ETV Bharat / city

ಸಿಎಂ ಬದಲಾವಣೆ ಮಾಡಿರುವುದು ರಾಜ್ಯದ ಪಾಲಿಗೆ ಕರಾಳ ದಿನ : ಷಡಕ್ಷರಿ ರುದ್ರಮುನಿ ಸ್ವಾಮೀಜಿ

ಬೆಂಗಳೂರಿಗೆ ಬಿಜೆಪಿ ಹೈಕಮಾಂಡ್ ಬರುತ್ತಿದೆ. ಉತ್ತರ ಕರ್ನಾಟಕದ ಬೊಮ್ಮಯಿ, ಪ್ರಲ್ಹಾದ್ ಜೋಶಿ, ಶೆಟ್ಟರ್, ನಿರಾಣಿ ಎಲ್ಲರೂ ಆತ್ಮೀಯರು. ಇವರನ್ನ ಜೊತೆಗೆ ಕರೆದುಕೊಂಡು ಹೋಗುವ ಶಕ್ತಿ ಜಗದೀಶ್ ಶೆಟ್ಟರ್‌ಗೆ ಇದೆ. ಮುಖ್ಯಮಂತ್ರಿ ಸ್ಥಾನ ಅವರಿಗೆ ನೀಡಲಿ..

cm-change-is-darkt-day-for-the-state
ಷಡಕ್ಷರಿ ರುದ್ರಮುನಿ ಸ್ವಾಮೀಜಿ
author img

By

Published : Jul 27, 2021, 6:39 PM IST

ಬೆಂಗಳೂರು : ಯಡಿಯೂರಪ್ಪ ಹೋರಾಟಗಾರರು. ರಾಜ್ಯದಲ್ಲಿ ಪಕ್ಷ ಕಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದಿದ್ದಾರೆ. ಅಂತಹವರು ಇಂದು ಪದತ್ಯಾಗ ಮಾಡಿರುವುದು ರಾಜ್ಯದ ಪಾಲಿಗೆ ಕರಾಳ ದಿನಗಳು ಎಂದು ತಿಪಟೂರು ಮಠದ ಷಡಕ್ಷರಿ ರುದ್ರಮುನಿ ಸ್ವಾಮೀಜಿ ಹೇಳಿದರು.

ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಅವರು, ಪಕ್ಷಕ್ಕೆ ದುಡಿದ ವ್ಯಕ್ತಿಯನ್ನು ಸರಿಯಾಗಿ ನಡೆಸಿಕೊಳ್ಳಬೇಕಿತ್ತು. ರಾಜ್ಯದಲ್ಲಿ ಬಿಜೆಪಿ ಅವನತಿ ‌ಪ್ರಾರಂಭವಾಗಿದೆ. ಯಡಿಯೂರಪ್ಪ ಇಲ್ಲದೆ ಬಿಜೆಪಿಗೆ ಶಕ್ತಿ ಇಲ್ಲ. ಬಹಳಷ್ಟು ಜನರು ಪಕ್ಷ ತೊರೆಯೋಕೆ ಮುಂದಾಗಿದ್ದಾರೆ. ಕರೆ ಮಾಡಿ ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಸಿಎಂ ಬದಲಾವಣೆ ಮಾಡಿರುವು ರಾಜ್ಯದ ಪಾಲಿಗೆ ಕರಾಳ ದಿನ

ಬೊಮ್ಮಾಯಿ ಅಥವಾ ಶೆಟ್ಟರ್​ಗೆ ಸಿಎಂ ಸ್ಥಾನ ನೀಡಿ

ಯಡಿಯೂರಪ್ಪ ಬಳಿಕ ಲಿಂಗಾಯತ ಸಮುದಾಯದ ನಾಯಕರಿಗೆ ಸಿಎಂ ಸ್ಥಾನ ನೀಡಿ. ಬೊಮ್ಮಾಯಿ, ಶೆಟ್ಟರ್ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದರೆ ಒಳಿತು ಎಂದು ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಕೋವಿಡ್​ ಸಂದರ್ಭದಲ್ಲಿ ಸಿಎಂ ಬದಲಾವಣೆ ಬೇಕಿತ್ತಾ?

ಕಾಲ್ನಡಿಯಿಂದ ಪಕ್ಷ ಸಂಘಟನೆ ಮಾಡಿ, ಸೈಕಲ್ ಮೂಲಕ ಹಳ್ಳಿ ಹಳ್ಳಿಗೆ ತಿರುಗಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಕಾರಣ. ಪಕ್ಷವನ್ನ ಕಟ್ಟಿ ಬೆಳೆಸಿದ ವ್ಯಕ್ತಿಯನ್ನ ಗೌರವದಿಂದ ನಡೆಸಿಕೊಳ್ಳಬೇಕು. ಎರಡು ವರ್ಷ ಯಡಿಯೂರಪ್ಪ ಸಿಎಂ ಆಗಿ ಮುಂದುವರೆದಿದ್ದರೆ ಸಮಸ್ಯೆ ಆಗ್ತಾ ಇರಲಿಲ್ಲ. ಇನ್ನೂ 15 ದಿನ ಕಳೆದರೆ ಕೊರೊನಾ ಮೂರನೆಯ ಅಲೆ ಬರುತ್ತದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬದಲಾವಣೆ ಬೇಕಿತ್ತಾ ಎಂದು ಪ್ರಶ್ನಿಸಿದರು.

ಶೆಟ್ಟರ್​​ ಪರ ಸ್ವಾಮೀಜಿ ಬ್ಯಾಟಿಂಗ್​​

ಬೆಂಗಳೂರಿಗೆ ಬಿಜೆಪಿ ಹೈಕಮಾಂಡ್ ಬರುತ್ತಿದೆ. ಉತ್ತರ ಕರ್ನಾಟಕದ ಬೊಮ್ಮಯಿ, ಪ್ರಲ್ಹಾದ್ ಜೋಶಿ, ಶೆಟ್ಟರ್, ನಿರಾಣಿ ಎಲ್ಲರೂ ಆತ್ಮೀಯರು. ಇವರನ್ನ ಜೊತೆಗೆ ಕರೆದುಕೊಂಡು ಹೋಗುವ ಶಕ್ತಿ ಜಗದೀಶ್ ಶೆಟ್ಟರ್‌ಗೆ ಇದೆ. ಮುಖ್ಯಮಂತ್ರಿ ಸ್ಥಾನ ಅವರಿಗೆ ನೀಡಲಿ ಎಂದು ಜಗದೀಶ್ ಶೆಟ್ಟರ್ ಪರ ರುದ್ರಮುನಿ ಸ್ವಾಮೀಜಿ ಬ್ಯಾಟಿಂಗ್ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.