ETV Bharat / city

ಭಗವಾನ್ ಮಹಾವೀರರ ಆದರ್ಶಗಳು ಪ್ರೇರಣಾದಾಯಕ: ಸಿಎಂ ಬೊಮ್ಮಾಯಿ - CM Basavaraj Bommai Inaugurate Mahavir Janma Kalyanak Mahotsav

ತನ್ನ ರಾಜಗದ್ದುಗೆ, ಐಶ್ವರ್ಯ, ವಸ್ತ್ರಾದಿಗಳನ್ನು ತ್ಯಾಗ ಮಾಡಿದ ಮಹಾ ಪುರುಷ ಭಗವಾನ್ ಮಹಾವೀರ. ಇಂತಹ ಶ್ರೇಷ್ಠ ವ್ಯಕ್ತಿಗಳಿಂದಾಗುವ ಪರಿವರ್ತನೆ ಜಗತ್ತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

CM Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Apr 15, 2022, 7:13 AM IST

ಬೆಂಗಳೂರು: ಚಿಕ್ಕ ವಯಸ್ಸಿನಲ್ಲಿ ಸರ್ವಸಂಗ ಪರಿತ್ಯಾಗಿಯಾಗಿದ್ದ ಭಗವಾನ್ ಮಹಾವೀರರ ಆದರ್ಶಗಳು ಎಲ್ಲರಿಗೂ ಪ್ರೇರಣಾದಾಯಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶ್ರಮಣ ಭಗವಾನ್ ಮಹಾವೀರರ 2621ನೇ ಜನ್ಮಕಲ್ಯಾಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜೈನ ಸಮುದಾಯದವರು ಉನ್ನತ ಮಟ್ಟದ ತತ್ವಗಳನ್ನು ಪರಿಪಾಲನೆ ಮಾಡುತ್ತಾರೆ. 'ಅಹಿಂಸೋ ಪರಮೋ ಧರ್ಮ' ಎಂಬ ನೀತಿಯನ್ನು ಜೈನರು ನೂರಕ್ಕೆ ನೂರರಷ್ಟು ಪಾಲಿಸುತ್ತಾರೆ. ಅಹಿಂಸೆಯ ತತ್ವದಲ್ಲಿ ಕರುಣೆ, ಮಮತೆ ಹಾಗೂ ಆದರ್ಶದ ಬದುಕಿದೆ ಎಂದರು.

24ನೇ ತೀರ್ಥಂಕರ ಶ್ರೀ ಮಹಾವೀರರ ಅಹಿಂಸೆಯ ಮಾರ್ಗದಲ್ಲಿ ನಡೆಯುವುದು ಸುಲಭದ ಮಾತಲ್ಲ. ಸಣ್ಣ ಇರುವೆಗೂ ಹಿಂಸೆಯಾಗಬಾರದೆಂಬ ಕರುಣೆಯ ಧರ್ಮ ಭಗವಂತನಿಗೂ ಪ್ರಿಯವಾದುದು. ಜೈನ ಸಮುದಾಯದವರು ತ್ಯಾಗದಲ್ಲಿ ಸುಖವನ್ನು ಕಾಣುತ್ತಾರೆ. ಮಹಾವೀರರು ತಮ್ಮ ವೈಭೋಗದ ಜೀವನವನ್ನು ತ್ಯಜಿಸಿ ಪರಿವರ್ತನೆಯ ಹಾದಿಯನ್ನು ಹಿಡಿದವರು. ಅಲ್ಲದೇ ವಿಶ್ವಕ್ಕೆ ಈ ಪರಿವರ್ತನೆಯ ಹಾದಿಯನ್ನು ಬೋಧಿಸಿದರು. ತನ್ನ ರಾಜಗದ್ದುಗೆ, ಐಶ್ವರ್ಯ, ವಸ್ತ್ರಾದಿಗಳನ್ನು ತ್ಯಾಗ ಮಾಡಿದ ಮಹಾ ಪುರುಷರು. ಇಂತಹ ಶ್ರೇಷ್ಠ ವ್ಯಕ್ತಿಗಳಿಂದಾಗುವ ಪರಿವರ್ತನೆ ಜಗತ್ತಿಗೆ ಮಹತ್ವದ ಕೊಡುಗೆಯನ್ನು ನೀಡುತ್ತದೆ ಎಂದು ಸಿಎಂ ತಿಳಿಸಿದರು.

ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಜಗತ್ತಿನಲ್ಲಿ ಇಂದು ದೇಶ-ದೇಶಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ, ಧರ್ಮದ ಹೆಸರಿನಲ್ಲಿ ಹಿಂಸೆ ಸೃಷ್ಟಿಯಾಗುತ್ತಿರುವ ಸಂದರ್ಭದಲ್ಲಿ ಜೈನ ಧರ್ಮದವರು ಸಮಚಿತ್ತವನ್ನು ಕಾಯ್ದುಕೊಂಡು ಶಾಂತಿ, ಆದರ್ಶಗಳನ್ನು ಹಾಗೂ ಅಹಿಂಸೆಯನ್ನು ಪಾಲಿಸುತ್ತಿದ್ದಾರೆ. ಜಗತ್ತನ್ನು ಉದ್ಧಾರ ಮಾಡುವ ಸಲುವಾಗಿ ಮತ್ತೊಮ್ಮೆ ಮಹಾವೀರರು ಹುಟ್ಟಿಬರಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: ಹಾವೇರಿಯಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.