ETV Bharat / city

ಒಮಿಕ್ರೋನ್​​ ಸೋಂಕಿತ ವ್ಯಕ್ತಿಯ ಸಂಪರ್ಕಿತರ ಪತ್ತೆಗಾಗಿ ಸೂಚನೆ: ಸಿಎಂ - ರಾಜ್ಯದಲ್ಲಿ ಒಮಿಕ್ರೋನ್ ಆತಂಕ

ಕೋವಿಡ್ ರೂಪಾಂತರ ಒಮಿಕ್ರೋನ್ ವೈರಸ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಅನೇಕ ಕ್ರಮಗಳನ್ನು ತರುತ್ತಿದ್ದು, ಇಂದು ಇದೇ ವಿಚಾರದ ಮೇಲೆ ಚರ್ಚಿಸಲು ಸಭೆ ನಡೆಸುತ್ತಿದೆ.

cm-basavaraja-bommai-on-omicron-virus
ಒಮಿಕ್ರೋನ್​​ ಸೋಂಕಿತ ವ್ಯಕ್ತಿಯ ಸಂಪರ್ಕಿತರ ಪತ್ತೆಗಾಗಿ ಸೂಚನೆ: ಸಿಎಂ
author img

By

Published : Dec 3, 2021, 1:38 PM IST

ಬೆಂಗಳೂರು: ಸಾಕಷ್ಟು ಆತಂಕ ಮೂಡಿಸಿರುವ ಒಮಿಕ್ರೋನ್ ತಡೆಗೆ ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಬೆಂಗಳೂರಿನಲ್ಲಿ ಪತ್ತೆಯಾದ ಒಮಿಕ್ರೋನ್​​ ಸೋಂಕಿತ ವ್ಯಕ್ತಿಗಳ ಸಂಪರ್ಕಿತರ ಪತ್ತೆಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸ್ಪಷ್ಟನೆ ನೀಡಿದರು.

ದೆಹಲಿಯಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ, ಇಂದು ಒಮಿಕ್ರೋನ್​​ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ಇದೆ. ತಾಂತ್ರಿಕ ಸಲಹಾ ಸಮಿತಿ ತಜ್ಞರು ಏನು ಹೇಳ್ತಾರೆ ಎಂಬುದನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಈ ಸಭೆಯಲ್ಲಿ ಒಮಿಕ್ರೋನ್ ವೈರಸ್ ನಿಯಂತ್ರಣಕ್ಕಾಗಿ ಬೇರೆ ಬೇರೆ ದೇಶದಲ್ಲಿ ಏನು ಪ್ರೋಟೋಕಾಲ್ ಇದೆ?, ಯಾವ ರೀತಿ ನಿಭಾಯಿಸಬೇಕು?, ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ಒಮಿಕ್ರೋನ್‌ ತಡೆಗೆ ಡೆಲ್ಟಾ ಮಾದರಿಯಲ್ಲೇ ಗಡಿಗಳಲ್ಲಿ ಕಟ್ಟೆಚ್ಚರವಹಿಸಿ - ವಿಶ್ವ ಆರೋಗ್ಯ ಸಂಸ್ಥೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.