ETV Bharat / city

ಚೆಲೇಶನ್ ಔಷಧಿ ಕೊರತೆ.. ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - chelation medicine,

ಥಲಸ್ಸೆಮಿಯಾ ಎಂಬುದು ರಕ್ತ ಪರಿಚಲನೆ ಸಮಸ್ಯೆಯಿಂದ ಉಂಟಾಗುವ ಅಂಗವೈಕಲ್ಯವಾಗಿದ್ದು, ಇದಕ್ಕೆ ಅಗತ್ಯವಾಗಿ ಬೇಕಿರುವ 'ಚೆಲೇಶನ್' ಎಂಬ ಔಷಧ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದೆ ರೋಗಿಗಳು ಪರದಾಡುವಂತಾಗಿದೆ. ಈ ಕುರಿತಂತೆ ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್​ ನೀಡಿದೆ.

High Court
ಹೈಕೋರ್ಟ್
author img

By

Published : Sep 22, 2021, 4:56 PM IST

ಬೆಂಗಳೂರು: ಥಲಸ್ಸೆಮಿಯಾ ರೋಗಿಗಳಿಗೆ ಜೀವ ರಕ್ಷಕವಾಗಿರುವ ಚೆಲೇಶನ್ ಔಷಧಿ ಕೊರತೆಯಾಗಿರುವ ಕುರಿತು ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಥಲಸ್ಸೆಮಿಯಾ ಎಂಬುದು ರಕ್ತ ಪರಿಚಲನೆ ಸಮಸ್ಯೆಯಿಂದಾಗುವ ಅಂಗವೈಕಲ್ಯ ಸಮಸ್ಯೆ. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಚೆಲೇಶನ್ ಔಷಧಿ ಅತ್ಯಗತ್ಯವಾಗಿದೆ. ಈ ಔಷಧಿ ಸರ್ಕಾರಿ ಆಸ್ಪತ್ರೆಯಲ್ಲಿ ಪೂರೈಕೆ ಇಲ್ಲ. ಇದರಿಂದಾಗಿ ರೋಗಿಗಳು ಪರದಾಡುವಂತಾಗಿದೆ.

ರೋಗಕ್ಕೆ ತುತ್ತಾದವರು ಪದೇ ಪದೇ ರಕ್ತ ಬದಲಾವಣೆ ಮಾಡಬೇಕಿರುತ್ತದೆ. ಪುನರಾವರ್ತಿತ ರಕ್ತ ಬದಲಾವಣೆಯಿಂದ ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚುತ್ತದೆ. ಈ ಹೆಚ್ಚುವರಿ ಕಬ್ಬಿಣದ ಅಂಶವನ್ನು ಚೆಲೇಶನ್ ಔಷಧಿ ಹೊರಹಾಕುತ್ತದೆ. ಆದರೆ, ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಔಷಧಿ ಪೂರೈಕೆ ಇಲ್ಲವಾಗಿದ್ದು, ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯದಲ್ಲಿ ಈ ಕಾಯಿಲೆಗೆ ತುತ್ತಾಗಿರುವ 17 ಸಾವಿರ ರೋಗಿಗಳಿದ್ದಾರೆ. ಮಾರುಕಟ್ಟೆಯಲ್ಲಿ ಔಷಧಿಯ ಬೆಲೆ ಒಂದು ಸಾವಿರದಿಂದ ಒಂದೂವರೆ ಸಾವಿರದವರೆಗೆ ಇದೆ. ಹೀಗಾಗಿ, ಔಷಧಿ ಸಿಗದೆ ತೀವ್ರ ತೊಂದರೆ ಎದುರಿಸುತ್ತಿರುವ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಔಷಧಿ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.