ಬೆಂಗಳೂರು: ರಾಜ್ಯದಲ್ಲಿ ಅಗ್ಗದ ದರದಲ್ಲಿ ಡಿಟಿಹೆಚ್, ಫೈಬರ್ ನೆಟ್, ಓಟಿಟಿ ಸೇವೆಗಳನ್ನು ಒದಗಿಸಲು ಮೆಟ್ರೋ ಕಾಸ್ಟ್ ನೆಟ್ವರ್ಕ್ ಇಂಡಿಯಾ ಸಂಸ್ಥೆಯ ಹೊಸ ಕಚೇರಿ ಉದ್ಘಾಟನೆ ಮಾಧವನಗರದ ಕೆಸಿಎನ್ ಭವನದಲ್ಲಿ ನಡೆಯಿತು.
ನೂತನ ಕಚೇರಿ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಮೆಟ್ರೋ ಕಾಸ್ಟ್ ಮೂರು ದಶಕಗಳಿಗಿಂತ ಹೆಚ್ಚು ಕೇಬಲ್ ಸೇವೆ ಒದಗಿಸುತ್ತಿರುವ ಸಂಸ್ಥೆ. ಉತ್ತರ ಕರ್ನಾಟಕ, ಮಹಾರಾಷ್ಟ್ರ, ಗೋವಾದಲ್ಲಿ ಕೇಬಲ್ ಸೇವೆ ಒದಗಿಸುತ್ತಿರುವ ಮೆಟ್ರೋ ಕಾಸ್ಟ್ಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಗ್ರಾಮೀಣ ಭಾಗದಲ್ಲಿ ಸೇವೆ:
ಮೆಟ್ರೋ ಕಾಸ್ಟ್ ನೆಟ್ವರ್ಕ್ ಇಂಡಿಯಾ ಲಿಮಿಟೆಡ್ ಕರ್ನಾಟಕ ನೂತನ ಕಚೇರಿಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ರಿಜ್ವಾನ್ ಅರ್ಷದ್ ಮಾಧ್ಯಮಗಳ ಜತೆ ಮಾತನಾಡಿ, ರಾಷ್ಟ್ರಮಟ್ಟದಲ್ಲಿ ನೆಟ್ವರ್ಕ್ ಪ್ರಭುತ್ವ ಸಾಧಿಸಿದೆ. ಗ್ರಾಮೀಣ ಮಟ್ಟದಲ್ಲಿ ಸೇವೆ ನೀಡಲು ಸಂಸ್ಥೆ ಮುಂದಾಗಿದೆ. ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ನೀಡಲು ಮುಂದೆ ಬಂದಿದ್ದಾರೆ. ಸಾಮಾನ್ಯ ಜನರಿಗೆ ರಿಯಾಯಿತಿ ದರದಲ್ಲಿ ದೊರೆಯುವಂತೆ ಮಾಡುತ್ತಿದ್ದಾರೆ ಎಂದು ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.
30 ರಿಂದ 40 ಪ್ರತಿಶತ ಕಡಿಮೆ ದರ:
ಮೆಟ್ರೋ ಕಾಸ್ಟ್ ಸಂಸ್ಥೆಯ ಮಾಲೀಕರಾದ ನಾಗೇಶ್ ಚಾಬ್ರಿಯ ಹಾಗು ನಿಶಾ ಚಾಬ್ರಿಯ ಮಾತನಾಡಿ, ರಾಜ್ಯ ಕಾರ್ಪೊರೇಟ್ ಕಚೇರಿಯನ್ನು ರಾಜಧಾನಿಯಲ್ಲಿ ಹೊಸದಾಗಿ ಮಾಡಿದ್ದೇವೆ. ಫೈಬರ್ ಟು ಹೋಮ್ ಸೇವೆಗಳನ್ನು ನೀಡುತ್ತಿದ್ದೇವೆ. ನಮ್ಮಲ್ಲಿ 30 ರಿಂದ 40 ಪ್ರತಿಶತ ದರ ಕಡಿಮೆ ಇದೆ. ಕರ್ನಾಟಕದ ಎಲ್ಲ ಚಾನೆಲ್ನವರು ಸಾಕಷ್ಟು ಸಹಕಾರ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
5 ಲಕ್ಷ ಗ್ರಾಹಕರು:
ಬೆಂಗಳೂರಿನಿಂದಲೇ ರಾಜ್ಯದ ಎಲ್ಲ ಕಡೆಗೂ ಸೇವೆ ಒದಗಿಸಲು ಮೆಟ್ರೋ ಕಾಸ್ಟ್ ಸಂಸ್ಥೆ ಸಜ್ಜಾಗಿದ್ದು, ಉತ್ಕೃಷ್ಟ ಸರ್ವರ್ ರೂಂ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲಿ 5 ಲಕ್ಷ ಗ್ರಾಹಕರನ್ನು ಹೊಂದಿದೆ.
ಇದನ್ನೂ ಓದಿ: 'ಈಟಿವಿ ಭಾರತ' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಎಂ ಬಸವರಾಜ ಬೊಮ್ಮಾಯಿ