ETV Bharat / city

ಬೆಳ್ಳಂದೂರಿನ ರಾಜಕಾಲುವೆಗೆ ಬಿದ್ದ ಮಗು: ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಮಹಾನಗರದ ಬೆಳ್ಳಂದೂರಿನ ಕರಿಯಮ್ಮನಗರದಲ್ಲಿರುವ ರಾಜಕಾಲುವೆಗೆ ಪುಟ್ಟ ಬಾಲಕಿಯೊಬ್ಬಳು ಬಿದ್ದಿದ್ದು, 25 ಜನರ ಅಗ್ನಿಶಾಮಕ ದಳ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ರಾಜಕಾಲುವೆ ನೀರು ವೇಗವಾಗಿ ಹರಿಯುತ್ತಿದ್ದು, ನೂರು ಮೀಟರ್​ಗೂ ಹೆಚ್ಚು ದೂರ ಬಾಲಕಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

author img

By

Published : Jul 10, 2020, 7:01 PM IST

child-fell-into-bellanduru-rajakaluve
ರಾಜಕಾಲುವೆಗೆ ಬಿದ್ದ ಮಗು

ಬೆಂಗಳೂರು: ನಗರದ ಬೆಳ್ಳಂದೂರಿನ ಕರಿಯಮ್ಮನಗರದಲ್ಲಿ ರಾಜಕಾಲುವೆಗೆ ಮಲ್ಲಿಕಾ ಎಂಬ ಹೆಸರಿನ ಮಗು ಬಿದ್ದಿದ್ದು, ರಾಜಕಾಲುವೆಯಲ್ಲಿ ನೂರು ಮೀಟರ್​ಗೂ ಹೆಚ್ಚು ದೂರ ಕೊಚ್ಚಿ ಹೋಗಿರುವ ಶಂಕೆ ಇದೆ.

ಬೆಳ್ಳಂದೂರಿನ ರಾಜಕಾಲುವೆಗೆ ಬಿದ್ದ ಮಗುವಿನ ರಕ್ಷಣಾ ಕಾರ್ಯಾಚರಣೆ

ನೀರಿನ ಮೇಲ್ಭಾಗದಲ್ಲಿ ಕಸ, ಹುಲ್ಲು ಇರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ರಾಜಕಾಲುವೆಯಲ್ಲಿ ನೀರು ವೇಗವಾಗಿ ಹರಿಯುತ್ತಿದ್ದು, ಸರ್ಜಾಪುರ ಮತ್ತು ಮಹದೇವಪುರ ಅಗ್ನಿಶಾಮಕ ದಳ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

25 ಜನರ ಅಗ್ನಿಶಾಮಕ ದಳ ತಂಡದವರಿಂದ ಬೋಟ್ ಮೂಲಕ ಮಗುವಿನ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು ಆಗಮಿಸಿದ್ದಾರೆ. ಪೊಲೀಸರು ಅಗ್ನಿಶಾಮಕ ತಂಡಕ್ಕೆ ಅಗತ್ಯ ನೆರವು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.