕೋಶದ ಅಧಿಕ ರಕ್ತದೊತ್ತಡವಿತ್ತು. ಇದರಿಂದ ಜೀವನ ಗುಣಮಟ್ಟ ಕಳೆದುಹೋಗುವ ಜೊತೆಗೆ ಅವರು ಆಮ್ಲಜನಕ ಅವಲಂಬಿಸುವಂತೆ ಮಾಡಿತ್ತು. ಸೂಕ್ತ ವೈದ್ಯಕೀಯ ನಿರ್ವಹಣೆ ಹೊರತಾಗಿಯೂ, ಪರಿಸ್ಥಿತಿ ಹದಗೆಡುತ್ತಲೇ ಇತ್ತು. ಹೀಗಾಗಿ, ಅವರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಬೇಕಾಯಿತು.
ಇದನ್ನೂ ಓದಿ...ಅಪರಾಧಗಳಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳದ ಇಲಾಖಾ ಅಧಿಕಾರಿಗಳ ತಲೆದಂಡ: ಎಡಿಜಿಪಿ ಪ್ರತಾಪ್ ರೆಡ್ಡಿ
ಇನ್ನೊಂದು ಪ್ರಕರಣದಲ್ಲಿ ತಮಿಳುನಾಡಿನ ಮಾರ್ಗಬಂಧು ಅವರು, ಇಂಟರ್ಸ್ಟೆನಿಯಲ್ ಲಂಗ್ ಡಿಸೀಸ್ (ಐಎಲ್‌ಡಿ) ಸಮಸ್ಯೆಯಿಂದ ಬಳಲುತ್ತಿದ್ದರು. ಉತ್ತಮ ವೈದ್ಯಕೀಯ ನಿರ್ವಹಣೆ ಹೊರತಾಗಿಯೂ ಅವರಲ್ಲಿ ಫೈಬೋಸಿಸ್ ಬೆಳೆಯುತ್ತಲೇ ಇತ್ತು. ಕನಿಷ್ಠ ದೈಹಿಕ ಚಟುವಟಿಕೆಗಳ ಜೊತೆಗೆ ಆಮ್ಲಜನಕವನ್ನು ಅವಲಂಬಿಸಿದ್ದರು. ಕಿಮ್ಸ್ ಹಾರ್ಟ್ ಮತ್ತು ಶ್ವಾಸಕೋಶ ಕಸಿ ಸಂಸ್ಥೆಯ ಥೈರಾಸಿಕ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ಸ್ ಮತ್ತು ಅಸಿಸ್ಟ್ ಡಿವೈಸಸ್‌ನ ಅಧ್ಯಕ್ಷ ಮತ್ತು ನಿರ್ದೇಶಕ ಡಾ.ಸಂದೀಪ್ ಅತ್ತಾವರ ಎರಡೂ ಪ್ರಕರಣಗಳ ಸವಾಲುಗಳು ಕುರಿತು ವಿವರಿಸಿದ್ದಾರೆ..
ಮೂರು ತಿಂಗಳಲ್ಲಿ ಸಹಜ ಸ್ಥಿತಿಗೆ: 'ಇಬ್ಬರು ರೋಗಿಗಳನ್ನು ಕಸಿಗಾಗಿ ಬೆಂಗಳೂರಿನ ಅನ್ವರ್ ಸಿಎಮ್‌ಐ ಆಸ್ಪತ್ರೆಯಲ್ಲಿ 2020ರ ಸೆಪ್ಟೆಂಬರ್ನಲ್ಲಿ ಪಟ್ಟಿ ಮಾಡಲಾಗಿದೆ. ಹೊಂದಾಣಿಕೆಯ ಅಂಗ ಲಭ್ಯವಾದ ಕೂಡಲೇ ಡಿಸೆಂಬರ್ನಲ್ಲಿ ಕಸಿ ನಡೆಸಲಾಯಿತು. ಕೋವಿಡ್ನಿಂದಾಗಿ ಈ ರೋಗಿಗಳು ಅಂಗಕ್ಕಾಗಿ ಸ್ವಲ್ಪ ಎಚ್ಚರಿಕೆಯಿಂದ ಕಾಯಬೇಕಾಯಿತು. ಎರಡೂ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿವೆ. ರೋಗಿಗಳನ್ನು ಈಗ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಮತ್ತು ಅವರು ನಿಧಾನವಾಗಿ ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ. ಇಬ್ಬರೂ ಸುಮಾರು ಮೂರು ತಿಂಗಳ ಅವಧಿಯಲ್ಲಿ ಸಾಮಾನ್ಯ ಜೀವನಕ್ಕೆ ಮರಳಬಹುದು' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ...ಗೋಹತ್ಯೆ ನಿಷೇಧ ಕಾಯ್ದೆ ಪ್ರಶ್ನಿಸಿ ಪಿಐಎಲ್ : ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಇಬ್ಬರ ಆರೋಗ್ಯ ಸ್ಥಿರ: ಆಸ್ಟರ್ ಆಸ್ಪತ್ರೆಗಳ ಇಂಟರ್ವೆನ್ಸನಲ್ ಪದ್ಮನಾಲಜಿ, ಸ್ತ್ರೀಫ್ ಮೆಡಿಸಿನ್ ಮತ್ತು ಶ್ವಾಸಕೋಶ ಕಸಿ ಸಲಹಾತಜ್ಞ ಡಾ.ಪವನ್ ಯಾದವ್ ಮಾತನಾಡಿ, 'ಕೋವಿಡ್-19 ಸಮಯದಲ್ಲಿ ಎರಡು ಶಸ್ತ್ರಚಿಕಿತ್ಸೆ ನಮ್ಮ ಆಸ್ಪತ್ರೆಯ ಕಸಿ ಯೋಜನೆಗೆ ಹೊಸ ಗರಿ ಮೂಡಿಸಿದೆ. ಸಾಂಕ್ರಾಮಿಕ ಸಮಯದಲ್ಲಿ ಕಸಿ ಶಸ್ತ್ರಚಿಕಿತ್ಸೆ ನಡೆಸುವುದು ಅನೇಕ ವೈದ್ಯಕೀಯ ಮತ್ತು ಲಾಜಿಸ್ಟಿಕ್ ಸವಾಲುಗಳನ್ನು ಹೊಂದಿದೆ. ಈ ಕಸಿ ಮಾಡುವಾಗ ಅಂಗಾಂಗ ಸ್ವೀಕರಿಸುವವರು, ಕುಟುಂಬ ಸದಸ್ಯರು ಮತ್ತು ನಮ್ಮ ತಂಡದ ಸುರಕ್ಷತೆಗಾಗಿ ನಾವು ಕಟ್ಟುನಿಟ್ಟಾದ ಪ್ರೋಟೋಕಾಲ್‌ಗಳು ಮತ್ತು ಆದೇಶಗಳಿಗೆ ಬದ್ಧರಾಗಿದ್ದೆವು. ಇಬ್ಬರೂ ರೋಗಿಗಳ ಆರೋಗ್ಯ ಸ್ಥಿರವಾಗಿದೆ' ಎಂದು ತಿಳಿಸಿದರು.
ವೈದ್ಯರಿಗೆ ಧನ್ಯವಾದ ಸಲ್ಲಿಸಿದ ಸಹೋದರ: ಪವನ್ ಕುಮಾರ್ ಸಿಂಗ್ ಸಹೋದರ ಆಶಿಶ್ ಸಿಂಗ್ ಮಾತನಾಡಿ, 'ನನ್ನ ಸಹೋದರನಿಗೆ 2017ರಲ್ಲಿ ಶ್ವಾಸಕೋಶದ ಅತಿಸೂಕ್ಷ್ಮತೆ ಗುರುತಿಸಲಾಯಿತು. ಸಮಯ ಹೆಚ್ಚಾದಂತೆ ಅವರ ಸ್ಥಿತಿ ಮತ್ತಷ್ಟು ಕ್ಷೀಣಿಸಲಾರಂಭಿಸಿತು. ಪಲ್ಮನರಿ ಹೈಪರ್‌ಟೆನ್ಶನ್ ಬೆಳೆದು, ಇಡೀ ದಿನ ಅಮ್ಲಜನಕ ಅವಲಂಭಿಸಬೇಕಾಗಿ ಬಂದಾಗ ಅವರ ಜೀವನ ಯು-ಟರ್ನ್ ತೆಗೆದುಕೊಂಡಿತು. ಹಲವಾರು ವರ್ಷಗಳಿಂದ ಇದೇ ಸ್ಥಿತಿಯಲ್ಲಿ ಬಳಲಿದ ಬಳಿಕ, 2019ರಲ್ಲಿ ನಮ್ಮ ಸಹೋದರನ ಸ್ಥಿತಿಗೆ ಪರಿಹಾರ ಒದಗಿಸಬಲ್ಲ ಸಂಯೋಜಿತ ಹೃದಯ ಮತ್ತು ಶ್ವಾಸಕೋಶದ ಕಸಿಯ ಬಗ್ಗೆ ತಿಳಿದುಕೊಂಡೆವು. ಆಗ ನಮಗೆ ಆಸ್ಟರ್ ಆಸ್ಪತ್ರೆಯನ್ನು ಸೂಚಿಸಲಾಯಿತು. ನನ್ನ ಸಹೋದರನ ಜೀವ ಉಳಿಸಿದ್ದಕ್ಕಾಗಿ ಮತ್ತು ನೂತನ ವರ್ಷವನ್ನು ಹೊಸದಾಗಿ ಪ್ರಾರಂಭಿಸಲು ಹೊಸ ಭರವಸೆ ಒದಗಿಸಿದ್ದಕ್ಕಾಗಿ ವೈದ್ಯರಿಗೆ ಕೃತಜ್ಞರಾಗಿರುತ್ತೇವೆ' ಎಂದು ಸಂತಸ ಹಂಚಿಕೊಂಡರು.
12 ಸಾವಿರ ಹೃದಯ ಶಸ್ತ್ರಚಿಕಿತ್ಸೆ: ಡಾ.ಸಂದೀಪ್ ಅತ್ತಾವರ್ ದೇಶದ ಅತ್ಯಂತ ಅನುಭವಿ ಹೃದಯ ಮತ್ತು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರು. ಕಸಿ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ 24 ವರ್ಷಗಳ ಅನುಭವ ಹೊಂದಿರುವ ಅವರು, ಈವರೆಗೆ 12 ಸಾವಿರಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. 250ಕ್ಕೂ ಹೆಚ್ಚು ಕಸಿ ಶಸ್ತ್ರಚಿಕಿತ್ಸೆಗಳನ್ನು (ಶ್ವಾಸಕೋಶ, ಹೃದಯ ಮತ್ತು ಕೃತಕ ಹೃದಯ ಕಸಿ) ಮಾಡಿದ್ದಾರೆ.