ETV Bharat / city

ಹೆಚ್​ಡಿಡಿ ಜೊತೆ ಸಿ.ಎಂ.ಇಬ್ರಾಹಿಂ ಸಮಾಲೋಚನೆ: ಜೆಡಿಎಸ್ ಸೇರಲು ರೆಡಿಯಾಗಿದ್ದಾರೆ ಮಾಂತ್ರಿಕ ಮಾತುಗಾರ

ಕಳೆದ ತಿಂಗಳು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ನಡೆಸಿದ್ದ ಇಬ್ರಾಹಿಂ, ಇಂದು ಎರಡನೇ ಬಾರಿ ಪದ್ಮನಾಭ ನಗರದಲ್ಲಿರುವ ಗೌಡರ ನಿವಾಸಕ್ಕೆ ಭೇಟಿ ನೀಡಿ, ಕೆಲ ಕಾಲ ಸಮಾಲೋಚನೆ ನಡೆಸಿದ್ದಾರೆ.

ಹೆಚ್​ಡಿಡಿ ಜೊತೆ ಸಿ.ಎಂ.ಇಬ್ರಾಹಿಂ ಸಮಾಲೋಚನೆ
ಹೆಚ್​ಡಿಡಿ ಜೊತೆ ಸಿ.ಎಂ.ಇಬ್ರಾಹಿಂ ಸಮಾಲೋಚನೆ
author img

By

Published : Jan 7, 2021, 11:35 AM IST

ಬೆಂಗಳೂರು : ಮಾಜಿ ಕೇಂದ್ರ ಸಚಿವ, ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಅವರು ಮತ್ತೆ ಜೆಡಿಎಸ್​ಗೆ ವಾಪಸ್ ಆಗಲು ಸಿದ್ಧರಾಗಿದ್ದಾರೆ ಎನ್ನಲಾಗಿದ್ದು, ಎರಡನೇ ಬಾರಿ ಜೆಡಿಎಸ್​ ವರಿಷ್ಠ ಹೆಚ್​.ಡಿ. ದೇವೇಗೌಡರ ಜೊತೆ ಸಮಾಲೋಚನೆ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷ ತಮ್ಮನ್ನು ನಿರ್ಲಕ್ಷಿಸಿದೆ ಎಂಬ ಕಾರಣಕ್ಕಾಗಿ ಅಸಮಾಧಾನಗೊಂಡಿರುವ ಸಿ.ಎಂ.ಇಬ್ರಾಹಿಂ, ಈಗಾಗಲೇ ಪಕ್ಷ ಬಿಡುವ ಸುಳಿವು ನೀಡಿದ್ದಾರೆ. ಆದರೆ ಅದಕ್ಕೂ ಮುನ್ನ ರಾಜ್ಯಾದ್ಯಂತ ಇರುವ ತಮ್ಮ ಬೆಂಬಲಿಗರು, ಆಪ್ತರ ಜತೆ ಚರ್ಚಿಸಲು ಇಬ್ರಾಹಿಂ ನಿರ್ಧರಿಸಿದ್ದರು. ಈ ಹಿನ್ನೆಲೆ ಮಾತುಕತೆ ಆರಂಭಿಸಿದ್ದಾರೆ.

ಕಳೆದ ತಿಂಗಳು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ನಡೆಸಿದ್ದ ಇಬ್ರಾಹಿಂ, ಇಂದು ಎರಡನೇ ಬಾರಿ ಪದ್ಮನಾಭ ನಗರದಲ್ಲಿರುವ ಗೌಡರ ನಿವಾಸಕ್ಕೆ ಭೇಟಿ ನೀಡಿ, ಸಮಾಲೋಚನೆ ನಡೆಸಿದ್ದಾರೆ. ಈ ಹಿಂದೆ ಕೂಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಬ್ರಾಹಿಂ ನಿವಾಸಕ್ಕೆ ತೆರಳಿ ಪಕ್ಷಕ್ಕೆ ಆಹ್ವಾನ ನೀಡಿದ್ದರು.

ರಾಜ್ಯ ರಾಜಕಾರಣದಲ್ಲಿ ಮಾಂತ್ರಿಕ ಮಾತುಗಾರ ಎಂದೇ ಹೆಸರಾಗಿರುವ ಸಿ.ಎಂ.ಇಬ್ರಾಹಿಂ ಜೆಡಿಎಸ್​ಗೆ ಸೇರ್ಪಡೆಯಾಗುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ. ನಾಯಕರ ಮಾತುಕತೆ ಯಶಸ್ವಿಯಾದರೆ ಜನವರಿ 15 ನಂತರ ವಿದ್ಯುಕ್ತವಾಗಿ ಜೆಡಿಎಸ್​ಗೆ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.