ETV Bharat / city

ಇತಿಹಾಸ ಬರೆದ ಚುಟು ಚುಟು ಹಾಡು... ಶರಣ್ ಬಗ್ಗೆ ರೋರಿಂಗ್ ಸ್ಟಾರ್ ಹೇಳಿದ್ದೇನು? - ಬೆಂಗಳೂರು ಸುದ್ದಿ

ಪ್ರಸಿದ್ಧ ಆಡಿಯೋ ಕಂಪನಿ ಆನಂದ್ ಆಡಿಯೋ ಯೂ ಟ್ಯೂಬ್​ನಲ್ಲಿ ಶರಣ್ ಹಾಗು ಆಶಿಕಾ ರಂಗನಾಥ್ ಅಭಿನಯದ ರ್ಯಾಂಬೋ 2 ಚಿತ್ರದ ಚುಟು ಚುಟು ಹಾಡು 100 ಮಿಲಿಯನ್ ಜನರು ನೋಡಿರುವ ದಕ್ಷಿಣ ಭಾರತದ ಮೊಟ್ಟ ಮೊದಲ ಕನ್ನಡ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Chutu Chutu song from Rambo 2 movie has 100 million views
ಇತಿಹಾಸ ಬರೆದ ಶರಣ್ ಚುಟು ಚುಟು ಹಾಡು...ಶರಣ್ ಬಗ್ಗೆ ರೋರಿಂಗ್ ಸ್ಟಾರ್ ಹೇಳಿದ್ದೇನು?
author img

By

Published : Feb 13, 2020, 3:19 PM IST

ಬೆಂಗಳೂರು: ಪ್ರಸಿದ್ಧ ಆಡಿಯೋ ಕಂಪನಿ ಆನಂದ್ ಆಡಿಯೋ ಯೂ ಟ್ಯೂಬ್​ನಲ್ಲಿ ಶರಣ್ ಹಾಗು ಆಶಿಕಾ ರಂಗನಾಥ್ ಅಭಿನಯದ ರ್ಯಾಂಬೋ 2 ಚಿತ್ರದ ಚುಟು ಚುಟು ಸಾಂಗ್​ 100 ಮಿಲಿಯನ್ ಜನರು ನೋಡಿರುವ ದಕ್ಷಿಣ ಭಾರತದ ಮೊಟ್ಟ ಮೊದಲ ಕನ್ನಡ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇತಿಹಾಸ ಬರೆದ ಶರಣ್ ಚುಟು ಚುಟು ಹಾಡು...ಶರಣ್ ಬಗ್ಗೆ ರೋರಿಂಗ್ ಸ್ಟಾರ್ ಹೇಳಿದ್ದೇನು?

ಹೀಗಾಗಿ, ಈ ಸಂಭ್ರಮವನ್ನ ಆನಂದ್ ಆಡಿಯೋ ಮಾಲೀಕರಾದ ಶ್ಯಾಮ್ ಹಾಗು ಆನಂದ್ ಮತ್ತು ಇಡೀ ರಾಂಬೋ 2 ಚಿತ್ರತಂಡದ ಜೊತೆ ಸೆಲೆಬ್ರೆಟ್ ಮಾಡಿತ್ತು. ಈ ಅಪರೂಪದ ಕಾರ್ಯಕ್ರಮದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಭಾಗವಹಿಸಿದ್ರು. ಬಳಿಕ ಮಾತನಾಡಿದ ಅವರು, ನಾನು ಶರಣ್ ಸಾರ್ ಅವರ ಅಭಿಮಾನಿ. ಯಾಕೆಂದರೆ ಅವರ ಆ್ಯಕ್ಟಿಂಗ್, ಡಬ್ಬಿಂಗ್ ಶೈಲಿ ನನಗೆ ಸ್ಫೂರ್ತಿ ಅಂತಾ ಎಂದು ಚಿತ್ರ ತಂಡಕ್ಕೆ ಶುಭ ಹಾರೈಸಿದ್ರು.

ಇನ್ನು, ಕಾರ್ಯಕ್ರಮದಲ್ಲಿ ಚಿತ್ರದ ಯಶಸ್ಸಿಗೆ ಕಾರಣರಾದ, ನಟ ಶರಣ್, ನಟಿ ಆಶಿಕಾ ರಂಗನಾಥ್, ನಿರ್ದೇಶಕ ಅನಿಲ್ ಕುಮಾರ್, ಕ್ರಿಯೇಟಿವ್​ ಹೆಡ್ ತರುಣ್ ಸುಧೀರ್, ಹಾಸ್ಯ ನಟ ಚಿಕ್ಕಣ್ಣ ಹಾಗೂ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ ಭೂಷಣ್, ಹಾಡನ್ನ ಬರೆದ ಶಿವು ಬೇರ್ಗಿ, ಹಾಡನ್ನ ಉತ್ತರ ಕರ್ನಾಟಕದ ಶೈಲಿಯಲ್ಲಿ ಹಾಡಿದ ರವೀಂದ್ರ ಸೊರಾಗಾವಿ, ಶಮಿತಾ ಮಾಲ್ನಾಡ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ ಇಡೀ ತಂಡಕ್ಕೆ ಶ್ರೀಮುರಳಿ ಅವರು ನೆನಪಿನ ಕಾಣಿಕೆ ಕೊಡುವ ಮೂಲಕ ಈ ಹಾಡಿನ ಸಕ್ಸಸ್​ನ್ನ ಸೆಲೆಬ್ರೆಟ್ ಮಾಡಿದ್ರು.

ನೆನಪಿನ ಕಾಣಿಕೆ ಪಡೆದ ಬಳಿಕ ಮಾತನಾಡಿದ ಶರಣ್, ನನ್ನ ಸಿನಿಮಾ ಕರಿಯರ್​ನಲ್ಲಿ ಹಲವು ಪ್ರಶಸ್ತಿ ಹಾಗೂ ಯಶಸ್ಸುಗಳನ್ನು ನೋಡಿದ್ದೀನಿ. ಆದರೆ, ಈ ಸಕ್ಸಸ್ ಒಂದೇ ಬಾರಿ ಬರೋದು ಎಂದು ಸಂತಸ ವ್ಯಕ್ತಪಡಿಸಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.