ETV Bharat / city

ಬಿಬಿಎಂಪಿ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಕುರಿತು ಸಿಎಂ ನೇತೃತ್ವದಲ್ಲಿ ಸಭೆ - karnataka political news

ಬೆಂಗಳೂರು ಮಹಾನಗರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಕುರಿತು ಮುಖ್ಯಮಂತ್ರಿ ಬಿಎಸ್​ವೈ ಅಧ್ಯಕ್ಷತೆಯಲ್ಲಿ ಇಂದು ಸಭೆ ಜರುಗಿತು.

ಸಿಎಂ ಬಿಎಸ್​ವೈ ನೇತೃತ್ವದಲ್ಲಿ ನಡೆದ ಸಭೆ, CM B S Yedyurappa meeting
ಸಿಎಂ ಬಿಎಸ್​ವೈ ನೇತೃತ್ವದಲ್ಲಿ ನಡೆದ ಸಭೆ
author img

By

Published : Dec 19, 2019, 3:55 PM IST

ಬೆಂಗಳೂರು: ಬೆಂಗಳೂರಿನ ಕೆರೆಗಳಿಗೆ ಒಳಚರಂಡಿ ನೀರು ಸೇರಿದಂತೆ ಕ್ರಮ ಕೈಗೊಳ್ಳಬೇಕು. ಬೆಳ್ಳಂದೂರು ಮತ್ತು ವರ್ತೂರು ಕೆರೆಯಲ್ಲಿ ಇನ್ನೂ‌ ನೊರೆ ಬರುತ್ತಿದ್ದು, ಕೂಡಲೇ ಕ್ರಮ‌ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು ಮಹಾನಗರ ವ್ಯಾಪ್ತಿಯ ಕೆರೆಗಳ ಸಂರಕ್ಷಣೆ ಕುರಿತು ಮುಖ್ಯಮಂತ್ರಿ ಬಿಎಸ್​ವೈ ಅಧ್ಯಕ್ಷತೆಯಲ್ಲಿ ಇಂದು ಸಭೆ ಜರುಗಿತು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಅರಣ್ಯ ಇಲಾಖೆ ಸಚಿವ ಸಿ.ಸಿ. ಪಾಟೀಲ್, ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಬಿಬಿಎಂಪಿ ಆಯುಕ್ತ ಬಿ. ಹೆಚ್.ಅನಿಲ್ ಕುಮಾರ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಿಎಂ ಬಿಎಸ್​ವೈ ನೇತೃತ್ವದಲ್ಲಿ ನಡೆದ ಸಭೆ

ನಗರದ ಮಾರಗೊಂಡನಹಳ್ಳಿ‌ ಕೆರೆ, ಶಿಕಾರಿಪಾಳ್ಯ ಕೆರೆ, ಯರಂಡಹಳ್ಳಿ ಕೆರೆ, ಕಮ್ಮಸಂದ್ರ ಕೆರೆ, ದೊಡ್ಡತೂಗೂರು ಕೆರೆ, ಸೇರಿದಂತೆ ಇತರೆ ಎರಡು ಕೆರೆಗಳನ್ನು ಖಾಸಗಿ ಅವರು ಅಭಿವೃದ್ಧಿಪಡಿಸುತ್ತಿದ್ದು, ಬೆಂಗಳೂರಿನ ಇನ್ನೂ ಕೆಲ‌ ಕೆರೆಗಳನ್ನು ಖಾಸಗಿ ಅವರ ಜೊತೆಗೂಡಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು.

ಹೊಸಕೋಟೆ ನಗರಾಭಿವೃದ್ಧಿ ಪ್ರಾಧಿಕಾರ 7 ಕೆರೆಗಳನ್ನು ಅಭಿವೃದ್ಧಿ ಮಾಡುತ್ತೇವೆ ಅಂತ ಮುಂದೆ ಬಂದಿದ್ದಾರೆ. ಇದಕ್ಕೆ ಈಗಾಗಲೇ ಒಪ್ಪಿಗೆ‌ ನೀಡಲಾಗಿದೆ. ಸಂಜೀವಿನಿ ಯೋಜನೆಯಲ್ಲಿ ಈಗಾಗಲೆ 651 ಕೆರೆಗಳನ್ನು ರಾಜ್ಯಾದ್ಯಂತ ಅಭಿವೃದ್ಧಿ ಮಾಡಲಾಗಿದೆ. ಬಾಕಿ‌ ಇರುವ ಕೆಲಸಗಳನ್ನು ಕೂಡಲೇ ಮುಕ್ತಾಯಗೊಳಿಸಲಾಗುವುದು ಎಂದು ಅಧಿಕಾರಿಗಳು ಸಿಎಂಗೆ ಮಾಹಿತಿ ನೀಡಿದರು.

ಬೆಂಗಳೂರಿನ ಎಲ್ಲಾ ಕೆರೆಗಳಿಗೆ ಡ್ರೈನೇಜ್ ವಾಟರ್ ಹೋಗುವುದನ್ನು ಕೂಡಲೇ ನಿಲ್ಲಿಸಬೇಕು. ಎಲ್ಲಾ‌ ಕೆರೆಗಳಿಗೆ ಟ್ರೀಟ್​ಮೆಂಟ್ ಪ್ಲಾಂಟ್ ಹಾಕಿ ನೀರನ್ನು ಸಂಸ್ಕರಿಸಿ ಪಾರ್ಕ್​ಗಳಿಗೆ ಮತ್ತು ಇತರೆ ಕಾರ್ಯಕ್ಕೆ ಉಪಯೋಗಿಸಬೇಕು. ಟ್ರೀಟ್​ಮೆಂಟ್ ಮಾಡಿದ ನೀರನ್ನು ಪಕ್ಕದ ತಾಲೂಕು‌ ಮತ್ತು‌ ಜಿಲ್ಲೆಗಳ ಕೆರೆಗಳನ್ನು ತುಂಬಿಸಲು ಬಳಸಬೇಕು. ಉತ್ತಮ‌ ಗುಣಮಟ್ಟದಲ್ಲಿ ನೀರನ್ನು ಸಂಸ್ಕರಿಸಬೇಕು ಎಂದು ಸಿಎಂ ಸೂಚನೆ ನೀಡಿದರು.

ಈಗಾಗಲೇ ಖಾಸಗಿಯವರು ಅಭಿವೃದ್ಧಿ ಮಾಡಿದ ಕೆರೆಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಮಾಡಿದ ಕಂಪನಿಗಳಿಗೆ ಸಿಎಂ ಯಡಿಯೂರಪ್ಪ ಸನ್ಮಾನಿಸಿದರು.

Intro:KN_BNG_06_CM_LAKE_MEETING_VIDEO_9021933

Body:KN_BNG_06_CM_LAKE_MEETING_VIDEO_9021933

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.